ಇತರರೊಂದಿಗೆ ಬೆರೆಯುವ ಗುಣ ಮೈಗೂಡಿಸಿಕೊಳ್ಳಿ
ಕ.ಪ್ರ.ವಾರ್ತೆ ಮೈಸೂರು ಮೇ 19
ಎಲ್ಲರೊಂದಿಗೆ ಬೆರೆಯುವ ಗುಣಗಳನ್ನು ಮೈಗೂಡಿಸಿಕೊಂಡರೆ ಆದಿವಾಸಿಗಳು ಸಹ ಎಲ್ಲರಂತೆಯೇ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದು ಕಸ್ತೂರಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜು ವಸತಿ ನಿಲಯದಲ್ಲಿ ಬುಡಕಟ್ಟು ಕೃಷಿಕರ ಸಂಘ, ಕಸ್ತೂರಿ ಜನನಿ ಸಂಸ್ಥೆ ಮತ್ತು ಕವನ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ನಮ್ಮ ಜನ್ಮಸಿದ್ದ ಹಕ್ಕು, ಅದನ್ನು ಪಡೆಯಲು ಸತತ ಪ್ರಯತ್ನವಿರಬೇಕು. ಆಗ ಮಾತ್ರ ತಮ್ಮ ಮಕ್ಕಳು ವಿದ್ಯಾವಂತರಾಗಲು ಸಾಧ್ಯ. ಮೊದಲು ವಿದ್ಯೆ ನಂತರ ಇತರೆ ಕೆಲಸಗಳು ಎಂದು ಪ್ರತಿ ಆದಿವಾಸಿಗಳು ಪ್ರತಿಜ್ಞೆ ಮಾಡಬೇಕು.
ಪ್ರತಿ ಮಕ್ಕಳು ಶಿಕ್ಷಣ ಪಡೆಯಲು ಉತ್ಸಾಹದಿಂದ ಭಾಗವಹಿಸುವಂತಹ ಶಿಕ್ಷಣ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು. ಕೇವಲ ಪುಸ್ತಕದ ಮೂಲಕ ಮಾಡುವ ಪಾಠ ಪ್ರವಚನಗಳು ಆದಿವಾಸಿ ಮಕ್ಕಳಿಗೆ ಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ಕಡ್ಡಾಯವಾಗಿ ನಾವು ಪ್ರತಿದಿನವೂ ಶಾಲೆಗೆ ಹಾಜರಾಗುತ್ತೇವೆ. ಯಾವುದೇ ಕಾರಣಕ್ಕೂ ಶಾಲೆಯನ್ನು ಬಿಡುವುದಿಲ್ಲ ಎಂದು ತಾಲೂಕಿನ ವಿವಿಧ ಹಾಡಿಗಳಿಂದ ಬಂದಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷರಿಂದ ಪ್ರಮಾಣ ವಚನ ಸ್ವೀಕರಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಭರತ್, ಶ್ವೇತಾ, ಸಂಧ್ಯಾ, ಕೆಂಚಯ್ಯ, ಡಿ.ಬಿ. ಬಸವರಾಜು, ಸತೀಶ್, ಸಂಜು, ಪವನ್, ಗುರುಸ್ವಾಮಿ, ಪುಟ್ಟರಾಮಪ್ಪ, ಜಿ. ನಾರಾಯಣ್ಲಾಲ್, ಕಾಳಕಲ್ಕರ್, ರಾಜು, ಶೈಲೇಂದ್ರ, ರಾಜು, ಪುಟ್ಟಬಸವಯ್ಯ, ಪರಮೇಶ್, ಭಾಗ್ಯ, ಶಿವಗಾಮಿ, ಸವಿತಾ ಧನಲಕ್ಷ್ಮೀ, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

