ಮೈಸೂರು

ಮರಳು ಪರವಾನಗಿಗೆ ನಿಲ್ಲದ ಪರದಾಟ

Published On :

ಟಿ. ನರಸೀಪುರ: ಮರಳು ಪರ್ಮಿಟ್ ವಿತರಣೆಯಲ್ಲಿಯೂ ನಡೆಯುತ್ತಿದೆ ಭಾರೀ ಗೋಲ್ಮಾಲ್. ಪರ್ಮಿಟ್ಗೂ ಪ್ರಭಾವಿಗಳಿಗೆ ಮಣೆ ಹಾಕುವ ಮೂಲಕ ಅಧಿಕಾರಿಗಳು ವರ್ತನೆಯಿಂದ ಸಾಮಾನ್ಯ ಲಾರಿ ಮಾಲೀಕರ ಪರದಾಡುತ್ತಿದ್ದಾರೆ.
ತಾಲೂಕಿನ ತಲಕಾಡು ಹೋಬಳಿಯ ಕಾಳಿಹುಂಡಿ ಹಾಗೂ ಪರಿಣಮಿಪುರ ಗ್ರಾಮಗಳ ಮರಳು ಯಾರ್ಡುಗಳಿಂದ ಬೆಂಗಳೂರಿಗೆ ಮರಳು ಪೂರೈಸಲು ಜಿಲ್ಲಾಡಳಿತ ಪರ್ಮಿಟ್ ವಿತರಣೆ ಮಾಡಲು ಅನುಮತಿ ನೀಡುತ್ತಿದ್ದಂತೆಯೇ ಪರ್ಮಿಟ್ ವಿತರಣೆಯಲ್ಲಿಯೂ ದಂಧೆ ನಡೆಯ ತೊಡಗಿದೆ. ರಾಜಕಾರಣಿಗಳು ಹಾಗೂ ಬಲಾಢ್ಯರ ಕೈಗೆ ಸಿಗುವ ಪರ್ಮಿಟ್ ಪ್ರತಿಗಳು ಬಡವರ ಕೈಗೆ ಎಟುಕದಂತಾಗಿವೆ.
ಲೋಕೋಪಯೋಗಿ ಇಲಾಖೆ ಸಚಿವರ ಕ್ಷೇತ್ರದಲ್ಲಿ ಮರಳು ದಂಧೆ ನಡೆಯುತ್ತಿದೆ ಆರೋಪದ ಜೊತೆಗೆ ಪರ್ಮಿಟ್ ದಂಧೆಯನ್ನೂ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂಬ ಆಪಾದನೆ ಲಾರಿ ಮಾಲೀಕರಿಂದಲೇ ಕೇಳಿ ಬರುತ್ತಿದೆ.
ಕೈಕಟ್ಟಿ ಕುಳಿತ ಅಧಿಕಾರಿಗಳು: ಒಂದೆರಡು ಲಾರಿಗಳನ್ನಿಟ್ಟುಕೊಂಡು ಹೊಟ್ಟೆ ಹೊರೆದುಕೊಳ್ಳುವ ಬಡಪಾಯಿಗಳಿಗೆ ಪರ್ಮಿಟ್ ಸಿಗದೆ ಒದ್ದಾಡುತ್ತಿದ್ದರೆ, ನ್ಯಾಯಯುತವಾಗಿ ಪರ್ಮಿಟ್ ವಿತರಿಸಬೇಕಾದ ಅಧಿಕಾರಿಗಳು ರಾಜಕಾರಣಿಗಳ ಹೆಸರೇಳಿಕೊಂಡೆ ಒಳಗೊಳಗೆ ಹಫ್ತಾ ಪಡೆದು ಅಕ್ರಮ ನಡೆಸುತ್ತಿದ್ದಾರೆ. ಮರಳು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಜಿಲ್ಲಾಡಳಿತ ನೀತಿಯಡಿ ಮರಳು ಸಾಗಾಣಿಕೆಗೆ ವಿತರಣೆ ಮಾಡುವಲ್ಲಿ ನಡೆಯುತ್ತಿರುವ ಗೋಲ್ಮಾಲ್ಗೆ ಕಡಿವಾಣ ಹಾಕಿ ಪಾರದರ್ಶಕತೆ ತೋರಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.