ಕಿರುತೆರೆ ಕಲಾವಿದರ ರಂಗಯಾತ್ರೆ ಸಂಪನ್ನ
ಕ.ಪ್ರ.ವಾರ್ತೆ ಮೈಸೂರು ಏ. 14
ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಗತ್ಯತೆ ಹಾಗೂ ಮೋದಿ ಪ್ರಧಾನಿ ಆಗಬೇಕಾದ ಅನಿವಾರ್ಯತೆ ಕುರಿತು ಕಿರುತೆರೆ ಕಲಾವಿದರು ಆರಂಭಿಸಿದ್ದ ರಂಗಯಾತ್ರೆ ಸೋಮವಾರ ಅಂತ್ಯಗೊಂಡಿತು ಎಂದು ಬಿಜೆಪಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.
ರಾಜ್ಯದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಕಲಾವಿದರು ಗ್ರಾಮೀಣ ಭಾಗದ ಜನರನ್ನು ಭೇಟಿಯಾಗಿ ಬಿಜೆಪಿ ಸರ್ಕಾರದ ಅಗತ್ಯತೆ ಕುರಿತು ವಿವರಿಸಿದ್ದೇವೆ.
ಇಂದು ಮೈಸೂರಿನಲ್ಲಿ ಈ ನಮ್ಮ ರಂಗಯಾತ್ರೆ ಅಂತ್ಯಗೊಂಡಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ತಮ್ಮ ಭಾಷಣವೊಂದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನೂ ಅಭಿವೃದ್ಧಿಪಡಿಸಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಿರುತೆರೆ ಕಲಾವಿದರು ಈ ಯಾತ್ರೆ ನಡೆಸಿದ್ದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನೇಕ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರಬಲರು ಮತ್ತು ಒಂದು ಮಾಫಿಯಾ ಉಳ್ಳವರು ತಮಗೆ ಬೇಕಾದ ಕಲಾವಿದರಿಗೆ ಮಾತ್ರ ಅವಕಾಶ ನೀಡುತ್ತಾರೆ ಎಂದು ಹಲವರಿಗೆ ಅನ್ನಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಮೋದಿ ಅಲೆ ಇಲ್ಲ ಎನ್ನುತ್ತಿದ್ದಾರೆ. ಅದು ಯಾರಿಗೂ ತಿಳಿಯುವುದಿಲ್ಲ. ಅನುಭವಿಸಿದಾಗಲೆ ಗೊತ್ತಾಗುವುದು ಎಂದರು.
ಲಕ್ಷ್ಮಣ್ಗೆ ಎಚ್ಚರಿಕೆ
ಪ್ರತಾಪ್ಸಿಂಹ ಗೌಡರೋ ಅಲ್ಲವೋ ಎಂಬುದನ್ನು ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ್ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡರನ್ನು ಕೇಳಿ ತಿಳಿಯಲಿ. ಸೋಲುವ ಭೀತಿಯಿಂದ ಸಲ್ಲದ ಹೇಳಿಕೆ ನೀಡುತ್ತಿರುವ ಲಕ್ಷ್ಮಣ್ಗೆ ಬೇರೆಯವರ ಜಾತಿ ಪ್ರಶ್ನಿಸುವ ಅಧಿಕಾರ ನೀಡಿದ್ದು ಯಾರು ಒಕ್ಕಲಿಗರ ಬಗ್ಗೆ ಮತ್ತೊಮ್ಮೆ ಸಲ್ಲದ ಹೇಳಿಕೆ ನೀಡಬಾರದು ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್ ಎಚ್ಚರಿಸಿದರು. ಸ್ನೇಹ, ಸಂದೀಪ್, ಡಿ.ಎಸ್. ಸಿಂಧೆ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

