ನಾಳೆಯಿಂದ ಎಲ್ಲಮ್ಮಾಂಬ 67ನೇ ಜಾತ್ರಾ ಮಹೋತ್ಸವ
ಮೈಸೂರು: ನಗರದ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀ ಎಲ್ಲಮ್ಮಾಂಬ ಚಂದ್ರಗುಪ್ತಾಂಬ ದೇವಿಯ 67ನೇ ಜಾತ್ರಾ ಮಹೋತ್ಸವವು ಫೆ.12ರಿಂದ 16ರವರೆಗೆ ನೆರವೇರಲಿದೆ.
12ರ ಬೆಳಗ್ಗೆ ಶ್ರೀನಿವಾಸ ದೇವಸ್ಥಾನದಿಂದ ಕಳಶದ ಪೂಜೆ ಮೆರವಣಿಗೆಯೊಂದಿಗೆ ಕಳಶ ಸ್ಥಾಪನೆಯಾಗಲಿದೆ. ನಂತರ ವಿಶೇಷ ಪೂಜೆ, ಪ್ರಸಾದ ವಿನಿಯೋಗವಿದೆ. ಸಂಜೆ ಸಿರಿದೇವಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 13ರ ಬೆಳಗ್ಗೆ ಹೋಮಗಳು, ಸಂಜೆ ರಂಜನಿ ಸಂಗೀತ ಕಲಾತಂಡದಿಂದ ಸಂಗೀತ ಕಾರ್ಯಕ್ರಮ. 14ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ. ಸಂಜೆ 5.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ, ನಂತರ ರಾತ್ರಿ ದೇವಸ್ಥಾನದಲ್ಲಿ ಉಯ್ಯಾಲೋತ್ಸವ. 15ರ ಬೆಳಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣಪೂಜೆ, ಸಂಜೆ ಸಂಗೀತ ಕಾರ್ಯಕ್ರಮ. 16ರ ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ರಾತ್ರಿ 7ಕ್ಕೆ ದೇವಿಯನ್ನು ಉಯ್ಯಾಲೆಯಿಂದ ಇಳಿಸಿ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಾಗಲಿದೆ.
ನಾಳೆ ಕೆನರಾ ಬ್ಯಾಂಕ್ನಿಂದ ಆರ್ಥಿಕ ಮೇಳ
ಮೈಸೂರು: ಕೆನರಾ ಬ್ಯಾಂಕ್ ವತಿಯಿಂದ ಫೆ.12ರಂದು ನಜರ್ಬಾದ್ನಲ್ಲಿರುವ ಪ್ರಧಾನ ಕಚೇರಿಯಲ್ಲಿ ಆರ್ಥಿಕ ಮೇಳವನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಕೆನರಾ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಮೈಥಿಲಿ ಕೃಷ್ಣಮೂರ್ತಿ ಉದ್ಘಾಟಿಸಲಿದ್ದು, ಉಪಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರ್ಥಿಕ ಮೇಳ ಏರ್ಪಡಿಸಿದ್ದು, ಬ್ಯಾಂಕಿನ ವಿಶೇಷ ಸೇವೆಗಳು, ಜೀವ ವಿಮೆ, ಆರೋಗ್ಯ ವಿಮೆ, ಅಜೀವ ವಿಮೆ, ಮ್ಯೂಚ್ವಲ್ ಫಂಡ್ ಹೂಡಿಕೆಗಳು, ನೇರ ಷೇರು ವ್ಯವಹಾರ ಸೌಕರ್ಯ, ಭಾರತ ಸರ್ಕಾರದ ಸ್ವಾವಲಂಬನ ಪಿಂಚಣಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳು, ನೇರ ಹಾಗು ಪರೋಕ್ಷ ತೆರಿಗೆ ಸಂಗ್ರಹ, ಇ- ಛಾಪ ಕಾಗದ ಸೌಕರ್ಯಗಳು ಸೇರಿದಂತೆ ಇನ್ನೂ ಅನೇಕ ಸೇವೆಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

