ಪ್ರವೇಶಕ್ಕೆ ಅರ್ಜಿ
ಕೆ.ಆರ್. ನಗರ: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಈ ಕೆಳಕಂಡ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಕೆ.ಆರ್. ನಗರ ಟೌನ್ ಹಂಪಾಪುರ, ಮಿರ್ಲೆ, ಹೊಸ ಅಗ್ರಹಾರ, ಭೇರ್ಯ, ಮೇಲೂರು, ಹನಸೋಗೆ, ಹರದನಹಳ್ಳಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಕೆ.ಆರ್. ನಗರ ಟೌನ್ನಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಕೆ.ಆರ್. ನಗರ ಟೌನ್ನಲ್ಲಿರುವ ಕಾಳಿದಾಸ ಅನುದಾನಿತ ಖಾಸಗಿ ಬಾಲಕರ ವಿದ್ಯಾರ್ಥಿನಿಲಯಕ್ಕೆ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ, ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಸಂಬಂಧಿಸಿದ ವಿದ್ಯಾರ್ಥಿನಿಲಯಗಳಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಗೆ 2014ರ ಜೂ.10 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೆ.ಆರ್. ನಗರ ತಾಲೂಕು ಇವರನ್ನು ಸಂಪರ್ಕಿಸಬಹುದು.
ಸಭೆ ಇಂದು
ಕೆ.ಆರ್. ನಗರ: ತಾಲೂಕು ಆಡಳಿತ ವತಿಯಿಂದ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಜೂ.6 ಮತ್ತು 7ರಂದು ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಸಂಸದ ಸಿ.ಎಸ್. ಪುಟ್ಟರಾಜು ಮತ್ತು ಚುನಾಯಿತ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಏರ್ಪಡಿಸಿದೆ. ಜೂ.6ರ ಮಧ್ಯಾಹ್ನ 12ಕ್ಕೆ ತಾಲೂಕು ಕಚೇರಿ ಆವರಣದಲ್ಲಿ ಕಸಬಾ ಹೋಬಳಿ ಮಟ್ಟದ ಸಭೆಯು ಹಾಗೂ ಹೆಬ್ಬಾಳು ಹೋಬಳಿ ಸಭೆಯು ನಾಡ ಕಚೇರಿ ಆವರಣ ಹೆಬ್ಬಾಳು ಗ್ರಾಮದಲ್ಲಿ ಮಧ್ಯಾಹ್ನ 2ಕ್ಕೆ ನಡೆಯಲಿದ್ದು, ಚುಂಚನಕಟ್ಟೆ ಹೋಬಳಿ ವ್ಯಾಪ್ತಿಯ ಸಭೆ ಚುಂಚನಕಟ್ಟೆ ಆದಿಚುಂಚನಗಿರಿ ಸಮುದಾಯ ಭವನ ಸಂಜೆ 4ಕ್ಕೆ ನಡೆಯಲಿದೆ. ಜೂ.7ರ ಮಧ್ಯಾಹ್ನ ಒಂದಕ್ಕೆ ಮಿರ್ಲೆ ಹೋಬಳಿ ಮಟ್ಟದ ಜನಸ್ಪಂದನ ಸಭೆಯು ಅಲ್ಲಿನ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ, ಹೊಸಅಗ್ರಹಾರ ಹೋಬಳಿ ಸಭೆಯು ಗ್ರಾಪಂ ಆವರಣದಲ್ಲಿ ಮತ್ತು ಭೇರ್ಯ ಗ್ರಾಮದಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿದೆ.
ಮೇಳಕ್ಕೆ ತೆರೆ
ಕೆ.ಆರ್. ನಗರ: ಪಟ್ಟಣದ ಸ್ಪಿನ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ಮೇಳದ ಅಂಗವಾಗಿ ಚಿಣ್ಣರಿಗಾಗಿ 50 ದಿನಗಳು ನಡೆದ ಕಂಪ್ಯೂಟರ್, ಚಿತ್ರಕಲೆ, ಯೋಗಾಭ್ಯಾಸ, ನೃತ್ಯ, ಇಂಗ್ಲಿಷ್ ಕಲಿಕೆ, ಕೇರಂ, ಚೆಸ್, ವಾಲಿಬಾಲ್, ಥ್ರೋಬಾಲ್, ರೀಗ್ ಸ್ಕಿಪ್ಪಿಂಗ್ ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಬೀಳ್ಕೊಡಲಾಯಿತು. ಯುಕೆಜಿ, ಎಲ್ಕೆಜಿ ಸೇರಿದಂತೆ ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 150 ಮಂದಿ ಭಾಗವಹಿಸಿ ಶಿಬಿರವನ್ನು ಯಶಸ್ಸಿಗೊಳಿಸುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಈ ಶಿಬಿರದಿಂದ ಪಡೆದರು. ಪ್ರಾಂಶುಪಾಲ ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಶಿಕ್ಷಕಿಯರಿಂದ ತರಬೇತಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

