ಮಾನವೀಯತೆ ಪ್ರತಿಪಾದಿಸಿದ ಕವಿ ಜಿಎಸ್ಎಸ್: ಛಾಯಾಪತಿ
ಸಾಲಿಗ್ರಾಮ: ಜಿಎಸ್ಎಸ್ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೆ ಸಮಾಜದ ಅಂಕು-ಡೊಂಕು, ಜನರ ಭಾವನೆಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಚಿಂತಿಸಿ, ಕಾವ್ಯದ ಮೂಲಕ ಮಾನವೀಯ ಮೌಲ್ಯವನ್ನು ಗಾಂಭೀರ್ಯವಾಗಿ ಮಂಡಿಸಿದ ಪ್ರಜ್ಞಾವಂತ ಕವಿ ಎಂದು ಮೈಸೂರು ತ.ವೆಂ.ಸ್ಮಾರಕ ಗ್ರಂಥಮಾಲೆ ಪ್ರಕಾಶಕ ಹಾಗೂ ಜಿಎಸ್ಎಸ್ ಒಡನಾಡಿ ಟಿ.ಎಸ್. ಛಾಯಾಪತಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀ ವಿಜಯ ಕನ್ನಡ ಸಂಘ ವಿಭಾಗ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ-88 ಒಂದು ನೆನಪು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಕಾವ್ಯದ ಮುಖಾಂತರ ಹಂತ-ಹಂತವಾಗಿ ಬೆಳೆದ ಕವಿ ಹಾಗೂ ವಿಮರ್ಶಕರಾಗಿ ಮೇರು ವ್ಯಕ್ತಿತ್ವವನ್ನು ಹೊಂದಿದ್ದ ಶಿವರುದ್ರಪ್ಪರವರ ಬಗ್ಗೆ ಬಣ್ಣಿಸಲು ಪದಗಳೇ ಸಾಲದು. ವಿದ್ಯಾರ್ಥಿ ದೆಸೆಯಲ್ಲೇ ಪದ್ಯ ಬರೆದು ಪ್ರಚಲಿತವಾದ ವ್ಯಕ್ತಿ ಹಾಗೂ ತಮ್ಮ ಅಮೂಲ್ಯವಾದ ಕಾವ್ಯ ರಚನೆಯಿಂದ ಜನ ಸಾಮಾನ್ಯರು ಸಾಹಿತ್ಯ ಕ್ಷೇತ್ರದ ಕಡೆ ಒಲವು ಮೂಡಿಸುವಂತೆ ಮಾಡಿದ ಮಹಾಪುರುಷರು ಎಂದು ಬಣ್ಣಸಿದರು.
ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಾಧಿಕಾರಿ ಜಿ.ಕೆ. ರವೀಂದ್ರಕುಮಾರ್ ಮಾತನಾಡಿ, ಕಾವ್ಯ ಅನೇಕರಿಗೆ ಇಷ್ಟ ಆಗುವುದಿಲ್ಲ. ಯಾರಿಗೆ ಕಾವ್ಯದ ರುಚಿ ಪರಿಚಯವಾಗಿರುತ್ತದೋ ಅಂತವರ ಮನಸ್ಸಿನಲ್ಲಿ ಜಿಎಸ್ಎಸ್ ಜನಪ್ರಿಯ ವ್ಯಕ್ತಿ ಎಂದರು. ಕಾಲೇಜಿನ ವಿದ್ಯಾರ್ಥಿ ಚಂದನ ತಂಡ ಜಿಎಸ್ಎಸ್ ಅವರ ಆಯ್ದ ಭಾವಗೀತೆಗಳನ್ನು ಹಾಡುವ ಮೂಲಕ ಭಾವಯಾನ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಾಂಶುಪಾಲ ಪ್ರೊ.ಎಸ್.ಜಿ. ಪ್ರಕಾಶ್, ನಿವೃತ್ತ ಉಪನ್ಯಾಸಕ ಎಸ್.ಆರ್. ರಾಮೇಗೌಡ, ಸಿಡಿಸಿ ಸಮಿತಿ ಅಧ್ಯಕ್ಷ ಪ್ರೇಮಕುಮಾರ್ ಜೈನ್, ಸದಸ್ಯರಾದ ಜ್ಯೋತಿಜಯಸೇನ, ಸುಮಾ ಶಿವಣ್ಣ, ನಂಜಪ್ಪಶೆಟ್ಟಿ, ಚಂದ್ರೇಗೌಡ, ಎಪಿಎಂಸಿ ನಿರ್ದೇಶಕ ಕುಪ್ಪಳ್ಳಿಸೋಮು, ಪ್ರಾಧ್ಯಾಪಕರಾದ ಬಸವಂತಪ್ಪ ಗುದಗತ್ತಿಯವರ್, ಡಾ.ಡಿ. ಸತೀಶ್ಚಂದ್ರ, ದೇವಮ್ಮಣ್ಣಿ, ಮಿರ್ಲೆ ಮೃತ್ಯುಂಜಯ, ವಿದ್ಯಾರ್ಥಿ ವಿಜಯಕುಮಾರ್, ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

