ಕಚೇರಿಗೆ ಬಾರದ ಪಿಡಿಒ
ಕ.ಪ್ರ.ವಾರ್ತೆ ಭೇರ್ಯ ಏ. 29
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಮೂರು ತಿಂಗಳಿಂದ ಪಿಡಿಒ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಗ್ರಾಪಂ ಸದಸ್ಯ ಬಿ.ಎಚ್. ಮಹದೇವು ದೂರಿದರು.
ಜನರು ಗ್ರಾಪಂ ಸದಸ್ಯರನ್ನು ರಸ್ತೆಯಲ್ಲಿ ಎಳೆದಾಡುವ ಪರಿಸ್ಥಿತಿ ಇದ್ದು, ಸದಸ್ಯರು ತಲೆಮರೆಸಿಕೊಂಡು ಓಡಾಡುವ ಸ್ಥಿತಿ ಬಂದಿದೆ. ಮಂಗಳವಾರ ಬೆಳಗ್ಗೆ ಕೆಲವು ಗ್ರಾಮಸ್ಥರು ಪಂಚಾಯಿತಿಗೆ ಬಂದಿದ್ದ ವೇಳೆಯಲ್ಲಿ ಈ ದಿನವು ಪಿಡಿಒ ಇಲ್ಲದಿರುವುದನ್ನು ಗಮನಿಸಿ, ಪ್ರತಿನಿತ್ಯ ಪಂಚಾಯಿತಿಗೆ ಬಂದರೂ ಪಿಡಿಒ ಮಾತ್ರ ಬರುತ್ತಿಲ್ಲ. ಅಲ್ಲೆ ಇದ್ದ ಗ್ರಾಪಂ ಸದಸ್ಯರಾದ ಬಿ.ಎಚ್. ಮಹದೇವು ಹಾಗೂ ಚೆಲುವಯ್ಯರನ್ನು ಪ್ರಶ್ನಿಸಿ, ಸದಸ್ಯರಾದ ನೀವು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಭೇರ್ಯ, ಮಂಡಿಗನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ನೀರಿನ ಸಮಸ್ಯೆ ಬಗೆಹರಿಸಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಸದಸ್ಯರಾದ ಬಿ.ಎಚ್. ಮಹದೇವು ಹಾಗೂ ಚೆಲುವಯ್ಯ ಗ್ರಾಮಸ್ಥರನ್ನು ಸಮಾಧಾನಪಡಿಸಿ, ಕಳೆದ ಮೂರು ತಿಂಗಳಿಂದ ಪಿಡಿಒ ಸರಿಯಾಗಿ ಪಂಚಾಯಿತಿಗೆ ಬರುತ್ತಿಲ್ಲ. ಕಳೆದ ತಿಂಗಳು ಹೊಸ ಪಿಡಿಒ ಅವರನ್ನು ಸರ್ಕಾರದಿಂದಲೇ ನೇಮಕ ಮಾಡಲಾಗಿದ್ದು, ಅವರು ಎರಡು ದಿನ ಪಂಚಾಯಿತಿಗೆ ಬಂದು ನಂತರ ಭೇರ್ಯ ದೊಡ್ಡ ಪಂಚಾಯಿತಿಗೆ ನನ್ನ ಕೈಯಲ್ಲಿ ನಿಭಾಯಿಸಲು ಆಗುವುದಿಲ್ಲ ಎಂದು ಪತ್ರ ಬರೆದು ಹೋಗಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ತಾಪಂ ಮತ್ತು ಜಿಪಂ ಸಿಇಒಗಳಿಗೆ ತಿಳಿಸಲಾಗಿದ್ದು, ಎರಡು ದಿನಗಳಲ್ಲಿ ಪಿಡಿಒ ನೇಮಿಸಿ ಗ್ರಾಮದ ಸಮಸ್ಯೆ ಮತ್ತು ಆಶ್ರಯ ಮನೆಗಳ ಬಿಲ್ ಹಣ ನೀಡದಿದ್ದರೆ ಗ್ರಾಪಂ ಕಚೇರಿಗೆ ಬೀಗ ಜಡಿದು ಅಧ್ಯಕ್ಷರು, ಸದಸ್ಯರು ಜನರು ಜೊತೆ ತಾಪಂ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಮಂಡಿಗನಹಳ್ಳಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಚಂದ್ರೇಗೌಡ, ಕಾಂಗ್ರೆಸ್ ಯುವ ಮುಖಂಡ ಬಿ.ಟಿ. ಮೋಹನ್, ಗ್ರಾಮಸ್ಥರಾದ ನಾಗಶೆಟ್ಟಿ, ಗೋವಿಂದ, ಶಂಭು, ಶಿವಣ್ಣ ಮತ್ತು ಮಹಿಳೆಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

