ಬಯೋಗ್ಯಾಸ್ ಎನ್ರಿಚ್ಮೆಂಟ್ ತಂತ್ರಜ್ಞಾನದ ಅಭಿವೃದ್ಧಿ
ಮೈಸೂರು: ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ 8ನೇ ಸೆಮಿಸ್ಟರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಪೂರೈಸಿರುವ ಮೂವರು ವಿದ್ಯಾರ್ಥಿಗಳು ಕಚ್ಚಾ ಗ್ಯಾಸ್ ಅನ್ನು ಬಯೋ ಗ್ಯಾಸನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಸೈಯದ್ ಸೊಹೆಲ್ ಕದ್ರಿ, ಪ್ರದೀಪ್ ಮತ್ತು ಸುಹಾಸ್ ಎಂಬ ವಿದ್ಯಾರ್ಥಿಗಳು ಪ್ರಾಧ್ಯಾಪಕರಾದ ಕೆ. ಶ್ರೀನಿವಾಸ ಹಾಗೂ ರಘು ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ತಂತ್ರಜ್ಞಾನದಿಂದ ತಯಾರಿಸಿದ ಅನಿಲವು ನೈಸರ್ಗಿಕ ಅನಿಲಕ್ಕೆ ಸಮಾಂತರವಾಗಿದೆ. ಈ ಪರಿವರ್ತಿತ ತಾಂತ್ರಿಕ ಕ್ರಮವು ಈಗಿರುವ ಮಿಥೈಲ್ನ ಶೇ.50 ರಿಂದ 60 ಪ್ರಮಾಣವನ್ನು ಶೇ.70 ರಿಂದ 80ಕ್ಕೆ ಏರಿಕೆ ಮಾಡಲಿದೆ. ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ.
ಈ ಕ್ರಮದಿಂದ ನೈಸರ್ಗಿಕ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಹೊಸ ಪರಿಚಿತ ಅನಿಲವನ್ನು ನೈಸರ್ಗಿಕ ಅನಿಲದ ರೀತಿಯಂತೆ ಉಪಯೋಗಿಸಬಹುದು ಹಾಗೂ ಈ ಅನಿಲದಲ್ಲಿ ಲೈಟನಿಂಗ್ ಕ್ಯಾಲರಿಗಳು ಸಹ ಹೆಚ್ಚು ಪ್ರಮಾಣದಲ್ಲಿ ಲಭ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅನಿಲಗಳು ಅಳಿವಿನ ಅಂಚಿನಲ್ಲಿರುವುದರಿಂದ ಹಾಗೂ ಈಗಿರುವ ನೈಸರ್ಗಿಕ, ನವೀಕರಿಸಬಲ್ಲ, ಸೌರಶಕ್ತಿ, ಜಲಶಕ್ತಿ, ಪವನಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಹಾಗೂ ಜೈವಿಕ ಅನಿಲಗಳ ಉತ್ಪಾದನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಅತ್ಯಾವಶ್ಯಕವಾಗಿರುತ್ತದೆ ಎಂದು ವಿದ್ಯಾರ್ಥಿಗಳು ವಾದಿಸಿದ್ದಾರೆ.
ಪರಿಣಿತ ಪ್ರಾಧ್ಯಾಪಕರ ಮಾರ್ಗದರ್ಶನದಿಂದ ಈ ಹೊಸ ಪ್ರಯೋಗವನ್ನು ಯಶಸ್ವಿಗೊಳಿಸಿರುವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಎಲ್.ಬಸವರಾಜ್, ಸಂಸ್ಥೆಯ ಅಧ್ಯಕ್ಷ ಎಲ್. ಅರುಣಕುಮಾರ್ ಅಭಿನಂದಿಸಿದ್ದಾರೆ.
'ಶಿಕ್ಷಕರಿಗೆ ಆಳವಾದ ಜ್ಞಾನ ಅಗತ್ಯ'
ಮೈಸೂರು: ಶಿಕ್ಷಕ ವೃತ್ತಿಗೆ ವಿಶ್ವಾದ್ಯಂತ ಮಹತ್ವದ ಸ್ಥಾನವಿದೆ. ಶಿಕ್ಷಕರಾದವರು ಆಳವಾದ ಜ್ಞಾನ ಹೊಂದುವುದು ಅತ್ಯವಶ್ಯಕವಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ. ಷೇಕ್ ಅಲಿ ಹೇಳಿದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ವಿವಿ ಎಸ್ಸಿ, ಎಸ್ಟಿ ವರ್ಗದ ಇತಿಹಾಸ ಅಧ್ಯಾಪಕರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಗೆ ಬೌದ್ಧಿಕ ಶಕ್ತಿಯ ಅಗತ್ಯವಿದೆ. ಶಿಕ್ಷಕರು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಬೇಕಾದರೆ ತಾವು ಬೌದ್ಧಿಕ ಸ್ಥಿತಿವಂತರಾಗಿರಬೇಕು. ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ರಾಷ್ಟ್ರದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬೇಕು. ವೈಯಕ್ತಿಕವಾಗಿ ರಾಷ್ಟ್ರದ ಏಳಿಗೆಗೆ ಕೊಡುಗೆ ನೀಡಬೇಕು. ಸಮಾಜಮುಖಿ ಚಿಂತನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವರ ಏಳಿಗೆಗೆ ಕಾರಣಕರ್ತರಾಗಬೇಕು ಎಂದು ಕರೆ ನೀಡಿದರು. ಸಂವಿಧಾನ ನೀಡಿದ ಅಂಬೇಡ್ಕರ್ ತಮ್ಮ ಬೌದ್ಧಿಕ ಶಕ್ತಿಯ ಮೂಲಕವೇ ಇಡೀ ವಿಶ್ವದ ಗಮನ ಸೆಳೆದರು ಎಂದರು. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ. ಬಸವರಾಜು, ಮೈಸೂರು ವಿವಿ ಸಂಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಆಂಜನೇಯ, ಸರಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಂ. ಮಹದೇವನಾಯಕ್, ಪ್ರೊ.ಎಚ್.ಕೆ. ಅರವಿಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

