ಮೈಸೂರು

ವಿದ್ವಾನ್ ರಾಜಪ್ಪ ಸಂಸ್ಮರಣೆ ಸಂಗೀತೋತ್ಸವ

Published On :

ಮೈಸೂರು: ಅರಮನೆಯ ಆಸ್ಥಾನ ಮೃದಂಗ ವಿದ್ವಾನ್ ಹಾಗೂ ಕರ್ನಾಟಕ ಕಲಾತಿಲಕ ಎಂ.ಆರ್. ರಾಜಪ್ಪ ಹಾಗೂ ಸರೋಜಮ್ಮ ರಾಜಪ್ಪ ಅವರ ಪುಣ್ಯ ಸ್ಮರಣೆ ಅಂಗವಾಗಿ ಏರ್ಪಡಿಸಿರುವ ಎರಡು ದಿನಗಳ ಸಂಗೀತೋತ್ಸವವು ಜಗನ್ಮೋಹನ ಅರಮನೆಯಲ್ಲಿ ನಡೆಯಿತು.
ಸ್ನೇಹ ಭಾರತಿ ಮಹಿಳಾ ಸಮಾಜ ಹಾಗೂ ರಾಜಪ್ಪನವರ ಮಕ್ಕಳು ಮತ್ತು ಕುಟುಂಬ ಸದಸ್ಯರು ಏರ್ಪಡಿರುವ ಈ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಕೃತ ಪಂಡಿತ ಡಾ. ಪರ್ವತರಾಜು, ಶಿಕ್ಷಣ ಪಡೆದು ಪದವೀಧರರಾಗುವುದರ ಜತೆಗೆ ನಮ್ಮ ಕಲೆ, ಸಂಗೀತ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಇಂದಿನ ಯುವಜನತೆ ಮುಂದಾಗಬೇಕು ಎಂದರು. ಕಾರ್ಯಕ್ರಮವನ್ನು ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕಿ ಡಾ. ವಸುಂಧರ ದೊರೆಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ವಾನ್ ಮರಿಸ್ವಾಮಿ, ಭರತನಾಟ್ಯ ಕಲಾವಿದೆ ಕೃಷ್ಣವೇಣಿ ಹಾಗೂ ಚೇತನ ರಾಧಾಕೃಷ್ಣ ಅವರನ್ನು ಸನ್ಮಾನಿಸಲಾಯಿತು.  ನಂತರ ಬೆಂಗಳೂರಿನ ಕೆ. ಕಲಾಶ್ರೀ ಎಸ್. ಕೃಷ್ಣಮೂರ್ತಿ ಅವರಿಂದ ಭರತನಾಟ್ಯ ಹಾಗೂ ಗಾಯಕಿ ಕೋಮಲಾ ಪೋತರಾಜ್ ಅವರಿಂದ ಸಂಗೀತ  ಗಾಯನ ನಡೆಯಿತು. ಚಿತ್ರ ನಿರ್ಮಾಪಕ ಚನ್ನೇಗೌಡ, ಕಲಾ ಪೋಷಕ ಶ್ರೀನಿವಾಸ್, ಕಾರ್ಯಕ್ರಮ ಸಂಯೋಜಕ ಎಂ.ಆರ್. ಹನುಮಂತರಾಜು ಇದ್ದರು.

ಮಹಿಳೆಯರಿಗಾಗಿ ರಾಯಲ್ ನಡಿಗೆ
ಮೈಸೂರು: ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಕೈಗಾರಿಕಾ ಒಕ್ಕೂಟ ಹಾಗೂ ಮೈಸೂರು ಪಾರಂಪರಿಕ ನಡಿಗೆ ಸಂಸ್ಥೆಯ ಸಹಯೋಗದೊಂದಿಗೆ ಭಾನುವಾರ ನಗರದಲ್ಲಿ ರಾಯಲ್ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಇತಿಹಾಸದ ತುಂಬಾ ಪುರುಷ ಪ್ರಧಾನವೇ ಕೆಲಸ ಮಾಡಿರುವಂತೆ ತೋರಿಸಲಾಗಿದೆ. ಆದರೆ, ರಾಯಲ್ ನಡಿಗೆಯು ಮಹಿಳೆಯರ ಯಶೋಗಾಥೆ ತಿಳಿಸುವ, ಇತಿಹಾಸದ ಪುಟದಲ್ಲಿ ಹುದುಗಿ ಹೋಗಿರುವ ಸಬಲರಾದ ಮಹಿಳೆಯರ ಬಗೆಗೆ ಸಾರ್ವಜನಿಕರಿಗೆ ವಿಚಾರ ಮುಟ್ಟಿಸುವ ಪ್ರಯತ್ನ ಮಾಡಲಾಯಿತು. ಸಮಾಜ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ, ನಗರದ ಪ್ರಮುಖ ರಸ್ತೆಗಳಿಗೆ ಮಹಿಳೆಯರ ನಾಮಕರಣ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ತಿಳಿಸಲಾಯಿತು ಎಂದು ರಾಯಲ್ ಮೈಸೂರ್ ವಾಕ್ಸ್ನ ವಿನಯ್ ನಾಗರಾಜು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.