ದುರ್ಬಲ ವರ್ಗದವರು ಕಾನೂನನ್ನು ಬಳಕೆ ಮಾಡಿಕೊಳ್ಳಿ
ಹುಣಸೂರು: ಸಮಾಜದಲ್ಲಿ ಅನ್ಯಾಯ ಹಾಗೂ ದೌರ್ಜನ್ಯಕ್ಕೊಳಗಾದ ಶೋಷಿತ, ದುರ್ಬಲ ವರ್ಗದವರು ಕಾನೂನು ಸೇವಾ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಧೀಶೆ ಶೈಲಾ ಕರೆ ನೀಡಿದರು.
ತಾಲೂಕಿನ ಹನಗೋಡು ಗ್ರಾಪಂ ಕೇಂದ್ರದ ಅವರಣದಲ್ಲಿ ಶನಿವಾರ ತಾಲೂಕು ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಾನೂನಿನ ಅರಿವಿಲ್ಲದೆ ಅನೇಕ ಅನ್ಯಾಯ, ದೌರ್ಜನ್ಯಗಳು ಶೋಷಿತ ಹಾಗೂ ದುರ್ಬಲ ವರ್ಗದವರ ಮೇಲೆ ನಡೆಯುತ್ತಿವೆ. ಇವುಗಳನ್ನು ತಡೆಯಲು ಕಾನೂನಿನ ಅರಿವು ಅವಶ್ಯಕ. ಹನಗೋಡು ಗ್ರಾಪಂ ಕೇಂದ್ರದಲ್ಲಿ ತೆರೆದಿರುವ ಕಾನೂನು ಸಲಹಾ ಕೇಂದ್ರವನ್ನು ಸದ್ಬಳಕೆಯಾಗಲಿ ಎಂದು ಆಶಿಸಿದರು.
ಕಿರಿಯ ಶ್ರೇಣಿ ನ್ಯಾಯಧೀಶ ವೀರಭದ್ರಯ್ಯ ಮಾತನಾಡಿ, ಜನಸಾಮಾನ್ಯರಿಗೆ ಕಾನೂನು ಅರಿವು ಬರಬೇಕು. ಕಾನೂನಿನ ಅರಿವಿಲ್ಲದೆ ನ್ಯಾಯಾಲಯದಲ್ಲಿ ಹೆಚ್ಚೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಇತ್ಯರ್ಥವಾಗಲು ವಿಳಂಬವಾಗುತ್ತಿದೆ. ಅದಾಲತ್ ಮೂಲಕ ರಾಜಿ ಸಂಧಾನ ನಡೆಸಿ, ಪರಸ್ಪರ ಸ್ನೇಹ ಸಂಬಂಧ ವೃದ್ಧಿಸುವ ಕಾರ್ಯ ಸಾಗಲಿ ಎಂದರು.
ವಾರಕ್ಕೊಂದು ದಿನ ಉಚಿತ ಸಲಹೆ: ಹನಗೋಡು ಗ್ರಾಪಂ ಕೇಂದ್ರದಲ್ಲಿ ತೆರೆಯಲಾಗಿರುವ ಉಚಿತ ಕಾನೂನು ಸೇವಾ ಕೇಂದ್ರವು ಪ್ರತಿ ಬುಧವಾರದಂದು ಕಾರ್ಯನಿರ್ವಹಿಸಲಿದ್ದು, ಕೇಂದ್ರದಲ್ಲಿ ಹಿರಿಯ ವಕೀಲ ಲಕ್ಕೇಗೌಡರಿಂದ ಈ ಭಾಗದ ನೊಂದವರು ಹಾಗೂ ಸಾರ್ವಜನಿಕರು ಉಚಿತ ಕಾನೂನು ಸಲಹೆ ಪಡೆಯಬಹುದೆಂದು ಸರ್ಕಾರಿ ಅಭಿಯೋಜಕ ಕೆ.ಡಿ. ಸುರೇಶ್ ತಿಳಿಸಿದರು. ಹಿರಿಯ ವಕೀಲ ವೆಂಕಟೇಶ್, ಲಕ್ಕೇಗೌಡ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಹನಗೋಡು ಗ್ರಾಪಂ ಅಧ್ಯಕ್ಷೆ ಮಂಜುಳಾ ಮಹೇಶ್, ಉಪತಹಸೀಲ್ದಾರ್ ನರಸಿಂಹಯ್ಯ, ಪಿಡಿಒ ಮಣಿ, ಮುಖಂಡರಾದ ಗೋವಿಂದರಾಜ್, ಕಿರಂಗೂರುಸ್ವಾಮಿ, ಟೈಲರ್ ಚಾಮಯ್ಯ, ಗಿರಿಧರ್, ಗೋವಿಂದಬೋವಿ, ಕೃಷ್ಣೇಗೌಡ, ಗ್ರಾಮಲೆಕ್ಕಿಗರಾದ ಶ್ರೀನಿವಾಸ, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

