ಮೈಸೂರು

ವಿಶ್ವ ಪರಂಪರೆ ಪಟ್ಟಿಗೆ ರಾಜ್ಯದ ಮೂರು ತಾಣ: ಸಿಎಂ ಸಂತಸ

Published On :

ಮೈಸೂರು: ಯುನೆಸ್ಕೋದ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಕರ್ನಾಟಕ ರಾಜ್ಯದ ಮೂರು ತಾಣಗಳು ಸೇರ್ಪಡೆಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು. ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿ ನೂತನ ಕಟ್ಟಡ ಸೇರಿದಂತೆ 110 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮಘಟ್ಟಗಳು ಈಗಾಗಲೇ ಸೇರಿವೆ. ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮೂರು ಪ್ರಸ್ತಾವನೆಗಳನ್ನು ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಸೇರಿಸಲು ಕೇಂದ್ರದ ಸರ್ಕಾರದ ಸಂಸ್ಕೃತಿ ಇಲಾಖೆಯ ವಿಶ್ವ ಪರಂಪರೆಯ ಸಲಹಾ ಸಮಿತಿಗೆ ಕಳುಹಿಸಿದ್ದರು ಎಂದರು.
1.  ದಕ್ಷಿಣ ಸುಲ್ತಾನರ ಸ್ಮಾರಕಗಳು ಮತ್ತು ಕೋಟೆಗಳು (ಗುಲ್ಬರ್ಗ, ಬೀದರ್ ಮತ್ತು ಬಿಜಾಪುರದ ಸೇರಿದಂತೆ ದಕ್ಷಿಣ ಸುಲ್ತಾನ ವಾಸ್ತುಶಿಲ್ಪ).
2.  ಶ್ರೀರಂಗಪಟ್ಟಣ ದ್ವೀಪ ಪಟ್ಟಣ ಸ್ಮಾರಕಗಳು.
3.  ಹೊಯ್ಸಳರ ಕಾಲದ ಪವಿತ್ರ ಕಲಾಕೃತಿಗಳು (ಬೇಲೂರು, ಹಳೇಬೀಡು ಸೇರಿದಂತೆ ಹೊಯ್ಸಳರ ಕಾಲದ ವಾಸ್ತುಶಿಲ್ಪಗಳ ಸರಣಿ).
ಈ 3 ತಾಣಗಳನ್ನು ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಸೇರಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಾರಂಪರಿಕ ಸ್ಮಾರಕಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಯತ್ನಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.