ಮೈಸೂರು

ಹರ್ಷಿತಾ ರಂಗ ಪ್ರವೇಶ

Published On :

ಮೈಸೂರು: ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ ಹರ್ಷಿತಾರ ರಂಗ ಪ್ರವೇಶ ಕಾರ್ಯಕ್ರಮವು ಜಗನ್ಮೋಹನ ಅರಮನೆಯಲ್ಲಿ ಭಾನುವಾರ ನಡೆಯಿತು. ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್ ಉದ್ಘಾಟಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಬಸವರಾಜು, ಸಾಹಿತಿ ಚೀಲೂರು ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ, ವಿದುಷಿ ದಿನಮಣಿ ಶ್ರೀನಿವಾಸಮೂರ್ತಿ, ಉದ್ಯಮಿ ವೇಣುಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು. ನಂತರ ಪುಷ್ಪಾಂಜಲಿ ಗೀತೆಯೊಂದಿಗೆ ರಂಗ ಪ್ರವೇಶಿಸಿದ ಉದಯೋನ್ಮುಖ ಕಲಾವಿದೆ ಹರ್ಷಿತಾ, ಶೃಂಗಾರರಸ, ಹಾಸ್ಯರಸ, ಕರುಣಾರಸ, ರುದ್ರರಸ, ವೀರರಸ, ಭಯಾನಕರಸ, ಭೀಭತ್ಸ್ಯಾರಸ, ಅದ್ಭುತರಸ ಹಾಗೂ ಶಾಂತರಸ ಬಿಂಬಿಸುವ ರಚನೆಗಳಿಗೆ ನಾಟ್ಯ ಪ್ರದರ್ಶಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.