ಮೈಸೂರು

ರೋಟರಿ ಪದಾಧಿಕಾರಿಗಳ ಪದಗ್ರಹಣ

Published On :

ಹುಣಸೂರು: ಸಮಾಜದ ಅನಿಷ್ಠಗಳನ್ನು ಹೋಗಲಾಡಿಸಲು, ಸಾಮಾಜಿಕ ಸಾಮರಸ್ಯ ಕಾಪಾಡಲು ಪ್ರತಿಯೊಬ್ಬ ರೋಟರಿ ಸದಸ್ಯರು ಅಭಿವೃದ್ಧಿಯೆಂಬ ದೀಪ ಬೆಳಗಬೇಕು ಎಂದು ಜಿಲ್ಲಾ ಮಾಜಿ ಗೌರ್ನರ್ ಡಾ.ದೇವದಾಸ ರೈ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 2014-15ನೇ ಸಾಲಿನ ಹುಣಸೂರು ರೋಟರಿಯ ನೂತನ ಅಧ್ಯಕ್ಷರಾಗಿ ಧರ್ಮಾಪುರ ನಾರಾಯಣ್, ಕಾರ್ಯದರ್ಶಿಯಾಗಿ ಶಿವಕುಮಾರ್ ವಿ. ರಾವ್ ಅವರಿಗೆ ದೇವದಾಸ ರೈ ಪದವಿ ಪ್ರದಾನ ಕಾರ್ಯನಿರ್ವಹಿಸಿದ ನಂತರ ಮಾತನಾಡಿದ ಅವರು, ಇತರರ ನೋವು ನಲಿವು ನಮ್ಮ ನೋವು ನಲಿವೆಂದು ಅರಿತು ಸ್ಪಂದಿಸಿದರೆ ಮಾತ್ರ ಮಾಡಿದ ಸೇವೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ರೋಟರಿ ಇಂಟರ್‌ನ್ಯಾಷನಲ್ ಅಧ್ಯಕ್ಷ ಗ್ಯಾರಿ ಸಿ.ಕೆ. ಹ್ವಾಗ್ ಈ ಸಾಲಿಗಾಗಿ ಲೈಟ್ ಅಪ್ ರೋಟರಿ ಎಂಬ ಸಂದೇಶವಾಕ್ಯ ಆಯ್ದುಕೊಂಡಿದ್ದಾರೆ. ಕತ್ತಲೆಯಲ್ಲಿ ಕುಳಿತು ಕತ್ತಲೆ ದೂಷಿಸುವುದಕ್ಕಿಂತಲೂ ಒಂದು ಮೇಣದಬತ್ತಿಯನ್ನು ಹಚ್ಚುವುದು ಒಳ್ಳೆಯದೆನ್ನುವ ಚೀನಾದ ತತಜ್ಞಾನಿ ಕನ್‌ಫ್ಯೂಷಿಯಸ್‌ನ ಮಾತುಗಳೇ ಹ್ವಾಗ್ ಅವರು ಲೈಟ್ ಅಪ್ ರೋಟರಿ ಸಂದೇಶ ಆಯ್ದುಕೊಳ್ಳಲು ಪ್ರೇರೇಪಣೆ ನೀಡಿದೆ ಎಂದು ತಿಳಿಸಿದರು.
ರೋಟರಿ 3180 ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಎಂ.ಎಸ್. ಕರುಂಬಯ್ಯ ಜಿಲ್ಲಾ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ನೂತನ ರೋಟರಿ ಅಧ್ಯಕ್ಷ ಧರ್ಮಾಪುರ ನಾರಾಯಣ್ ಮುಂದಿನ ಸಾಲಿನ ತಮ್ಮ ಉದ್ದೇಶಿತ ಯೋಜನೆಗಳನ್ನು ತಿಳಿಸಿದರು.
ಎಂಟು ಮಂದಿ ಸೇರ್ಪಡೆ: ಇದೇ ವೇಳೆ ರೋಟರಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 8 ಸದಸ್ಯರನ್ನು ಐಟಿಸಿ ಕಂಪನಿ ರಾಜಶೇಖರ್, ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ರವಿಕುಮಾರ್, ಶಿಕ್ಷಣ ಇಲಾಖೆಯ ಯೋಗೀಂದ್ರ, ಕೃಷಿ ಇಲಾಖೆಯ ಪ್ರಸನ್ನದಿವಾನ್, ರಾಜನ್, ಪುರಸಭೆಯ ಮುಖ್ಯಾಧಿಕಾರಿ ರಮೇಶ್, ಪರಿಸರ ಎಂಜಿನಿಯರ್ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್‌ಕುಮಾರ್ ಸೇರಿಸಿಕೊಳ್ಳಲಾಯಿತು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ರೋಟರಿ ಕುಟುಂಬದ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ತಾಲೂಕಿನ 40 ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ಸೋಲಾರ್ ಲ್ಯಾಂಪ್ ನೀಡಲಾಯಿತು. ತಾಲೂಕಿನ ಬಡ ಮತ್ತು ಅಂಗವಿಕಲ ವಿದ್ಯಾರ್ಥಿಗಳನ್ನು ರೋಟರಿ ಸದಸ್ಯರು ಗುರುತಿಸಿ ಅಂತಹವರನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಬೇಕಾದ ಖರ್ಚು ವೆಚ್ಚ ಭರಿಸಿದರು.
ವಲಯ ಸೇನಾನಿ ರವಿಶಂಕರ್ ವಾರ್ತಾ ಪತ್ರಿಕೆ ಹಾಗೂ ರೋಸ್ಟರ್ ಬಿಡುಗಡೆಗೊಳಿಸಿದರು. ನಿಕಟಪೂರ್ವ ಅಧ್ಯಕ್ಷ ರಾಜಶೇಖರ್ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಜಿ.ಎಂ.ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.