ಇಂದು ನಮೋ ಚಹದೊಂದಿಗೆ ಚರ್ಚೆ
ಮೈಸೂರು: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಫೆ.12ರಂದು ದೇಶಾದ್ಯಂದ ಚಹಾದೊಂದಿಗೆ ಚರ್ಚೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೈಸೂರಿನಲ್ಲೂ ಆರು ಟೀ ಅಂಗಡಿಗಳಲ್ಲಿ ಈ ಚಹಾದೊಂದಿಗೆ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮೋ ಬ್ರಿಗೇಡ್ನ ಸದಸ್ಯರಾದ ಡಾ. ಮಂಜುನಾಥ್ ಹೇಳಿದರು.
ಸಿಟಿಜನ್ ಫಾರ್ ಅಕೌಂಟೇಬಲ್ ಗವರ್ನನ್ಸ್ ಸಂಘಟನೆಯು 10 ಸುತ್ತಿನಲ್ಲಿ ಈ ಚರ್ಚೆಯನ್ನು ಹಮ್ಮಿಕೊಂಡಿದೆ. ಇದಕ್ಕೆ ನಮೋ ಬ್ರಿಗೇಡ್ ಸಹಕರಿಸುತ್ತಿದೆ. ಮೊದಲ ಸುತ್ತಿನಲ್ಲಿ ಉತ್ತಮ ಆಡಳಿತ ಕುರಿತು ಚರ್ಚೆ ನಡೆಯಲಿದೆ. ಇದಕ್ಕಾಗಿ ದೇಶದ 27 ರಾಜ್ಯಗಳ 300 ನಗರದಿಂದ 1000 ಟೀ ಅಂಗಡಿಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ 25 ನಗರಗಳ 82 ಅಂಗಡಿಗಳಲ್ಲಿ ಈ ಚರ್ಚೆ ನಡೆಯಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನ 6 ಟೀ ಅಂಗಡಿಗಳಲ್ಲಿ ಈ ಚರ್ಚೆ ನಡೆಯಲಿದ್ದು, ಪ್ರತಿ ಅಂಗಡಿಯಲ್ಲೂ 2 ಟಿವಿ ಪರದೆ ಇರಿಸಲಾಗುತ್ತದೆ. ನರೇಂದ್ರ ಮೋದಿ ಅವರ ಚರ್ಚೆಯು ನೇರಪ್ರಸಾರ ಇರುತ್ತದೆ. ಮೈಸೂರಿನ ನಾಗರಿಕರು ಸಹ ಉತ್ತಮ ಆಡಳಿತ ಕುರಿತು ಸಲಹೆ ಸೂಚನೆಗಳನ್ನು ನರೇಂದ್ರ ಮೋದಿ ಅವರಿಗೆ ನೀಡಬಹುದು ಎಂದರು.
ನಗರದ ದೇವರಾಜ ಅರಸು ರಸ್ತೆ ರಿಲಯನ್ಸ್ ವೆಬ್ ಸ್ಟೋರ್ಸ್ ಹಿಂಭಾಗದ ಶಂಕರ್ ಟೀ ಸ್ಟಾಲ್, ಅಗ್ರಹಾರ ಕೆ.ಆರ್. ಠಾಣೆ ಪಕ್ಕದ ಶ್ರೀರಾಮ್ದೇವ್ ಟೀ ಸ್ಟಾಲ್, ಕೆ.ಆರ್. ಆಸ್ಪತ್ರೆ ರಸ್ತೆ ಗಣೇಶ ದೇವಸ್ಥಾನದ ಎದುರಿನ ಮಾತಾಜಿ ಟೀ ಸ್ಟಾಲ್, ಇಟ್ಟಿಗೆಗೂಡು ಮೃಗಾಲಯ ಎದುರಿನ ರಾಘವೇಂದ್ರ ಟೀ ಸ್ಟಾಲ್, ಅಗ್ರಹಾರ 101 ಗಣಪತಿ ದೇವಸ್ಥಾನ ಬಳಿಯ ರಾಮದೇವ್ ಟೀ ಸ್ಟಾಲ್ ಹಾಗೂ ಚಾಮರಾಜ ಜೋಡಿ ರಸ್ತೆ ಲಕ್ಷ್ಮಿ ಚಿತ್ರಮಂದಿರ ಎದುರಿನ ಜಾಯ್ ಹೌಸ್ ಟೀ ಸ್ಟಾಲ್ನಲ್ಲಿ ಚಹಾದೊಂದಿಗೆ ಚರ್ಚೆಯು ಸಂಜೆ 5ರಿಂದ 7ರವರೆಗೆ ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಚರ್ಚೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ. 96207 31999, 90368 69568 ಸಂಪರ್ಕಿಸಬಹುದು. ನಮೋ ಬ್ರಿಗೇಡ್ನ ಸದಸ್ಯರಾದ ಹರೀಶ್ಬಾಬು, ಧರ್ಮರಾಜು, ಮುಕುಂದ್ ಪೇಶ್ವಾ, ಸುಧೀರ್ ಜೈನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

