ಅಧಿಕಾರಿಗಳ ವಿರುದ್ಧ ಕೊಳೆಗೇರಿ ನಿವಾಸಿಗಳ ಧರಣಿ
ಮೈಸೂರು: ಅಧಿಕಾರಿಗಳಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಅಭಿವೃದ್ಧಿ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಕೊಳಚೆ ಪ್ರದೇಶ ನಿವಾಸಿಗಳ ಕುಂದುಕೊರತೆ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರೇಲ್ವೆ ಹಳಿ ನಿರ್ಮಾಣಕ್ಕಾಗಿ ಕೊಳಚೆ ಪ್ರದೇಶದ 124 ಗುಡಿಸಲುಗಳನ್ನು 10 ವರ್ಷ ತೆರವುಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟಿಸಿದಾಗ ಆಗಿನ ಜಿಲ್ಲಾಧಿಕಾರಿಯವರು 124 ಕುಟುಂಬಗಳಿಗೆ ಆಶ್ರಯ ಮನೆ ನೀಡುವುದಾಗಿ ಭರವಸೆ ನೀಡಿದರು. ಇದಕ್ಕಾಗಿ 8 ರಿಂದ 10 ಸಾವಿರ ಡಿಡಿ ನೀಡಿದೆವು. ಆದರೆ, ಈವರೆಗೂ ನಿವೇಶನ, ಮನೆ ನೀಡಿಲ್ಲ. ಆಶ್ರಯ ಯೋಜನೆಗೆ ಜಮೀನು ನೀಡುವಂತೆ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಆದರೆ, ಈವರೆಗೂ ಜಮೀನು ನೀಡಿಲ್ಲ ಎಂದು ಆರೋಪಿಸಿದರು.
ಗೋಕುಲಂ ಬಡಾವಣೆ ಚಂದ್ರಬಾನ್ ತೋಟದ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿದ್ದು, ಹಲವಾರು ಗುಡಿಸಲುಗಳನ್ನು ತಹಸೀಲ್ದಾರ್ ತೆರವುಗೊಳಿಸಿದ್ದಾರೆ. ಆ ಗುಡಿಸಲು ನಿವಾಸಿಗಳಿಗೆ ಸರ್ಕಾರಿ ಯೋಜನೆಯಡಿ ಮನೆ ಮಂಜೂರು ಮಾಡಲು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು. ಮನೆ ಮಂಜೂರು ಮಾಡುವವರೆಗೂ ಗುಡಿಸಲು ತೆರವುಗೊಳಿಸಿರುವ ಜಾಗದಲ್ಲಿ ವಾಸಿಸಲು ಸರ್ಕಾರ ಅವಕಾಶ ನೀಡಬೇಕು. ಗುಡಿಸಲು ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಯವರು ಈಗಿರುವ ಜಾಗದಲ್ಲಿ ಮನೆ ಕಟ್ಟಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕೊಳೆಗೇರಿ ನಿವಾಸಿಗಳ ಕುಂದುಕೊರತೆ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಕೊಳೆಗೇರಿ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಜೆ.ರಾಬರ್ಟ್, ಕಾರ್ಯದರ್ಶಿ ಡಿ.ವಿ. ಸಿದ್ದರಾಜು, ಸಂಚಾಲಕ ಎಂ.ಪರಶುರಾಮ್, ಮುಖಂಡರಾದ ಸೋಮಶೇಖರ್, ಚೌಡಪ್ಪ, ಸುಮತಿ, ಮಂಜುಳಾ, ಕಾವೇರಿ ಬಾಬು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

