ಯುಪಿಎ ವಿರುದ್ಧ ಹೆಚ್ಚುತ್ತಿರುವ ಅಲೆ: ಶಿವಣ್ಣ
ಎಚ್.ಡಿ. ಕೋಟೆ: ಸಂಸದ ಆರ್.ಧ್ರುವನಾರಾಯಣ್ ಯೋಜನೆಗಳು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಲೋಕಸಭಾ ಜೆಡಿಎಸ್ ಅಭ್ಯರ್ಥಿ ಎಂ.ಶಿವಣ್ಣ ಹೇಳಿದರು.
ತಾಲೂಕಿನ ಸವ್ವೆ ಗ್ರಾಪಂ ವ್ಯಾಪ್ತಿಯ ಗೂಳಿಕಟ್ಟೆಯಲ್ಲಿ ಶುಕ್ರವಾರ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರದ ಯುಪಿಎ ಸರ್ಕಾರದ ಬೆಲೆ ಏರಿಕೆಯಿಂದ ದೇಶದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ಈ ಬಾರಿ ಚಾಮರಾಜನಗರದಲ್ಲಿ ಜೆಡಿಎಸ್ ಜಯ ಗಳಿಸಲಿದೆ ಎಂದು ತಿಳಿಸಿದರು.
ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಅಲೆ ಹೆಚ್ಚಾಗಿ ಕಂಡುಬರುತ್ತಿದ್ದು, ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ದಲಿತ ಮತಗಳನ್ನು ಪಡೆಯುವುದಕ್ಕಾಗಿ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಾಗುವುದೆಂದು ತಿಳಿಸಿದ್ದರು. ಇದಾದ ಬಳಿಕ ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗುವುದೆಂದು ತಿಳಿಸಿದ್ದು, ಅದೂ ಸಹ ಮಾಡಲಿಲ್ಲ. ಇದರಿಂದ ದಲಿತರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಹಾಗೂ ಪಕ್ಷದಲ್ಲಿ ಆಂತರಿಕ ಕಲಹ ಆರಂಭವಾಗಿದೆ ಎಂದು ಹೇಳಿದರು.
ಮಾಜಿ ಮಂತ್ರಿ ಅಬ್ದುಲ್ ನಜೀರ್ ಸಾಬ್ ಅವರ ಪುತ್ರ ಮುನೀರ್ ಅಹಮದ್ ಏ.1 ರಂದು ಚಾಮರಾಜನಗರದಲ್ಲಿ ಮುಸ್ಲಿಮರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಜೆಡಿಎಸ್ಗೆ ಸೇರ್ಪಡೆಯಾಗುವರು ಎಂದು ತಿಳಿಸಿದರು. ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕನ್ನು ದತ್ತು ತೆಗೆದುಕೊಂಡು ಸರ್ವತೋಮುಖ ಅಭಿವೃದ್ಧಿಪಡಿಸುವುದಾಗಿ ಕಾಂಗ್ರೆಸ್ ಸಮಾವೇಶದಲ್ಲಿ ತಿಳಿಸಿದ್ದಾರೆ. ತಾಲೂಕಿನ ಅಭಿವೃದ್ಧಿಯಾಗುವುದಾದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು. ಸರಗೂರು, ಎಚ್.ಡಿ. ಕೋಟೆ ಬ್ಲಾಕ್ ಅಧ್ಯಕ್ಷರು, ಸಿ.ವಿ. ನಾಗರಾಜು, ರವಿ, ತಾಪಂ ಸದಸ್ಯ ಬಾಲಚಂದ್ರ, ಮಾಜಿ ಸದಸ್ಯ ಎಂ.ಮಾದಯ್ಯ, ಶಿವಯ್ಯ, ನಾಗರಾಜು, ತಾಲೂಕು ಬಾಬು ಜಗಜೀವನರಾಂ ವೇದಿಕೆಯ ನಾಗರಾಜು, ಪ್ರಕಾಶ್, ಎಂ.ಸಿ. ದೊಡ್ಡನಾಯಕ, ನಾರಾಯಣಗೌಡ, ಮಹೇಶ್, ಮೈಮುಲ್ ಈರೇಗೌಡ, ಮಾರುತಿ, ರಾಜೇಶ, ನಾಗೇಂದ್ರಸ್ವಾಮಿ, ಮುಖಂಡರು, ಗ್ರಾಮದ ಯಜಮಾನರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

