ಮೌಲ್ಯಗಳ ಸಾಕಾರವೇ ಧರ್ಮ
ಮುಡುಕುತೊರೆ: ಪ್ರಪಂಚದಲ್ಲಿ ಯಾವುದೇ ಧರ್ಮ ಶ್ರೇಷ್ಠವೂ ಅಲ್ಲ, ಯಾವುದೇ ಧರ್ಮ ಕನಿಷ್ಠವೂ ಅಲ್ಲ. ಮಾನವೀಯ ಮೌಲ್ಯಗಳ ಸಾಕಾರ ರೂಪವೇ ಧರ್ಮ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ಸುತ್ತೂರು ಶ್ರೀ ನಾಡುಮಠದ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುದ್ಧಗಳಿಂದ ಏನನ್ನೂ ಸಾಧಿಸಲಾಗದು ಎಂಬುದನ್ನು ಇತಿಹಾಸವೇ ತೋರಿಸಿಕೊಟ್ಟಿದೆ. ಈಗ ಇಡಿ ವಿಶ್ವವೇ ಒಂದು ಕುಟುಂಬದಂತೆ ಕಾರ್ಯ ನಿರ್ವಹಿಸಬೇಕಾಗಿದೆ ನೆಲ್ಸನ್ ಮಂಡೇಲಾ ಹೇಳಿರುವಂತೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ದೇಶ ಕಟ್ಟುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಈ ದೆಸೆಯಲ್ಲಿ ಸರ್ವರನ್ನೂ ಸಮಚಿತ್ತದಿಂದ ನೋಡುತ್ತ ಎಲ್ಲ ರಂಗಗಳಲ್ಲೂ ಜನರಿಗೆ ಅವಕಾಶಗಳನ್ನು ಕಲ್ಪಿಸುತ್ತಿರುವ ಸುತ್ತೂರು ಶ್ರೀಮಠದ ಪ್ರಾಮಾಣಿಕ ಪ್ರಯತ್ನ ಪ್ರಶಂಸನೀಯ ಎಂದರು.
ಮುಚ್ಚಳಂಬ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಧರ್ಮಹೀನನಾದ ಮನುಷ್ಯ ಪಶುವಿಗೆ ಸಮಾನ. ಧರ್ಮ ಕೇವಲ ಕೇಳುವುದಷ್ಟೇ ಅಲ್ಲ, ಅದನ್ನು ಆಚರಣೆಗೆ ತರುವುದು ಮುಖ್ಯ ಎಂದರು.
ಕುಂದೂರು ಮಠದ ಕಿರಿಯ ಶ್ರೀಗಳಾದ ಡಾ. ಶರಶ್ಚಂದ್ರಸ್ವಾಮಿಗಳು, ಬದುಕು ಎಂದರೆ ಶೋಧ, ಹುಡುಕಾಟ. ಅನ್ವೇಷಕ ಬುದ್ಧಿ ಇಲ್ಲದ ಬದುಕಿನಲ್ಲಿ ಸ್ವಾರಸ್ಯ ಇರಲಾರದು ಎಂದರು. ಜಿಪಂ ಅಧ್ಯಕ್ಷ ಎಂ.ಮಹದೇವು ಮಾತನಾಡಿ, ಸುತ್ತೂರು ಶ್ರೀಮಠದ ಯಾವುದೇ ಕೆಲಸ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಸಾಹಿತಿ ತೇ.ಸಿ. ವಿಶ್ವೇಶ್ವರಯ್ಯ ಮಾತನಾಡಿ, ಜಾತ್ರೆಗಳು ಮತ್ತು ಯಾತ್ರೆಗಳಿಂದಾಗಿ ಮಾನವ ಸಂಬಂಧಗಳು ಗಟ್ಟಿಯಾಗುತ್ತವೆ ಎಂದರು.
ಮೈಸೂರು ವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ.ಟಿ.ವಿ. ಸತ್ಯನಾರಾಯಣ ಮಾತನಾಡಿ, ಜಾತ್ರೆಗಳಿಂದ ಸರ್ವಧರ್ಮ ಸಮನ್ವಯ ಸಾಧ್ಯವಾಗುತ್ತದೆ ಎಂದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ತಾಪಂ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ, ಎಸ್.ಸಿ. ಚಂದ್ರಶೇಖರಪ್ಪ, ಮಾಜಿ ಶಾಸಕ ಎಸ್. ಕೃಷ್ಣಪ್ಪ, ಸುನಿಲ್‌ಬೋಸ್ ಇದ್ದರು.
ಸುತ್ತೂರು ಸಂಗೀತ ಶಿಕ್ಷಕರು ಪ್ರಾರ್ಥಿಸಿದರು. ಕುಮಾರಸ್ವಾಮಿ ಸ್ವಾಗತಿಸಿದರು. ಲಿಂಗರಾಜು ವಂದಿಸಿದರು, ಡಾ. ನಂದೀಶ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

