ಮೈಸೂರು

ಕೆ.ಆರ್. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ತೆರೆಯಲು ಮನವಿ

Published On :

ಮೈಸೂರು: ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಕುಕ್ಕರಹಳ್ಳಿ ಕೆರೆ ಬಳಿ ರೈಲು ಮಾರ್ಗಕ್ಕೆ ಕೆಳ ಸೇತುವೆ ನಿರ್ಮಿಸಬೇಕು ಎಂದು ಬಿಜೆಪಿ ಪ.ಜಾತಿ ಮೋರ್ಚಾ ಅಧ್ಯಕ್ಷ ಮೈ.ಕಾ. ಪ್ರೇಮ್ಕುಮಾರ್ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದರು.
ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಈ ಮನವಿ ಸಲ್ಲಿಸಿದರು. ಬಡವರು ಮೂತ್ರಪಿಂಡದಲ್ಲಿ ಕಲ್ಲು ಇದ್ದರೆ ಖಾಸಗಿ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಇಲ್ಲ. ಆದ್ದರಿಂದ ಸಂಸದರ ನಿಧಿಯಿಂದ ಕೆ.ಆರ್. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ತೆರೆಸಬೇಕು ಎಂದು ಮನವಿ ಮಾಡಿದರು.
ಜೆಎಲ್ಬಿ ರಸ್ತೆಯಲ್ಲಿ ಸುಮಾರು 6 ಕಡೆ ಸಂಚಾರ ದೀಪ ಅಳವಡಿಸಲಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗಿದೆ. ಆದ್ದರಿಂದ ಕನಿಷ್ಠ 2 ಕಡೆ ಮೇಲ್ಸೇತುವೆ ನಿರ್ಮಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಕುಕ್ಕರಹಳ್ಳಿ ಕೆರೆಯ ಬಳಿಯ ರೇಲ್ವೆ ಗೇಟ್ ಆಗಾಗ ಹಾಕಲಾಗುತ್ತದೆ. ಇದರಿಂದ ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಅಲ್ಲಿ ಕೆಳ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.  



ಸೃಜನಶೀಲ ಬೀಜದ ಪೋಷಣೆ ಅವಶ್ಯಕ: ಪ್ರಹ್ಲಾದ್ ಅಭಿಮತ
ಸುತ್ತೂರು: ಸೃಜನಶೀಲತೆ ಎನ್ನುವುದು ಬೀಜವಿದ್ದಂತೆ. ಅದನ್ನು ಪೋಷಿಸುವುದು ಅವಶ್ಯಕ ಎಂದು ಎನ್ಸಿಇಆರ್ಟಿ ಸಲಹೆಗಾರ ಡಾ. ಎನ್.ಎನ್. ಪ್ರಹ್ಲಾದ ಶಿಕ್ಷಕರಿಗೆ ಸಲಹೆ ನೀಡಿದರು.  
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರಿ ಧಾರ್ಮಿಕ ದತ್ತಿ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿರುವ ನಾಲ್ಕು ದಿನಗಳ ಶಿಬಿರದಲ್ಲಿ ಮಾತನಾಡಿದ ಅವರು, ಸೃಜನಶೀಲತೆ ಎಲ್ಲರಲ್ಲೂ ಇರುವುದಿಲ್ಲ. ಏಕೆಂದರೆ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೃಜನ ಶೀಲರಲ್ಲ. ಅದು ಯಾವುದೇ ಕ್ಷೇತ್ರವಾಗಿರಬಹುದು. ಕೆಲವರಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿರಬಹುದು. ಅದನ್ನು ಗುರುತಿಸಿ ಪೋಷಿಸಬೇಕಷ್ಟೆ ಎಂದರು.  ಪರಿಸರ ಜಾಗೃತಿ ಎಂಬ ವಿಷಯ ಕುರಿತು ಮಾತನಾಡಿದ ಸಂಶೋಧಕ ಡಾ. ಖಾದರ್, ಮಾನವನ ದೈಹಿಕ ಸಹಜ ಪ್ರಕ್ರಿಯೆಗಳೆಲ್ಲ್ಲ ಈಗ ಅಸಹಜವಾಗಿ ನಡೆಯುತ್ತಿರುವುದಕ್ಕೆ ನಮ್ಮ ಆಹಾರ ಪದ್ಧತಿಯೂ ಕಾರಣವಾಗಿದೆ. ನಿತ್ಯ ಕುಡಿಯುತ್ತಿರುವ ಹಸುವಿನ ಹಾಲಿನಿಂದ ಮೊದಲ್ಗೊಂಡು ಅಡಿಗೆ ಎಣ್ಣೆ, ದವಸ ಧಾನ್ಯಗಳು, ಕೃತಕ ಉತ್ಪಾದಿತ ಮಾಂಸ, ಬೆಳೆಗಳಿಗೆ ಬಳಸುವ ಗೊಬ್ಬರದಿಂದಾಗಿ ಆಹಾರ ಪದಾರ್ಥಗಳೆಲ್ಲಾ ವಿಷಪೂರಿತ ರಾಸಾಯನಿಕಗಳಾಗಿ ಮಾರ್ಪಡುತ್ತಿವೆ. ದೇಶದ 280 ವೈವಿಧ್ಯಮಯ ತರಕಾರಿಗಳಲ್ಲಿ ನಾವು ಬಳಸುತ್ತಿರುವುದು ಕೇವಲ ನಾಲ್ಕೈದು ಮಾತ್ರ ಎಂದು ವಿಷಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.