ನಾರಾಯಣ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ
ಮೈಸೂರು: ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಹೃದಯ ಸಂಬಂಧಿ ಕಾಯಿಲೆಯಿದ್ದ ಯುವತಿಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಹೃತ್ಕರ್ಣಗಳ ಜನನ ದೋಷದಿಂದ ಹಾಗೂ ಟೆಕಸ್ಟ್ರೋಕಾರ್ಡಿಯಾ ಮತ್ತು ಸಿಟಿಸ್ ಇನ್ವರ್ಸಸ್ ಟೋಟಾಲಿಸ್ನಂತಹ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಗುಂಡ್ಲುಪೇಟೆಯ ಜಯಮ್ಮಣ್ಣಿ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ಈ ಕ್ರಮ ಅನುರಿಸಲಾಗಿದೆ ಎಂದು ಆಸ್ಪತ್ರೆ ತಜ್ಞವೈದ್ಯ ಡಾ.ಎಂ.ಎನ್. ರವಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂತಹ ಸಮಸ್ಯೆಯು ಮಗು ಹುಟ್ಟಿದಾಗಿನಿಂದಲೇ ಬರಲಿದ್ದು, ಪ್ರತಿ 12 ಸಾವಿರ ಮಂದಿಗೆ ಒಬ್ಬರಿಗೆ ಇಂತಹ ತೊಂದರೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಜಯಮ್ಮಣ್ಣಿ ಅವರ ಹೃದಯದ ಕವಾಟಗಳು ವಿರುದ್ಧ ದಿಕ್ಕಿನಲ್ಲಿ ಇರುವುದು ವಿಶೇಷ. ಹೃದಯದಲ್ಲಿ ರಂಧ್ರವಿದ್ದ ಕಾರಣ ತಪಾಸಣೆ ಮಾಡಿದ ವೇಳೆ ಇದು ಬೆಳಕಿಗೆ ಬಂದಿದೆ. ಇದರಿಂದ ಜೀವಕ್ಕೆ ಮುಂದೆ ಯಾವುದೇ ರೀತಿಯ ತೊಂದರೆಯಿಲ್ಲ. ಸಾಮಾನ್ಯರಂತೆ ಸಹಜ ಬದುಕು ನಡೆಸಬಹುದಾಗಿದೆ ಎಂದರು. ಈ ಚಿಕಿತ್ಸೆಗೆ ಸುಮಾರು 1.5 ಲಕ್ಷ ಖರ್ಚಾಗಲಿದೆ. ಆದರೆ ವಾಜಪೇಯಿ ಹಾಗೂ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿ ಫಲಾನುಭವಿಗಳಿಗೆ ಯಾವುದೇ ಖರ್ಚಿಲ್ಲದೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಇರುವುದರಿಂದ ಇಂತಹ ಅಪರೂಪದ ಚಿಕಿತ್ಸೆ ಸಾಧ್ಯವಾಯಿತು ಎಂದು ಅವರು ತಿಳಿಸಿದರು. ರೋಗಿ ಜಯಮ್ಮಣ್ಣಿ, ಆಸ್ಪತ್ರೆಯ ಸೇವಾ ವಿಭಾಗದ ನಿರ್ದೇಶಕ ಕೆ.ಎಸ್. ದತ್ತಾತ್ರೇಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

