ಜೀವನ ರೂಪಿಸಿಕೊಳ್ಳುವಲ್ಲಿ ಯುವಜನತೆ ವಿಫಲ
ಮೈಸೂರು: ಇಂದಿನ ಯುವಜನತೆ ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಮೈಸೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಕೆ. ಕಾಳಚನ್ನೇಗೌಡ ಹೇಳಿದರು.
ಮಹಾರಾಜ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 2013- 14ನೇ ಸಾಲಿನ ಎನ್‌ಎಸ್‌ಎಸ್ ದೈನಂದಿನ ಚಟುವಟಿಕೆಗಳ ಸಮಾರೋಪದಲ್ಲಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿನ ಅಂಕ ಗಳಿಕೆಗಾಗಿ ಮಾತ್ರವೇ ಹೆಚ್ಚಿನ ಮಹತ್ವ ನೀಡುತ್ತಿರುವ ವಿದ್ಯಾರ್ಥಿಗಳು ತಂದೆ, ತಾಯಂದಿರ ಆಶಯವನ್ನು ಈಡೇರಿಸುವಲ್ಲಿಯೂ ಉತ್ತಮ ಪ್ರಜೆಗಳಾಗಬೇಕು. ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತರಗತಿಯ ಪಠ್ಯ ಕಲಿಕೆಯ ಆಸಕ್ತಿ ಜತೆಗೆ ವಿಶೇಷವಾಗಿ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ವಹಿಸಬೇಕು ಎಂದರು.
ನಮ್ಮ ದೇಶದಲ್ಲಿ ಸಾಧನೆ ಮಾಡಿರುವ ಮಹನೀಯರು ಸಾಮಾನ್ಯ ಕುಟುಂಬ ಹಾಗೂ ಬಡತನದಿಂದ ಬಂದವರು ಎಂಬುದನ್ನು ಗಮನಿಸಬೇಕು. ತಮ್ಮ ಗುರಿ ಸಾಧಿಸಬೇಕಾದರೆ ಶ್ರದ್ಧೆ ಹಾಗೂ ಪರಿಶ್ರಮ ಅವಶ್ಯಕ. ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಉತ್ತಮ ಜೀವನ ಸಾಧ್ಯ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಅಭ್ಯರ್ಥಿಗಳು ಮೊದಲು ತಮ್ಮ ಸುತ್ತಮುತ್ತ ಇರುವ ಪರಿಸರದ ಸ್ವಚ್ಛತೆಗೆ ಗಮನ ಹರಿಸಬೇಕು. ಕೇವಲ ಗ್ರಾಮಗಳಿಗೆ ಹೋಗಿ ಸ್ವಚ್ಛತೆ ಮಾಡಿದರೆ ಸಾಲದು. ಕಾಲೇಜು ಹಾಗೂ ತರಗತಿಯ ಆವರಣದಲ್ಲಿ ಕಂಡು ಬರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹಾಗೂ ಅನೈರ್ಮಲ್ಯ ವಾತಾವರಣ ಹೋಗಲಾಡಿಸಲು ಕೈಜೋಡಿಸಬೇಕು ಆಗ ಸೇವೆಯು ಸಾರ್ಥಕವಾಗಲಿದೆ ಎಂದರು.
ಕಾಲೇಜಿನ ಸ್ನಾತಕ ಗ್ರಂಥಾಲಯದ ಉಪಗ್ರಂಥಪಾಲಕ ಆರ್.ಕೆ. ಸೋಮಶೇಖರ್ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಡಾ.ಬಿ. ನಾಗರಾಜಮೂರ್ತಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಶ್ರೀಕಂಠ ಇದ್ದರು. ಮತ್ತೊಬ್ಬ ಕಾರ್ಯಕ್ರಮಾಧಿಕಾರಿ ಡಾ. ಷಹಸೀನಾ ಬೇಗಂ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

