ಯೋಧ ಹೇಮಚಂದ್ರ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮೈಸೂರು: ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧ ಹೇಮಚಂದ್ರ ಅವರ ಹೆತ್ತವರನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ಸನ್ಮಾನಿಸಿದರು.
ಮೈಸೂರಿನ ನಜರ್ಬಾದ್ನ ಹೇಮಚಂದ್ರ ವೃತ್ತದಲ್ಲಿ ವೀರ ಮರಣ ಹೊಂದಿದ ಮೈಸೂರಿನ ವಿಜಯನಗರ ನಿವಾಸಿ ಹಾಗೂ ಯೋಧ ಹೇಮಚಂದ್ರ ಅವರ ಆಳೆತ್ತರದ ಕಟೌಟ್ ನಿಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಹೇಮಚಂದ್ರ ಅವರ ತಂದೆ ಮರೀಗೌಡ ಮತ್ತು ತಾಯಿ ಲಕ್ಷ್ಮಿ ಅವರನ್ನು ಸನ್ಮಾನಿಸಿದರು. ಈ ಮೂಲಕ ದೇಶಕ್ಕಾಗಿ ಪ್ರಾಣತೆತ್ತ ಯೋಧನ ತ್ಯಾಗಕ್ಕೆ ಗೌರವ ಸಲ್ಲಿಸಿದರು. ಅಲ್ಲದೆ, ಹೇಮಚಂದ್ರ ವೃತ್ತದಲ್ಲಿ ಸಂಪಿಗೆ ಗಿಡ ನೆಡಲಾಯಿತು. ಬಿಜೆಪಿ ನಗರಾಧ್ಯಕ್ಷ ಹಾಗೂ ಮಾಜಿ ಶಾಸಕ ಇ.ಮಾರುತಿರಾವ್ ಪವಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಕಿಸ್ತಾನದ ಸೈನಿಕರು 15 ವರ್ಷದ ಹಿಂದೆ ಭಾರತದ ಕಾರ್ಗಿಲ್ ಪ್ರದೇಶಕ್ಕೆ ನುಸುಳಿ ಆಕ್ರಮಿಸಿಕೊಳ್ಳಲು ಸಂಚು ನಡೆಸಿದ್ದರು. ಆದರೆ ಭಾರತೀಯ ಯೋಧರು ತಮ್ಮ ಪ್ರಾಣದ ಹಂಗು ತೊರೆದು ದಿಟ್ಟತನ ಪ್ರದರ್ಶಿಸಿ ಪಾಕಿಸ್ತಾನ ಸೈನಿಕರನ್ನು ಹಿಮ್ಮೆಟಿಸಿದ್ದರಿಂದ ಇಂದು ಭಾರತೀಯರು ಶಾಂತಿಯುತವಾಗಿ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.
ಸ್ಮಾರಕಕ್ಕಾಗಿ ದೇಣಿಗೆ ಸಂಗ್ರಹ: ಇದೇ ವೇಳೆ ಬೀದರ್ ಜಿಲ್ಲೆಯ ಗೊರಟಾ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಹೈದರಾಬಾದ್ ನಿಜಾಮರು ನಡೆಸಿದ ಗೊರಟಾ ಗ್ರಾಮಸ್ಥರ ಮಾರಣ ಹೋಮದ ಸ್ಮಾರಕ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸುವುದಕ್ಕೆ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎನ್.ಪರೀಕ್ಷಿತ್ ರಾಜೇ ಅರಸ್, ನಗರಾಧ್ಯಕ್ಷ ಕೆ. ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ರಾಜೇಂದ್ರ, ನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಎಂಡಿಎ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ಮುಖಂಡರಾದ ಮಲ್ಲಪ್ಪಗೌಡ, ಸೋಮಸುಂದರ್, ಜಗದೀಶ್, ಎಚ್.ಎನ್. ಸರ್ವಮಂಗಳ, ಗದಾಧರ್, ಪ್ರದೀಪ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

