ಮೈಸೂರು

ತೆಂಗು ಬೆಳೆಗಾರರು ವಿಮೆ ಸೌಲಭ್ಯ ಪಡೆಯಿರಿ

Published On :

ಹುಣಸೂರು: ಸರ್ಕಾರ ತೆಂಗಿನ ಮರಕ್ಕೂ ವಿಮೆ ಸೌಲಭ್ಯ ಕಲ್ಪಿಸಿದ್ದು, ತೆಂಗು ಬೆಳೆಗಾರರು ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತೆಂಗು ಮಂಡಳಿ ಉಪನಿರ್ದೇಶಕ ವಿಜಯಕುಮಾರ್ ಮನವಿ ಮಾಡಿದರು.
ತಾಲೂಕಿನ ಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ತೆಂಗು ಉತ್ಪಾದಕರ ಫೆಡರೇಷನ್‌ನನ್ನು ಉದ್ಘಾಟಿಸಿ ಅವರು ಮಾತನಾಡಿದರು. 15 ವರ್ಷದ ಒಂದು ತೆಂಗಿನ ಮರ ಒಣಗಿದರೆ ಅಥವಾ ನಾಶವಾದರೆ ವಿಮೆ ಸೌಲಭ್ಯ 1,750 ಪರಿಹಾರ ಸಿಗಲಿದೆ. ಇದಕ್ಕಾಗಿ ಬೆಳೆಗಾರರು ಪ್ರತಿ ತೆಂಗಿನ ಮರಕ್ಕೆ ವರ್ಷಕ್ಕೆ 1.40 ವಿಮೆ ಕಂತು ಕಟ್ಟಬೇಕು. ಉಳಿಕೆ ಹಣವನ್ನು ತೆಂಗು ಮಂಡಳಿ ಮತ್ತು ಸರ್ಕಾರ ಭರಿಸಲಿದೆ, ತೆಂಗು ಬೆಳೆಗಾರರಿಗೆ ಸರ್ಕಾರಿ ಸವಲತ್ತನ್ನು ತೆಂಗು ಬೆಳೆಗಾರರ ಸಂಘ, ಒಕ್ಕೂಟದ ಮೂಲಕ ನೀಡಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ ಗ್ರಾಮೀಣ ಭಾಗದ ರೈತರು ಒಗ್ಗಟ್ಟಾಗಿ ಸಂಘ ಸ್ಥಾಪಿಸಿ, ಸಂಘಗಳು ಸ್ಥಾಪಿಸಿದ ನಂತರದಲ್ಲಿ ಒಕ್ಕೂಟ ರಚಿಸಿಕೊಂಡು, ರೈತರಿಂದ ನೇರವಾಗಿ ಎಳನೀರು, ತೆಂಗಿನಕಾಯಿ ಖರೀದಿಸಿ ಒಕ್ಕೂಟದ ವತಿಯಿಂದ ಮಾರುಕಟ್ಟೆ ಸ್ಥಾಪಿಸಿ, ಶೇ.5ರಷ್ಟು ಲಾಭವನ್ನು ಒಕ್ಕೂಟದ ಖರ್ಚು ವೆಚ್ಚಕ್ಕೆ ಬಳಸಿಕೊಳ್ಳಿ, ಇದರಿಂದ ರೈತರಿಗೂ, ಒಕ್ಕೂಟಕ್ಕೂ ಲಾಭ ಬರಲಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಮಹಿಳಾ ತೆಂಗು ಬೆಳೆಗಾರರ ಸಹಕಾರ ಸಂಘದ ತಾಲೂಕು ಅಧ್ಯಕ್ಷೆ ಕಲ್ಪನಾ, ತೆಂಗು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ನೇತ್ರಾವತಿ, ತೆಂಗು ಬೆಳೆಗಾರರ ಜಿಲ್ಲಾ ಉಸ್ತುವಾರಿ ಅಧಿಕಾರಿ ಲತಾರಾಣಿ, ಭರತ್ ಮಾತನಾಡಿದರು. ಕಲ್ಪವೃಕ್ಷ ಫೆಡರೇಷ್‌ನ ನಿರ್ದೇಶಕರಾದ ಶಿವಕುಮಾರ್, ಗಜೇಂದ್ರ, ಸತೀಶ್, ಖಜಾಂಚಿ ಲೋಕೇಶ್, ನವೀನ್, ಕೃಷ್ಣೇಗೌಡ, ಬಾಲಾಜಿ, ರೈತರು ಭಾಗವಹಿಸಿದ್ದರು.

ನೀರಿನ ಸಮಸ್ಯೆ ನೀಗಿಸುವಂತೆ ಗ್ರಾಮಸ್ಥರ ಮನವಿ
ಪಿರಿಯಾಪಟ್ಟಣ: ತಾಲೂಕಿನ ಮುದ್ದನಹಳ್ಳಿ ಗೇಟ್ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಪಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮದಲ್ಲಿ ಹಲವಾರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಬೋರ್‌ವೆಲ್ ತೆಗೆಯಲಾಗಿದೆ. ಆದರೆ ಬೋರ್‌ವೆಲ್‌ನಿಂದ ನೀರಿನ ಟ್ಯಾಂಕಿಗೆ ಪೈಪ್ ಲೈನ್ ವ್ಯವಸ್ಥೆ ಮಾಡದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಈ ಬಗ್ಗೆ ಹಲವಾರು ಬಾರಿ ಗ್ರಾಪಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಚುನಾವಣಾ ಬಹಿಷ್ಕಾರದ ಎಚ್ಚರಿಕೆ: 10 ದಿನದ ಒಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಪಂ ಆವರಣದಲ್ಲಿ ಧರಣಿ ಕೂರುತ್ತೇವೆ. ಅಲ್ಲದೇ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಇಒ ಪರವಾಗಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ತಿಮ್ಮೇಗೌಡ ಮನವಿ ಪತ್ರ ಸ್ವೀಕರಿಸಿದರು. ಗ್ರಾಮಸ್ಥರಾದ ಪ್ರಸನ್ನಕುಮಾರಿ, ಶೋಭಾ, ನೀಲಮ್ಮ, ಅನಸೂಯ, ಬಿಜೆಪಿ ಮುಖಂಡ ವಿಕ್ರಂರಾಜ್, ಕರ್ನಾಟಕ ಕಾವಲು ಪಡೆ ತಾಲೂಕು ಅಧ್ಯಕ್ಷ ಸುಬ್ರಮಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.