ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ
ಕ.ಪ್ರ.ವಾರ್ತೆ ಮೈಸೂರು ಮೇ 19
ನಗರದ ಸಿಸಿಬಿ ಘಟಕದ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ 24 ಜನರನ್ನು ಬಂಧಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯ ಜಮುನಾ ಬಾರ್ನಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ 24 ಮಂದಿಯನ್ನು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಶಿವು, ಮಂಡ್ಯ ಜಿಲ್ಲೆಯ ಶಿವಕುಮಾರ್, ಸೋಮಶೇಖರ್, ಭಾಸ್ಕರ್, ಉಡುಪಿ ಜಿಲ್ಲೆಯ ಕೃಷ್ಣ, ಮೈಸೂರು ನಗರ ಮತ್ತು ಜಿಲ್ಲೆಯ ನಿವಾಸಿಗಳಾದ ಮಹೇಶ, ಸತೀಶ, ನಾಗೇಶ, ವಿ. ಪ್ರಸನ್ನ, ಗಿರೀಶ, ರಾಜು, ಸಿ.ಆನಂದ್, ಬಸವರಾಜು, ಗೌರವ್, ದೀಪಕ್, ತೇಜು, ಹರೀಶ, ಜಿ.ನವೀನ, ರಾಜೇಗೌಡ, ಶಿವಣ್ಣ, ಪ್ರಶಾಂತ್ಕುಮಾರ್, ನಾಗರಾಜು, ಹರೀಶ ಹಾಗೂ ಜಮುನಾ ಬಾರ್ ವ್ಯವಸ್ಥಾಪಕ ಗುರು ಬಂಧಿತ ಆರೋಪಿಗಳು.
ಬಂಧಿತರಿಂದ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿಸಿದ್ದ 11,500, ಟಿವಿ, ಸೆಟ್ಅಪ್ ಬಾಕ್ಸ್ ಸೇರಿದಂತೆ ಒಟ್ಟು 25,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್. ರಾಜಣ್ಣ, ಕಲಾ ಕೃಷ್ಣಸ್ವಾಮಿ, ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ಗಳಾದ ಕೆ.ಎನ್. ಯಶವಂತಕುಮಾರ್, ಎಚ್.ಟಿ. ಸುನಿಲ್ಕುಮಾರ್, ಎಎಸ್ಐಗಳಾದ ಎಂ.ಜೆ.ಜಯಶೀಲನ್, ಎ. ಜಾರ್ಜ್ ಮತ್ತು ಸಿಬ್ಬಂದಿ ಎಂ.ಬಸವರಾಜು, ಅಸ್ಗರ್ ಖಾನ್, ರಾಮಸ್ವಾಮಿ, ವಿ. ರಮೇಶ್, ಬಿ.ರಾಧೇಶ್, ಎಂ.ಆರ್. ಗಣೇಶ್ ಈ ದಾಳಿ ನಡೆಸಿದ್ದಾರೆ.
ಟೇಲ್ಗೇಟಿಂಗ್ ನಿರ್ಬಂಧಿಸಲು ಒತ್ತಾಯ
ಮೈಸೂರು: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಕಾರಣವಾಗುವ ಟೇಲ್ಗೇಟಿಂಗ್ (ವಾಹನಗಳು ಬಹಳ ಹತ್ತಿರ ಚಲಿಸುವುದು) ಅನ್ನು ನಿರ್ಬಂಧಿಸುವಂತೆ ಮೈಸೂರು ಗ್ರಾಹಕರ ಪರಿಷತ್ತಿನ ವಿಶ್ವಾಸ್ ಕೃಷ್ಣ ಒತ್ತಾಯಿಸಿದ್ದಾರೆ. ಮುಂದಿನ ಕಾರಿಗೆ ಬಹಳ ಹತ್ತಿರ ಚಲಿಸಿದಾಗ ಅಪಘಾತಗಳು ಸಂಭವಿಸುತ್ತಿವೆ. ಇದರ ತೀವ್ರತೆ ಅರಿತೇ ವಿದೇಶಗಳಲ್ಲಿ ಅಪಾಯಕಾರಿ ಅಭ್ಯಾಸದ ವಿರುದ್ಧ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ನಮ್ಮಲ್ಲಿ ಚಾಲ್ತಿಯಲ್ಲಿರುವ 1988ರ ಮೋಟಾರ್ ವಾಹನಗಳ ಅಧಿನಿಯಮದ 183-184 ಕಲಮುಗಳಲ್ಲಿ ಟೇಲ್ಗೇಟಿಂಗ್ ಅನ್ನು ಸೇರಿಸಿಲ್ಲ. ನಗರದಲ್ಲಿ ಆಗುತ್ತಿರುವ ಅಪಘಾತಕ್ಕೆ ಟೇಲ್ಗೇಟಿಂಗ್ ಕಾರಣ. ನಗರದಲ್ಲಿ ವೇಗ ಸ್ವಲ್ಪ ಕಡಿಮೆ ಇರುತ್ತದೆ. ಅದೇ ಹೆದ್ದಾರಿಯಲ್ಲಿ ವೇಗ ಹೆಚ್ಚಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟವರು ಟೇಲ್ಗೇಟಿಂಗ್ ನಿರ್ಬಂಧಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

