ಮೈಸೂರು

ಕೌಶಲ ವೃದ್ಧಿಗೆ ಗಮನ ನೀಡಿ

Published On :

ಮೈಸೂರು: ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯಗಳನ್ನು ಬದಿಗಿರಿಸಿ ಕೌಶಲ ವೃದ್ಧಿಗೆ ಗಮನ ನೀಡಬೇಕು ಎಂದು ಸಿಎಸ್ಐಆರ್ನ ನಿರ್ದೇಶಕ ಡಾ.ನಾಗೇಶ ಅಯ್ಯರ್ ಹೇಳಿದರು.
ಸಿಎಫ್ಟಿಆರ್ಐನಲ್ಲಿ ಶುಕ್ರವಾರ ಎಂ.ಎಸ್ಸಿ ಹಾಗೂ ಐಎಸ್ಎಂಟಿ ವಿದ್ಯಾರ್ಥಿಗಳಿಗೆ ಪದಕಗಳು, ವಿದ್ಯಾರ್ಥಿ ವೇತನ, ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ವೇತನ: ಮಲ್ಹೋತ್ರ ವೈಕ್ಫೀಲ್ಡ್ ಪ್ರತಿಷ್ಠಾನ ನೀಡುವ ಬಹುಮಾನವನ್ನು (75 ಸಾವಿರ ನಗದು) ಝರ್ಕಾರ್ ಗೀತ ಚಂದ್ರಕಾಂತರಾವ್, ಚಾಂದಿನಿ ಪನ್ವಂಡ, ಯು. ಹರೀಶ್, ಫುಡ್ ಇನ್ಗ್ರೆಡಿಯೆಂಟ್ಸ್ ಸ್ಪೆಶಾಲಿಟೀಸ್ (25 ಸಾವಿರ ನಗದು) ಬಹುಮಾನವನ್ನು ಸಿದ್ದಾರ್ಥ್ ಶರಣ್, ಪರಿಧಿ ಜೈನ್, ವಸುಂಧರಾ, ಭವ್ಯ, ಬ್ಯುಹ್ಲರ್ ಇಂಡಿಯಾ ಪ್ರೈ. ಬಹುಮಾನವನ್ನು (40 ಸಾವಿರ ನಗದು) ರೀಚಾ ರಂಜನ್, ಝರ್ಕಾರ್ ಗೀತಾ ಚಂದ್ರಕಾಂತರಾವ್, ಬಿಸ್ಲೇರಿ ಇಂಡಿಯಾ ಬಹುಮಾನವನ್ನು (18 ಸಾವಿರ ನಗದು) ಕುಮಾರಿ ಶಿಖಾ, ಪ್ರಜ್ಞಾ ದ್ವಿವೇದಿ, ಬೋನಿಟ ರೀಮಾ ಅರಾನ್ಹ, ಮಂಜ್ರೇಕರ್ ದತ್ತಿ ನಿಧಿ ಫೆಲೊಶಿಪ್ ಅನ್ನು ಸುಚಿತ್ರ ಸರ್ಕಾರ್ ಮತ್ತು ಶ್ರೀ ವಾಸ್ತವ ವಿದ್ಯಾರ್ಥಿವೇತನವನ್ನು ಸಿಲ್ವಿ ಗರ್ಗ್ ಪಡೆದುಕೊಂಡರು.
ಪದಕ ವಿಜೇತರು: ಡಾ.ರಾಜಗೋಪಾಲ್ ಸ್ವರ್ಣ ಪದಕ, ಡಾ.ಗಿರಿಧರ್ ಲಾಲ್ ಸ್ವರ್ಣ ಪದಕ, ಡಾ.ಜೀವನ್ ಎಸ್ ಸಿಧು ಸ್ವರ್ಣ ಪದಕ, ಗೌರಮ್ಮ ರಘುನಾಥಯ್ಯ ಪದಕ ಮತ್ತು ನಿರುಲಾ ಪ್ರತಿಷ್ಠಾನ ಪ್ರಶಸ್ತಿಯನ್ನು (ಒಟ್ಟು 5 ಪದಕ) ದೇಬಶ್ರೀ ರಾಯ್ ಪಡೆದುಕೊಂಡರು. ಡಾ.ಜೆ.ಎಸ್. ಪುತ್ರಿ ಸ್ವರ್ಣ ಪದಕವನ್ನು ಜಿಬಿ ಜೇಮ್ಸ್, ಆನ್ ಪ್ಯೋಂಗ್ ಯುಜಿ ಸ್ವರ್ಣ ಪದಕವನ್ನು ಕನಕ್ ನೇತಮ್, ಸಿಎಫ್ಟಿಆರ್ಐ ಹಳೆಯ ವಿದ್ಯಾರ್ಥಿಗಳ ಸಂಘದ ಬೆಳ್ಳಿ ಪದಕವನ್ನು ಮೋನಿಕ ಗುಪ್ತಾ, ರಂಗಣ್ಣ ಶೆಟ್ಟಿ ಪ್ರಶಸ್ತಿ (ಪ್ರಬಂಧ)ಯನ್ನು ಯು.ಹರೀಶ್, ಸಂಶೋಧನಾ ಪ್ರಶಸ್ತಿಯನ್ನು ಎನ್.ನಿಕೇತ, ಶಿಸ್ತು ಮತ್ತು ಪ್ರತಿಭೆಗಾಗಿ ಹಳೆಯ ವಿದ್ಯಾರ್ಥಿಗಳ ಪ್ರಶಸ್ತಿಯನ್ನು ಜಿ. ಸುನಿಲ್ ಕುಮಾರ್ ಪಡೆದುಕೊಂಡರು.
ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಿಎಸ್ಐಆರ್ ಸಂಯೋಜಕ ಎ.ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.