ಪೌರ ಕಾರ್ಮಿಕ ಸಾವು; ಕಠಿಣ ಕ್ರಮಕ್ಕೆ ಆಗ್ರಹ
ಮೈಸೂರು: ಮ್ಯಾನ್ಹೋಲ್ ಸ್ವಚ್ಛತೆಗೆ ಇಳಿದ ಪೌರ ಕಾರ್ಮಿಕ ಕುಮಾರ ಎಂಬಾತ ಸಾವಿಗೀಡಾಗಿರುವ ಪ್ರಕರಣದ ಬಗ್ಗೆ ಪೊಲೀಸರು ಹಾಗೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಿಯುಸಿಎಲ್ ರಾಜ್ಯ ಕಾರ್ಯದರ್ಶಿ ಡಾ.ವಿ. ಲಕ್ಷ್ಮೀನಾರಾಯಣ, ಜಿಲ್ಲಾ ಕಾರ್ಯದರ್ಶಿ ಮರಿದಂಡಯ್ಯ ಬುದ್ಧ ಆಗ್ರಹಿಸಿದ್ದಾರೆ. ಪೌರ ಕಾರ್ಮಿಕರಿಗೆ ಆತ್ಮಗೌರವದ ಜೀವನ ಕಲ್ಪಿಸುವುದು ಇಡಿ ಸಮಾಜದ ಜವಾಬ್ದಾರಿ. ಇದಕ್ಕಾಗಿ ಸರ್ಕಾರ ಕ್ರಿಯಾಶೀಲವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (75 ಸಿಪಿಸಿ ಮತ್ತು 19 ಮಹಿಳಾ ಪಿಸಿ) ಹುದ್ದೆಗಳಿಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.27 ಕೊನೆಯ ದಿನ. ಅರ್ಹ ಅಭ್ಯರ್ಥಿಗಳು ಢಿಢಿಢಿ.್ಞಡಠ.್ಜ್ಟಢ.್ಝಟಿ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ವಯೋವುತಿ 27 ವರ್ಷದೊಳಗಿರಬೇಕು. ಇತರೆ ಅಭ್ಯರ್ಥಿಗಳಿಗೆ ವಯೋವುತಿ 25 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 100 ಹಾಗೂ ಇತರೆ ಅಭ್ಯರ್ಥಿಗಳಿಗೆ 250 ಪರೀಕ್ಷಾ ಶುಲ್ಕ ನಿಗದಿಯಾಗಿದೆ. ಎಸ್ಬಿಎಂ ಅಥವಾ ಎಸ್ಬಿಎಂ ಶಾಖೆ ಇಲ್ಲದ ಪ್ರದೇಶದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ನಲ್ಲಿ ಪಾವತಿಸಬಹುದಾಗಿದೆ. ಆಸಕ್ತರು ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.
ನಾಗಲಕ್ಷ್ಮೀಗೆ ಪಿಎಚ್.ಡಿ
ಡಾ.ವೈ.ಸಿ. ನಂಜುಂಡಯ್ಯ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಎನ್. ನಾಗಲಕ್ಷ್ಮೀ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಸಂಸ್ಕೃತ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಪ್ರಸ್ತುತ ನಾಗಲಕ್ಷ್ಮೀ ಅವರು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬ್ಯೂಟಿಷಿಯನ್ ಉದ್ಯೋಗ ಮೇಳ
ಮೈಸೂರು: ಲೇಬರ್ ಸಂಸ್ಥೆ ವತಿಯಿಂದ ಜೀವನಾಧಾರ ಕೇಂದ್ರದಲ್ಲಿ ಇತ್ತೀಚೆಗೆ ಬ್ಯೂಟಿಷಿಯನ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಜೆ. ವಿಜಯಕುಮಾರ್ ಚಾಲನೆ ನೀಡಿದರು. ಉದ್ಯೋಗ ಅಧಿಕಾರಿ ಜಾನ್ಸನ್ ಅತಿಥಿಯಾಗಿ ಭಾಗವಹಿಸಿದ್ದರು. ಮೇಳದಲ್ಲಿ ಹೆಸರಾಂತ ಸಂಸ್ಥೆಗಳಾದ ಸ್ಪಾರ್ಕ್ ಬ್ಯೂಟಿ ಜೋನ್, ವಿವೆಲ್ಲಾ, ಪ್ಲೆಸೆಂಟ್ ಬ್ಯೂಟಿ ಜೋನ್, ಅಹಲ್ಯಾ ಬ್ಯೂಟಿ ಕೇರ್ ಮುಂತಾದ ಸಂಸ್ಥೆಗಳು ಪಾಲ್ಗೊಂಡು ಕೌಶಲ್ಯವುಳ್ಳ ಕಲಾವಿದರನ್ನು ಆಯ್ಕೆ ಮಾಡಿಕೊಂಡವು. ಆಸಕ್ತರು ಮೊ. 72040 725651 ಸಂಪರ್ಕಿಸಬಹುದು.
ವಿಶ್ವ ಟೆನ್ನಿಸ್ ದಿನಾಚರಣೆ
ಮೈಸೂರು ಟೆನ್ನಿಸ್ ಕ್ಲಬ್ ವತಿಯಿಂದ ವಿಶ್ವ ಟೆನ್ನಿಸ್ ದಿನವನ್ನು ಸೋಮವಾರ ಆಚರಿಸಲಾಯಿತು. ಚಾಮರಾಜಪುರಂನ ಕ್ಲಬ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಗರ ಪಾಲಿಕೆ ಸದಸ್ಯ ಎಸ್. ಬಾಲು ಉದ್ಘಾಟಿಸಿದರು. ಹೆಸರಾಂತ ವೈದ್ಯ ಡಾ.ಎಸ್.ಎನ್ ಮೋತಿ ಟೆನ್ನಿಸ್ ಆಡುವ ಮೂಲಕ ಕ್ರೀಡೆ ಚಾಲನೆಗೊಳಿಸಿದರು. ಕ್ಲಬ್ ಅಧ್ಯಕ್ಷ ಡಾ.ಎನ್.ಎಂ. ಶ್ರೀನಿವಾಸ್. ಖಜಾಂಚಿ ಎಂ. ಅಶೋಕ್ ಶೆಣೈ, ಗೌರವ ಕಾರ್ಯದರ್ಶಿಗಳಾದ ವಿ.ಎಸ್.ಕೆ ಅರಸ್ ಮತ್ತು ಎಲ್.ಎಂ. ಮನೋಜ್ಕುಮಾರ್, ಸದಸ್ಯರಾದ ಎಂ.ವಿ. ಪ್ರಮೋದ್, ಆರ್.ಎನ್. ರಮೇಶ್, ಕೆ. ಮುದ್ದೇಗೌಡ ಹಾಗೂ ಬಿ. ಪ್ರಶಾಂತ್ ಇದ್ದರು.
ಉಪನ್ಯಾಸ ಮಾಲೆ
ಮೈಸೂರು ವಿವಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಯುಜಿಸಿ ನಾವೀನ್ಯತೆ- ಉಪನ್ಯಾಸ ಮಾಲೆ ಪ್ರಯುಕ್ತ ಮಾ. 5ರ ಬೆಳಗ್ಗೆ 11.30ಕ್ಕೆ ತೋಟಗಾರಿಕೆ ವಿಜ್ಞಾನ ಪ್ರಾಧ್ಯಾಪಕ ಡಾ. ಕಾಳಿದಾಸ ಶೆಟ್ಟಿ ಉಪನ್ಯಾಸ ನೀಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

