ನಾಳೆ ಖಾದ್ರಿಯ ಪವಿತ್ರ ಉರುಸ್
ಕೆ.ಆರ್. ನಗರ: ಪಟ್ಟಣದ ಖಾದ್ರಿಯಾ ಉರುಸ್ ಕಮಿಟಿ ವತಿಯಿಂದ ಮಾ. 8ರಂದು ರಾತ್ರಿ 7ಕ್ಕೆ ಪಟ್ಟಣದ ಹೊರ ವಲಯದಲ್ಲಿರುವ ಸರ್ವ ಧರ್ಮಗಳ ಭಾವೈಕ್ಯತೆಯ ಸಮನ್ವಯ ಪ್ರಸಿದ್ಧ ಹಳೆ ಎಡತೊರೆಯ ದರ್ಗಾದಲ್ಲಿ ಹಜರತ್ ಖಾದರ್ ಲಿಂಗಾವಲಿ ಮತ್ತು ಹಜರತ್ ಜಲಾಲ್ ಷಾ ಖಾದ್ರಿರವರ ಶುಭ ಗಂಧೋತ್ಸವ (ಉರುಸ್) ವಿಜೃಂಭಣೆಯಿಂದ ನಡೆಯಲಿದೆ.
ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಸಮೀಪದಲ್ಲಿರುವ ಈ ಸ್ಥಳ ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಎತ್ತಿ ಹಿಡಿದಿದೆ. ಪವಿತ್ರ ಪುಣ್ಯ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಇಲ್ಲಿಗೆ ಧರ್ಮಾತೀತವಾಗಿ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಹರಕೆ ತೀರಿಸುತ್ತಾರೆ. ಅವರ ಬೇಡಿಕೆಗಳು ನೂರಕ್ಕೆ ನೂರರಷ್ಟು ಫಲಿಸಿರುವ ಉದಾಹರಣೆಗಳಿದ್ದು, ಇಲ್ಲಿಗೆ ಸಾವಿರಾರು ಭಕ್ತಾದಿಗಳು ಬರುತ್ತಾರೆ.
ಈಗಾಗಲೇ ಕಮಿಟಿ ವತಿಯಿಂದ ಗಂಧೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಅಂದು ಮಧ್ಯಾಹ್ನ 3.30ಕ್ಕೆ ಪಟ್ಟಣದ ಜಾಮಿಯಾ ಮಸೀದಿ ಆವರಣದಿಂದ ಅಪಾರ ಭಕ್ತರ ನೇತೃತ್ವದಲ್ಲಿ ಮಹಾ ಬಡಾವಣೆಯ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಗರುಡಗಂಬದ ವೃತ್ತ, ವಾಣಿ ವಿಲಾಸ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ತೆರಳಿ ರಾತ್ರಿ 7ಕ್ಕೆ ದರ್ಗಾದ ಬಳಿ ತಲುಪಿ ಗಂಧೋತ್ಸವ ನೆರವೇರಿಸಲಾಗುವುದು.
ರಾತ್ರಿ 9ಕ್ಕೆ ದೇಶದ ಪ್ರಖ್ಯಾತ ಖವ್ವಾಲಿ ತಂಡದಿಂದ ಭಕ್ತಿಗೀತೆ ಆಯೋಜಿಸಿದೆ. ಜಾಮಿಯಾ ಮಸೀದಿಯ ಧಾರ್ಮಿಕ ಮಹಾ ಗುರುಗಳಾದ ಮಹಮದ್ ಇಬ್ರಾಹಿಂ ರಜಾ ಅಜ್ ಹರಿ ಮತ್ತು ಶಾಫಿ ಮಸೀದಿ ಧರ್ಮಗುರು ನಸ್ರುದ್ದೀನ್ ಮುಸ್ಲಿಯಾರ್ ಇವರಿಂದ ಭಾವೈಕ್ಯತಾ ಸದ್ಭಾವನಾ ಪ್ರವಚನ ನೀಡುವರು.
ಉದ್ಘಾಟನೆಯನ್ನು ಶಾಸಕ ಸಾ.ರಾ. ಮಹೇಶ್ ನೆರವೇರಿಸಲಿದ್ದು, ಮೂಳೆ ತಜ್ಞ ಡಾ. ಮೆಹಬೂಬ್ಖಾನ್ ಅಧ್ಯಕ್ಷತೆ ವಹಿಸುವರು. ಸಂಸದರಾದ ರಮ್ಯಾ, ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಸೂಫಿಮೊಕ್ತಾರ್ ಅಹಮದ್, ಉಪಾಧ್ಯಕ್ಷ ಸೈಯದ್ ತಾಜುದ್ದೀನ್ ಷಾ ಖಾದ್ರಿ ಸೇರಿದಂತೆ ಸದಸ್ಯರು ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

