ಮೈಸೂರು

ಅಮರ ಶಿಲ್ಪಿ ವೇದಿಕೆ ಕಚೇರಿ ಉದ್ಘಾಟನೆ

Published On :

ಮೈಸೂರು: ಹೆಬ್ಬಾಳು ಮೊದಲನೇ ಹಂತದ ಸೂರ್ಯ ಬೇಕರಿ ಬಳಿ ತೆರೆಯಲಾಗಿರುವ ಅಮರ ಶಿಲ್ಪಿ ವೇದಿಕೆಯ ಕಚೇರಿಯನ್ನು ಭಾನುವಾರ ಉದ್ಘಾಟಿಸಲಾಯಿತು. ಕಚೇರಿ ಉದ್ಘಾಟಿಸಿ ಮಾತನಾಡಿದ ನಗರ ಪಾಲಿಕೆ ಸದಸ್ಯ ಕೆ.ಟಿ. ಚಲುವೇಗೌಡ, ವಿಶ್ವಕರ್ಮ ಸಮಾಜವು ಎಲ್ಲಾ ಜಾತಿಯವರಿಗೆ ತುಂಬಾ ಬೇಕಾದ ಸಮುದಾಯ. ಅದರಲ್ಲೂ ರೈತರ ಕೃಷಿ ಕಾಯಕಕ್ಕೆ ಇವರು ಮಾಡಿಕೊಡುವ ಸಾಧನಗಳು ಬೇಕೆಬೇಕು. ಅಂತಹ ಸಾಧನ ಸಲಕರಣೆಗಳನ್ನು ಬಳಸುತ್ತಾ ನಮ್ಮ ಪೂರ್ವಿಕರ ಕಾಲದಿಂದ ದವಸ, ಧಾನ್ಯಗಳನ್ನು ಬೆಳೆಯುತ್ತಿದ್ದಾರೆ ಎಂದರು. ಈ ಬಡಾವಣೆಯ ಸುತ್ತಮುತ್ತ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ವಿಶ್ವಕರ್ಮರು ವಾಸಿಸುತ್ತಿದ್ದಾರೆ. ಆದರೆ ಅವರೆಲ್ಲ ಸಂಘಟಿತರಾಗುವ ಅಗತ್ಯವಿದೆ. ಇಲ್ಲದೆ ಹೋದರೆ ಸರ್ಕಾರದ ಸವಲತ್ತುಗಳನ್ನು ಹಾಗೂ ಹಕ್ಕುಗಳನ್ನು ಚಲಾಯಿಸುವುದು ಕಷ್ಟವಾಗಲಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿನಕಲ್ ಗ್ರಾಪಂ ಸದಸ್ಯ ಪ್ರಕಾಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ನವಭಾರತ ನಿರ್ಮಾಣ್ ಟ್ರಸ್ಟ್ ಅಧ್ಯಕ್ಷ ಕೆ.ವಿ. ಶ್ರೀಧರ್ ಮುಖ್ಯ ಅತಿಥಿಯಾಗಿದ್ದರು. ಕೆ.ಆರ್. ನಗರ ಪುರಸಭೆ ಮಾಜಿ ಸದಸ್ಯ ಕೆ.ಎಸ್. ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ಎ. ಗೋಪಾಲಾಚಾರ್ ಪ್ರಾಸ್ತಾವಿಕ ಮಾತುಗಳಾಡಿದರು. ಸಂಘಟನಾ ಕಾರ್ಯದರ್ಶಿ ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಕಾರ್ಯದರ್ಶಿ ಎನ್. ಸ್ವಾಮಿ ನಿರೂಪಿಸಿದರು.

ರಕ್ಷಣಾ ಪಡೆ ಸೇರ್ಪಡೆಗೆ ಅರಿವು ಕಾರ್ಯಕ್ರಮ
ಮೈಸೂರು: ಧ್ರುತಿ ಡಿಫೆನ್ಸ್ ಕಾಲೋನಿ ಸಂಸ್ಥೆ ವತಿಯಿಂದ ನಗರದ ಓವಲ್ ಮೈದಾನದಲ್ಲಿ ಭಾರತೀಯ ರಕ್ಷಣಾ ಪಡೆಗೆ ಕುರಿತ ಅರಿವು ಕಾರ್ಯಕ್ರಮ ಭಾನುವಾರ ನಡೆಯಿತು.
ಈ ಅರಿವು ಕಾರ್ಯಕ್ರಮಕ್ಕೆ ವಾಯುದಳದ ನಿವೃತ್ತ ದಂಡಾಧಿಕಾರಿ ಭಾನುಪ್ರಕಾಶ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬಾಲಕರ ವಿಭಾಗದಲ್ಲಿ ಉತ್ಸವ್ ರಮೇಶ್(ಪ್ರಥಮ), ಜೆ.ಎಸ್. ರವಿ(ದ್ವಿತೀಯ) ಮತ್ತು ಸುಮನ್ ನೋವಾ(ತೃತೀಯ). ಬಾಲಕಿಯರ ವಿಭಾಗದಲ್ಲಿ ಕೆ.ಆರ್. ಮೇಘನಾ(ಪ್ರಥಮ), ಎಸ್.ಕೆ. ಅರ್ಪಿತಾ(ದ್ವಿತೀಯ) ಮತ್ತು ಬಿ.ಎನ್. ಶ್ವೇತಾ(ತೃತೀಯ) ಬಹುಮಾನ ಪಡೆದರು. ಇದೇ ವೇಳೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಧರಣಪ್ಪ, ವಾಯುದಳದ ನಿವೃತ್ತ ಅಧಿಕಾರಿಗಳಾದ ರಾಮಕೃಷ್ಣ, ರಾಮಚಂದ್ರ, ಶ್ರೀನಿವಾಸ್, ನಾಗಭೂಷಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.