ಮೈಸೂರು

ಆನಂದ್‌ಗೆ ಕುಸ್ತಿ ಪ್ರಶಸ್ತಿ

Published On :

ನಂಜನಗೂಡು: ಕೊಲ್ಲಾಪುರದ ಪೈ. ನಿರುಪಾದಿ ದಡ್ಡಿ ವಿರುದ್ಧ ಬೆಳಗಾವಿ ಕ್ರೀಡಾ ಶಾಲೆಯ ಪೈ. ಆನಂದ್ 12 ನಿಮಿಷದಲ್ಲಿ ಚಿತ್ ಮಾಡುವ ಮೂಲಕ 2014-15ರ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದರು.
ವಿದ್ಯಾವರ್ಧಕ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಹುಟ್ಟುಹಬ್ಬದ ಅಂಗವಾಗಿ ರಾಜ್ಯಮಟ್ಟದ 25 ಜೊತೆ ಕಾಟಾ ಕುಸ್ತಿ ನಡೆಯಿತು. ಸೋಲು ಗೆಲ್ಲುವ ತನಕ ನಡೆದ ರೋಮಾಂಚನ ಕುಸ್ತಿ ಪಂದ್ಯಾವಳಿ ಬೆಳಗಾವಿಯ ಪೈ.ಆನಂದ್ ಜಯಗಳಿಸಿದ್ದಾರೆ. ಒಂದು ಗಂಟೆಗಳ ಕಾಲ ನಡೆದ ಬೆಳಗಾವಿ ಕ್ರೀಡಾ ನಿಲಯದ ಕಾರ್ತಿಕ್ ಕಾಟೆ ಕೊಲ್ಲಾಪುರದ ಹತೀಶ್ ಮೋರೆ ಸಮಬಲ ಸಾಧಿಸಿದರು.
ಪೈ.ಶಿವು, ಲಕ್ಷ್ಮಣ್, ದೀಕ್ಷಿತ್, ಶಿವಕುಮಾರ್, ರಘು, ಚೇತನ್, ಪ್ರಶಾಂತನಾಯಕ್, ಮಂಜುನಾಥ್ ಗೆಲವಿನ ಕಹಳೆ ಮೊಳಗಿಸಿದರು, 13 ಜೊತೆಗಳು ಸಮಬಲ ಸಾಧಿಸಿದರು. ಪೈ. ಧನರಾಜ್ ಬೋಲಾ ಹಾಗೂ ಪೈ. ಚಂದ್ರಶೇಖರ ಕುಳ್ಳ ಇವರ ಕುಸ್ತಿ ರೋಮಾಂಚನವಾಗಿದ್ದು, ಕುಸ್ತಿ ಪ್ರೇಕ್ಷಕರಿಗೆ ಪೆಟ್ಟಿಗೆ ಪೆಟ್ಟು ಹಾಕುವ ಮೂಲಕ ರಸದೌತಣ ನೀಡಿ ರಂಜಿಸಿದರು. ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ನಶಿಸಿ ಹೋಗುತ್ತಿರುವ ಕುಸ್ತಿ ಕಲೆಯನ್ನು ನಂಜನಗೂಡಿನಲ್ಲಿ ಆಯೋಜಿಸಿ ಸಾವಿರಾರು ಜನರನ್ನು ಸೇರಿಸಿರುವುದು ಕುಸ್ತಿ ಪಟುಗಳಿಗೆ ಮರು ಜೀವ ನೀಡಿದಂತಾಗಿದೆ ಎಂದು ಹೇಳಿದರು.
6 ಕೋಟಿ ಅನುದಾನ: ಜೂನಿಯರ್ ಕಾಲೇಜು ಕ್ರೀಡಾಂಗಣ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 6 ಕೋಟಿ ಅನುದಾನ ಮಂಜೂರಾತಿ ದೊರೆತಿದ್ದು, ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ. ಈಗಾಗಲೇ ಒಂದು ಕೋಟಿ ರು. ಹಣ ಬಿಡುಗಡೆಯಾಗಿದೆ. ಈ ಕ್ರೀಡಾಂಗಣದಲ್ಲಿ ಕ್ರಿಕೆಟ್, ಫುಟ್‌ಬಾಲ್, ಈಜುಗೊಳ, ಬ್ಯಾಸ್ಕೆಟ್ ಬಾಲ್ ಸೇರಿದಂತೆ ವ್ಯಾಯಾಮ, ತರಬೇತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಆಧುನಿಕ ಸುಸಜ್ಜಿತ ಕ್ರೀಡಾಂಗಣವಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಲಾಗುವುದೆಂದರು.
ನಗರಪಾಲಿಕೆ ಸದಸ್ಯ ಮಾದೇಶ್ ಅವರು ಬೆಳಗಾವಿಯ ಪೈ. ಆನಂದ್ ಅವರಿಗೆ ಶ್ರೀ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಪುರಸಭಾ ಮಾಜಿ ಸದಸ್ಯ ಎನ್.ನರಸಿಂಹಸ್ವಾಮಿ, ಜಿಲ್ಲಾ ಕರವೇ ಅಧ್ಯಕ್ಷ ಪ್ರವೀಣ್‌ಕುಮಾರ್, ನಗರಾಧ್ಯಕ್ಷ ಕಿರಣ್‌ಕುಮಾರ್, ತಾ. ಅಧ್ಯಕ್ಷ ಪರಮೇಶ್, ಭಾಸ್ಕರ್, ಪುರಸಭಾ ಸದಸ್ಯ ಮಂಜುನಾಥ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್.ಶಿವಕುಮಾರ್, ಆರ್. ಗೋವರ್ಧನ್, ಉಮೇಶ್, ಅಶೋಕ್, ಮಹದೇವು, ಪರಂಜ್ಯೋತಿ, ಸರ್ಕಾರಿ ವಕೀಲ ನಂಜುಂಡಸ್ವಾಮಿ, ಹೇಮಂತ್‌ಗೌಡ, ನವೀನ್, ಭರತ್, ಗಂಗಾಧರಗೌಡ, ಪುರಸಭಾ ಮಾಜಿ ಉಪಾಧ್ಯಕ್ಷ ಶಿವಕುಮಾರ್, ಮಂಜುನಾಥ್, ಕೃಷ್ಣಕುಮಾರ್, ಹಿರಿಯ ಪೈ. ಹೊಸಹಳ್ಳಿ ಶಿವು, ಕುಸ್ತಿ ತರಬೇತುದಾರ ಮಲ್ಲುಸ್ವಾಮಿ, ಎನ್.ಎಸ್. ಶಿವನಾಗಪ್ಪ, ಸಿದ್ದರಾಜು, ಇಂದ್ರ, ಶ್ರೀಕಂಠು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.