ಮೈಸೂರು

ರೈತರಿಗೆ ಬತ್ತದ ಬೀಜ ವಿತರಣೆ

Published On :

ಭೇರ್ಯ: ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ. ಓಬೇಗೌಡ ರೈತರಿಗೆ ಸಬ್ಸಿಡಿ ಮೂಲಕ ಬತ್ತದ ಬೀಜ ವಿತರಿಸಿದರು.
ಬಳಿಕ ಮಾತನಾಡಿದ ಅವರು, ವಾರದೊಳಗೆ ನಾಲೆಗೆ ನೀರು ಹರಿಯಲಿದ್ದು, ಈ ಭಾಗದ ರೈತರು ಕಳೆದ ಬಾರಿಗಿಂತ ಈ ಬಾರಿ ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಇಳುವರಿ ಹೆಚ್ಚಿಸಿಕೊಳ್ಳಲು ಕೃಷಿ ತಜ್ಞರು ಪರೀಕ್ಷಿಸಿರುವ ಒಳ್ಳೆಯ ತಳಿಯ ಬೀಜದ ಬತ್ತವನ್ನು ನಮ್ಮ ಸಂಘದಿಂದ ವಿತರಿಸಲಾಗುವುದು ಎಂದರು.
ನಮ್ಮಲ್ಲಿ 1001, ಐಆರ್, 64, ಬಿಆರ್, ತನು, ಜೆಜಿಎಲ್, ಜ್ಯೋತಿ ಸೇರಿದಂತೆ ಹಲವು ತಳಿಯ ಬೀಜೋತ್ಪನ್ನಗಳನ್ನು ಮತ್ತು ರಾಸಾಯನಿಕ ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆದು ಸಮೃದ್ಧಿ ಬೆಳೆ ಬೆಳೆಯುವಂತೆ ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ಎಚ್.ಎಸ್.ರಾಜು, ಗೋಪಾಲ್, ರಾಜಯ್ಯ, ರಾಜೇಗೌಡ, ಸಿಬ್ಬಂದಿ ನರಸಿಂಹೇಗೌಡ, ಮೋಹನ್ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.