ರಾಮ್ದೇವ್ ಗಡಿಪಾರಿಗೆ ಆಗ್ರಹ
ಕ.ಪ್ರ.ವಾರ್ತೆ ಟಿ.ನರಸೀಪುರ ಏ. 28
ಆಡಿರುವ ಕೆಟ್ಟ ಮಾತಿಗೆ ಕ್ಷಮಾಪಣೆ ಕೇಳಲು ಬಾಬಾ ರಾಮ್ದೇವ್ ಅರ್ಹತೆ ಇಲ್ಲದ್ದರಿಂದ ಅವರನ್ನು ಕೇಂದ್ರ ಸರ್ಕಾರ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಿವಕುಮಾರ್ ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ನಡೆದ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಕೋಟ್ಯಂತರ ದಲಿತ ಸಮುದಾಯಗಳ ಮಹಿಳೆಯರ ಆತ್ಮಗೌರವಕ್ಕೆ ಚ್ಯುತಿ ತರುವಂತೆ ಮಾತನಾಡುವ ಮೂಲಕ ಬಾಬಾ ರಾಮ್ದೇವ್ ಕೋಮುವಾದಿಗಳ ನಿಜ ಬಣ್ಣವನ್ನು ಬಯಲು ಮಾಡಿದ್ದಾನೆ. ಹೆಣ್ಣಿನ ಬಗ್ಗೆ ಕನಿಷ್ಠ ಗೌರವವೂ ಇಲ್ಲದ ಆತನನ್ನು ಕೂಡಲೇ ಗಡಿಪಾರು ಮಾಡಲು ರಾಷ್ಟ್ರಪತಿಗೆ ಕೇಂದ್ರ ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ರಾಮ್ದೇವ್ ಯೋಗಗುರುವಲ್ಲ, ಅವರೊಬ್ಬ ಬೋಗಗುರು. ದಲಿತ ಮಹಿಳೆಯರನ್ನು ಅಪಮಾನಿಸಿರುವುದನ್ನು ಖಂಡಿಸಿ ಏ.30 ರಂದು ಪಟ್ಟಣದಲ್ಲಿ ಬಾಬಾ ರಾಮ್ದೇವ್ ಪ್ರತಿಕೃತಿ ದಹನ ಮತ್ತು ಮೇಲು ಕೀಳಿನ ಸಿದ್ಧಾಂತದ ಮನುಸ್ಮೃತಿಯ ಭಸ್ಮ ಮಾಡಲು ದಲಿತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11.30ಕ್ಕೆ ಹಳೇ ತಿರುಮಕೂಡಲು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ದಸಂಸ ತಾಲೂಕು ಸಂಚಾಲಕರಾದ ರಾಜು, ಸೋಮಣ್ಣ, ಸಂಘಟನಾ ಸಂಚಾಲಕ ಸುರೇಶ್, ಮಹದೇವಯ್ಯ, ಸೋಮಶೇಖರ್, ವಕೀಲರಾದ ಎಸ್.ಜಗದೀಶ್, ಟಿ.ಎಸ್. ಸಿದ್ದರಾಜು, ಮುಖಂಡರಾದ ರಾಜಶೇಖರ, ಪ್ರಕಾಶ, ಕುಮಾರ, ಎಸ್.ಎಂ. ದೇವರಾಜು, ಎಂ.ಮಲ್ಲಯ್ಯ, ಶಿವಣ್ಣ, ಮಾದ, ಸೋಮ, ಕಾಂತರಾಜು, ಮನೋಜ್, ನಾಗರಾಜು, ಸಿದ್ದರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

