ಮೈಸೂರು

ಸಿ.ಪಿ. ಕೃಷ್ಣಕುಮಾರ್ ಲೇಖನಿ ಸದಾ ಜಾಗೃತ

Published On :

ಮೈಸೂರು: ಕನ್ನಡ ಸಾಹಿತ್ಯಕ್ಕೆ ಅಗಾಧ ಕೊಡುಗೆ ನೀಡಿರುವ ಸಿಪಿಕೆ ಅವರ ಲೇಖನಿ ನಿದ್ರಿಸುವುದಿಲ್ಲ ಎಂದೆನಿಸುತ್ತದೆ. ಸದಾ ಜಾಗೃತ ಮನಸ್ಸುಳ್ಳ ಸಿಪಿಕೆ ಧ್ಯಾನಸ್ಥ ನಿದ್ರೆ ಮಾಡುತ್ತಾರೆ ಎಂದು ವಿಮರ್ಶಕ ಜ.ಹೊ. ನಾರಾಯಣಸ್ವಾಮಿ ಹೇಳಿದರು.
ಕೌಸ್ತುಭ ಪ್ರಕಾಶನ ಹಾಗೂ ಕೌಸ್ತುಭ ಕನ್ನಡ ಮಾಸ ಪತ್ರಿಕೆ ಸಂಯುಕ್ತವಾಗಿ ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಚುಟುಕುರತ್ನ ಡಾ. ಸಿಪಿಕೆ 75ರ ಸಂಭ್ರಮ ಕಾರ್ಯಕ್ರಮದಲ್ಲಿ ರತ್ನ ಹಾಲಪ್ಪಗೌಡ ಸಂಪಾದಿಸಿರುವ ಚುಟುಕು ಚಿಂತನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎತ್ತರದ ನೋಟ ಉಳ್ಳವರು: ಇಷ್ಟು ವರ್ಷಗಳ ಕಾಲ ಸಾಹಿತ್ಯ ಸೇವೆ ಮಾಡುತ್ತಾ ಬಂದಿರುವ ಸಿಪಿಕೆ ಸೀ ಪೀಕ್ (ಎತ್ತರದ ನೋಟ) ಉಳ್ಳವರಾಗಿದ್ದಾರೆ. ಯಾರಿಂದಲೂ ಏನನ್ನು ಬಯಸಿದವರಲ್ಲ. ಅವರ ಅಂತರ್ ದೃಷ್ಟಿಯ ಚುಟುಕುಗಳು ನಮ್ಮನ್ನು ಸೆಳೆಯುತ್ತವೆ. ದುರಂತ ಎಂದರೆ, ಯಾರೂ ಅವರ ಸಾಹಿತ್ಯ ಕೃತಿಗಳನ್ನು ವಿಮರ್ಶೆ ಮಾಡಲಿಲ್ಲ. ಈಗ ಬಿಡುಗಡೆ ಮಾಡಿದ ಚುಟುಕು ಚಿಂತನ ಕೃತಿಯು ವಿಮರ್ಶ ಪ್ರಕಾರದಲ್ಲಿ ಆಳವಾದ ಮೀಮಾಂಸೆ ಕೃತಿಯಾಗಿದೆ ಎಂದರು.
ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ಸಾಹಿತ್ಯ ದೃಷ್ಟಿಯಿಂದ ನೋಡಿದರೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಹಾಗೂ ಡಾ. ಸಿಪಿಕೆ ನನೆಪಿನ ಶಕ್ತಿ ಒಂದೇ ಆಗಿದೆ. ಸಿಪಿಕೆ ಅವರನ್ನು ಪಾಪು ಜತೆಗೆ ಹೋಲಿಸಿದರೆ ಪಾಪು ನನಗೆ ಬೈಯ್ಯುವುದಿಲ್ಲ ಎಂಬ ನಂಬಿಕೆ ಇದೆ. ಪಾಪು ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವ ಗುಣವುಳ್ಳವರು. ಸಿಪಿಕೆ ಹೇಳಬೇಕಾದದ್ದನ್ನು ಸ್ಪಷ್ಟ, ನಿಖರವಾಗಿ ಹೇಳುತ್ತಾರೆ ಎಂದರು.
ಹೊಸಮಠದ ಚಿದಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ರತ್ನ ಹಾಲಪ್ಪಗೌಡ, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಡಾ.ಸಿ. ನಾಗಣ್ಣ, ವೈದ್ಯ ವಾರ್ತಾ ಪ್ರಕಾಶನದ ನಿರ್ದೇಶಕ ಡಾ.ಎಂ.ಜಿ.ಆರ್. ಅರಸ್, ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ವೈ.ಇ. ದೇವರಾಜ್‌ಗೌಡ ಇದ್ದರು. ಅನಸೂಯ ಕೆಂಪನಹಳ್ಳಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.