ಪದಾಧಿಕಾರಿಗಳ ಪದಗ್ರಹಣ ನಾಳೆ
ಹುಣಸೂರು: ಪಟ್ಟಣದ ರೋಟರಿ ಕ್ಲಬ್ನ 2014-15ನೇ ಸಾಲಿನ ಅಧ್ಯಕ್ಷರಾಗಿ ಧರ್ಮಾಪುರ ನಾರಾಯಣ್ ಹಾಗೂ ಕಾರ್ಯದರ್ಶಿಯಾಗಿ ಶಿವಕುಮಾರ್ ವಿ.ರಾವ್ ಆಯ್ಕೆಯಾಗಿದ್ದಾರೆ. ಜು.9ರ ಸಂಜೆ 7ಕ್ಕೆ ರೋಟರಿ ಸಭಾಂಗಣದಲ್ಲಿ ನಡೆಯುವ ಪದಗ್ರಹಣ ಸಮಾರಂಭದಲ್ಲಿ ರೋಟರಿ ವಲಯ 6ರ ಎಂ.ಎಸ್. ಕರುಂಬಯ್ಯ, ಜಿಲ್ಲಾ ಮಾಜಿ ಗವರ್ನರ್, ಡಾ.ದೇವದಾಸ ರೈ ಹಾಗೂ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸುವರು. ಇದೇ ವೇಳೆ 8 ಮಂದಿ ನೂತನ ಸದಸ್ಯರಾಗಿ ರೋಟರಿ ಬಳಗಕ್ಕೆ ಸೇರಲಿದ್ದಾರೆಂದು ನಿರ್ಗಮಿತ ಅಧ್ಯಕ್ಷ ರಾಜಶೇಖರ್ ತಿಳಿಸಿದ್ದಾರೆ.
ಅಬಕಾರಿ ಆದಾಯದಲ್ಲಿ
ತಾಲೂಕು ಪ್ರಥಮ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಜಿಲ್ಲೆಯಲ್ಲಿಯೇ ಅಬಕಾರಿ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ನೂತನ ಅಬಕಾರಿ ನಿರೀಕ್ಷಕ ಎನ್.ಟಿ. ಆನಂದ್ಕುಮಾರ್ ಹೇಳಿದರು. ಅಬಕಾರಿ ಇಲಾಖೆ ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ಅಡಿಯಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲಾಗುವುದು, ಕಾಳಸಂತೆಯಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆಯಲ್ಲಿ ಮದ್ಯ ಮಾರಾಟ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಪ್ರತಿಯೊಬ್ಬರೂ ತಮಗೆ ಸಹಕಾರ ನೀಡುವಂತೆ ತಿಳಿಸಿದರು. ಅಬಕಾರಿ ಉಪ ನಿರೀಕ್ಷಕರಾದ ಜಾನ್ಮಥಾಯ್, ಮೋಹನ್ಕುಮಾರ್, ಮದ್ಯ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಪಿ.ವೈ.ಮಲ್ಲೇಶ್, ಗಿರೀಶ್, ನಿಂಗರಾಜ್, ಪಿ.ಟಿ. ಮಹದೇವ್, ಎಚ್.ಡಿ. ವಿಜಯ್, ಸಿ.ಎನ್. ನಾರಾಯಣ್, ಎಚ್.ಡಿ. ನಾರಾಯಣ್, ಬೋಜಪ್ಪ ಇದ್ದರು.
ಆರೋಗ್ಯ ಶಿಬಿರದ
ಲಾಭ ಪಡೆಯಿರಿ
ಪಿರಿಯಾಪಟ್ಟಣ: ತಮ್ಮ ಗ್ರಾಮಗಳಲ್ಲಿಯೇ ಏರ್ಪಡಿಸುವ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಲು ಗ್ರಾಮಸ್ಥರು ಮುಂದಾಗಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಶಶಿಧರ್ ಹೇಳಿದರು. ತಾಲೂಕಿನ ಕಂಪಲಾಪುರದಲ್ಲಿ ವಿಎಸ್ಎಸ್ಎನ್ ಕಂಪಲಾಪುರ, ಸಹಕಾರ ಇಲಾಖೆ, ಅಪೊಲೋ ಬಿಜಿಎಸ್ ಆಸ್ಪತ್ರೆ ಹಾಗೂ ಮಹಾವೀರ ಜೈನ್ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಯಶಸ್ವಿನಿ ಯೋಜನೆ ಅಡಿಯಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವೇ ಭಾಗ್ಯ ಎಂಬಂತೆ ಪ್ರತಿಯೊಬ್ಬರೂ ಆರೋಗ್ಯಕರವಾಗಿರಬೇಕು. ಆಧುನಿಕತೆಯ ಭರದಲ್ಲಿ ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸುತ್ತಿದ್ದು ಇದು ತಪ್ಪಬೇಕು. ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು. ಅಪೊಲೋ ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಚೇತನ್, ವಿಎಸ್ಎಸ್ಎನ್ ಅಧ್ಯಕ್ಷ ರವಿ ಮಾತನಾಡಿದರು. ಶಿಬಿರದಲ್ಲಿ 440ಕ್ಕೂ ಹೆಚ್ಚು ಮಂದಿ ತಪಾಸಣೆಗೊಳಗಾದರು. ಶಿಬಿರದಲ್ಲಿ ಸಹಕಾರ ಇಲಾಖೆ ಮಂಜುನಾಥ್, ವೈದ್ಯರಾದ ಡಾ.ಆಲಿ, ಡಾ.ಅಜಯ್, ಡಾ.ಭಾರತಿ, ಡಾ.ಭರತ್ ಕುಮಾರ್, ಸಂಘದ ಉಪಾಧ್ಯಕ್ಷ ಸ್ವಾಮಿಗೌಡ, ಇಒ ವಿ.ಎಸ್.ರಾಮಚಂದ್ರ, ಎಂಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಶೇಖರ್, ರಮೇಶ್, ಮುಖಂಡರಾದ ಪ್ರಕಾಶ್, ರಾಜಶೇಖರೇಗೌಡ, ಶಿವಮ್ಮ, ಮಂಜುಳಾ, ರಾಮೇಗೌಡ, ಪುಟ್ಟೇಗೌಡ, ಗುರುಸಿದ್ದಪ್ಪ, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

