ರಜಾ ಮಜಾ ಸಮಾರೋಪ 12, 13ಕ್ಕೆ
ಮೈಸೂರು: ನಟನ ಸಂಸ್ಥೆ ಆಯೋಜಿಸಿರುವ ರಜಾ ಮಜಾ ಮಕ್ಕಳ ವರ್ಣರಂಜಿತ ಬೇಸಿಗೆ ಶಿಬಿರವು ಮೇ 12 ಮತ್ತು 13ರ ಸಂಜೆ 5.30ಕ್ಕೆ ಸರಸ್ವತಿಪುರಂ ವಿಜಯ ವಿಠಲ ವಿದ್ಯಾಸಂಸ್ಥೆಯ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಾಯಕಿ ನಿವೇದಿತಾ, ರಂಗಕರ್ಮಿ ರಾಮೇಶ್ವರಿ ವರ್ಮ, ವಿಜಯ ವಿಠಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಾಸುದೇವ ಭಟ್ ಭಾಗವಹಿಸುವರು. ಮೇ 13 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿರ್ಮಲಾ ಮಠಪತಿ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ, ನಿವೃತ್ತ ಜಿಲ್ಲಾಧಿಕಾರಿ ಗೋವಿಂದೇಗೌಡ ಭಾಗವಹಿಸುವರು.
ನಟ, ನಿರ್ದೇಶಕ ಮಂಡ್ಯ ರಮೇಶ್ ನಿರ್ದೇಶನದಲ್ಲಿ ಮಕ್ಕಳು ಶಿಬಿರದಲ್ಲಿ ಕಲಿತ ರಂಗಗೀತೆ, ನಾಟಕಗಳು, ಕಂಸಾಳೆ, ಡೊಳ್ಳುಕುಣಿತ, ಹುಲಿ ವೇಷ, ಕಂಗೀಲು, ಪೂಜಾಕುಣಿತ, ಕೋಲಾಟ, ಜಾನಪದ ಗೀತೆಗಳು, ಶಿಶಿಗೀತೆ, ಭಾವಗೀತೆಗಳು ಅನಾವರಣಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9480468327 ಸಂಪರ್ಕಿಸಬಹುದು.
ಮೆಟ್ರಿಕ್ಪೂರ್ವ ಬಾಲಕರ ಹಾಸ್ಟೆಲ್ಗೆ ಅರ್ಜಿ
ಮೈಸೂರು: ಕೊಳ್ಳೇಗಾಲ ತಾಲೂಕು ರಾಮಾಪುರದಲ್ಲಿರುವ ಜೆಎಸ್ಎಸ್ ಖಾಸಗಿ ಮೆಟ್ರಿಕ್ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ 2014-15ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು 5 ರಿಂದ 10ನೇ ತರಗತಿವರೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅವರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಆಸಕ್ತರು ಮೇ 20 ರೊಳಗೆ ಅರ್ಜಿ ಸಲ್ಲಿಸಬಹುದು.
ಭರತನಾಟ್ಯ
ರಂಗಪ್ರವೇಶ
ಮೈಸೂರು: ಕಲಾ ಸಂದೇಶ ಪ್ರತಿಷ್ಠಾನದ ವಿದ್ಯಾರ್ಥಿನಿ ಪೂಜಾ ದೇವ್ ಅವರು ಶನಿವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಭರತನಾಟ್ಯ ರಂಗಪ್ರವೇಶಿಸಿದರು. ಪಿ.ಎಸ್. ದೇವದಾಸ್, ಆಶಾ ದೇವ್ ಅವರ ಪುತ್ರಿಯಾದ ಪೂಜಾ ಅವರು ಕಲಾ ಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಕೆ.ಸಂದೇಶ್ ಭಾರ್ಗವ ಬಳಿ ಭರತನಾಟ್ಯ ಕಲಿತಿದ್ದರು. ಬಹುಮುಖ ಪ್ರತಿಭೆಯಾದ ಪೂಜಾ ಓದುವುದರಲ್ಲಿ ಪ್ರವೀಣೆ. ಹಾಗೆಯೇ ಭರತನಾಟ್ಯದಲ್ಲಿ ಎಲ್ಲಾ ಹಂತ ಮುಗಿಸಿದ್ದಾರೆ. ಶನಿವಾರ ಭರತನಾಟ್ಯ ರಂಗಪ್ರವೇಶದಲ್ಲಿ ವಿವಿಧ ಭಂಗಿಗಳಲ್ಲಿ ಗಮನ ಸೆಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

