13 ರಿಂದ ಟೆಕ್ನಿಕ್ಸ್- ತಾಂತ್ರಿಕ, ಸಾಂಸ್ಕೃತಿಕ ಹಬ್ಬ
ಮೈಸೂರು: ಎನ್ಐಇ ಕಾಲೇಜಿನ ಟೆಕ್ನಿಕ್ಸ್-14 ವಾರ್ಷಿಕ ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬವನ್ನು ಮಾ.13 ರಿಂದ 15 ರವರೆಗೆ ಆಯೋಜಿಸಲಾಗಿದೆ ಎಂದು ಟೆಕ್ನಿಕ್ಸ್ ವಿದ್ಯಾರ್ಥಿ ಸಂಯೋಜಕ ಪವನ್ ನಾಯಕ್ಹೇಳಿದರು.
ಭಾರತೀಯ ಚಲನಚಿತ್ರರಂಗದ ಶತಮಾನೋತ್ಸವ ಆಚರಣೆ ಬಿಂಬಿಸುವಂತೆ ಈ ಬಾರಿಯ ಟೆಕ್ನಿಕ್ಸ್ ಉತ್ಸವ ರೂಪಿಸಲಾಗಿದೆ.
ಮಾ.13ರ ಬೆಳಗ್ಗೆ 9.30ಕ್ಕೆ ಸರ್ ಎಂ.ವಿ. ಸಭಾಂಗಣದಲ್ಲಿ ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದೇ ದಿನ ಖ್ಯಾತ ರಾಕ್ ಬ್ಯಾಂಡ್ ತಂಡದ ಲಗೋರಿ ಅವರಿಂದ ಸಂಗೀತ ಕಾರ್ಯಕ್ರಮ, ರಾಕ್ ಅರೇನಾ ಏರ್ಪಡಿಸಲಾಗಿದೆ. ಜೊತೆಗೆ ಕೌಂಟರ್ ಸ್ಟ್ರೈಕ್, ಲೋಗೋ ಕ್ವಿಜ್, ಮಿನಟ್ ಟು ವಿನ್ ಇಟ್, ಎನ್ಐಇ ರೋಡೀಸ್, ಬ್ಯಾಟಲ್ ಫೀಲ್ಡ್, ಚೌಕಾಬಾರಾ, ಖೋಜ್, ಬ್ರೈನ್ ಸ್ಪೈಟನ್, ಮೆಹಂದಿ, ಆಟೋ ಕ್ವಿಜ್, ಥ್ರೀ ಲೆಗ್ಗಡ್ ರೇಸ್, ಟಾಮ್, ಡಿಕ್ ಆ್ಯಂಡ್ ಹ್ಯಾರಿ, ಸ್ಲೋ ಬೈಕ್ ರೇಸ್ ಆಯೋಜಿಸಲಾಗಿದೆ ಎಂದರು. ಮಾ.14 ರಂದು ಕಲಾವಿದ ವಿನಯ್ ಹೆಗಡೆ ಅವರಿಂದ ಗ್ಲೋ ಆರ್ಟ್, ಫಿಫಾ, ಇಂಡಿಯನ್ ಮೂವಿ ಕ್ವಿಜ್, ಮೇಜ್ ಚಾಲೆಂಜ್, ಉಲ್ಟಾ ಚೆಸ್, ಬ್ಯಾಟಲ್ ಫೀಲ್ಡ್, ಕೇರಂ, ಫ್ಲಾಪಿ ಬರ್ಡ್, ಇಮೇಜ್ ಚೆಫ್, ಟಾಸ್ಕ್ ಇನ್ 2 ಮಿನಟ್ಸ್, ಸ್ಪೆಲ್ಲಥಾನ್, ಕರೋಕೆ, ಮನರಂಜನಾ ಕ್ವಿಜ್, ಸ್ಲೋ ಬೈಕ್ ರೇಸ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಾ.15 ರಂದು ಕ್ರೀಡಾ ಕ್ವಿಜ್, ಬಿಟ್ವೀನ್ ದ ನೆಟ್ಸ್, ಬ್ಯಾಟಲ್ ಫೀಲ್ಡ್, ಪೇ ಆ್ಯಂಡ್ ಪ್ಲೇ, ಟಗ್ ಆಫ್ ವಾರ್, ಎಕ್ಸ್ಟ್ರಾ ಬ್ರೈನ್, ರೋಪ್ ಕ್ಲೈಂಬಿಂಗ್, ಜನರಲ್ ಕ್ವಿಜ್, ಲಗೋರಿ, ಮರ್ಡರ್ ಇನ್ ದಿ ಜಂಗಲ್ ಹಾಗೂ ಸ್ಲೋ ಬೈಕ್ ರೇಸ್ ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಎನ್ಐಇ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಎನ್ಐಇ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಪಿ.ಎಂ.ಆರ್. ಭಂಡಾರ್ಕರ್, ಟೆಕ್ನೀಕ್ಸ್ನ ಎಸ್.ಆರ್. ಗಾಯಕ್ವಾಡ್, ಕೆ.ಎಂ. ಸುಬ್ಬಯ್ಯ, ಕವನ್ ದೀಪ್, ಸಿ.ಎಸ್. ಶರಣ್, ರೂಪಾ ಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

