ಸಾಲ ಸೌಲಭ್ಯವನ್ನು ದುಂದು ವೆಚ್ಚ ಮಾಡದಿರಿ
ಮೈಸೂರು: ಸರ್ಕಾರದ ವಿವಿಧ ನಿಗಮಗಳಿಂದ ಸಿಗುವ ಸಾಲದ ಮೊತ್ತವನ್ನು ದುಂದು ವೆಚ್ಚ ಮಾಡದೇ ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಜಿ.ಟಿ. ದೇವೇಗೌಡ ಫಲಾನುಭವಿಗಳಿಗೆ ಸಲಹೆ ನೀಡಿದರು. ನಗರದ ನಜರ್ಬಾದ್ನಲ್ಲಿರುವ ಮಿನಿ ವಿಧಾನಸೌಧದಲ್ಲಿ ಗುರುವಾರ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದ ಅವರು, ವಿವಿಧ ನಿಗಮಗಳು ಅರ್ಹರಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಈ ಸಾಲವನ್ನು ದುಂದು ವೆಚ್ಚ ಮಾಡಬಾರದು ಎಂದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 196 ಫಲಾನುಭವಿಗಳಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 63.90 ಲಕ್ಷ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಮುಸ್ಲಿಂ ಹಾಗೂ ಜೈನ ಸಮುದಾಯದವರಿಗೆ 6.7 ಲಕ್ಷ, 9 ಕ್ರಿಶ್ಚಿಯನ್ ಫಲಾನುಭವಿಗಳಿಗೆ 1.85 ಲಕ್ಷ ಸಾಲ ಸೌಲಭ್ಯದ ಚೆಕ್ ವಿತರಿಸಲಾಯಿತು. ತಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ, ಇಒ ಅರುಳ್ಕುಮಾರ್ ಇದ್ದರು.
ಶಿವಾನುಭವ ಉಪನ್ಯಾಸ
ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಮೇ 31ರ ಸಂಜೆ 6ಕ್ಕೆ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಜ್ಯೋತಿ ಬೆಳಗುತಿದೆ ಕುರಿತು ಉಪನ್ಯಾಸ ನಡೆಯಲಿದೆ. ನಿಜಗುಣ ಸತ್ಸಂಗ ಬಳಗದ ಸದಾಶಿವು ಉಪನ್ಯಾಸ ನೀಡುವರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಇಂಡಿಯನ್ ಬ್ಯಾಂಕ್ನ ಮುಖ್ಯ ಪ್ರಬಂಧಕ ಎ.ಚೆನ್ನೇಶ್ವರಪ್ಪ ಅಧ್ಯಕ್ಷತೆ ವಹಿಸುವರು.
ಆಯುರ್ವೇದ ಚಿಕಿತ್ಸೆ 31ಕ್ಕೆ
ಮೈಸೂರು: ಶ್ರೀರಂಗ ಆಯು ರ್ವೇದ ಚಿಕಿತ್ಸಾ ಮಂದಿರದಲ್ಲಿ ಪ್ರಕೃತಿ ಆಯುರ್ವೇದ ಪ್ರತಿಷ್ಠಾನವು ಮೇ 31 ರಂದು ಕೆಮ್ಮು, ಅಲರ್ಜಿ, ಅಸ್ತಮಾ ಹಾಗೂ ಇತರೆ ಉಸಿರಾಟ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ಏರ್ಪಡಿಸಿದೆ. ಮೊ. 78998 69385 ಸಂಪರ್ಕಿಸಬಹುದು.
ಬಂಜೆತನ ತಪಾಸಣೆ ಶಿಬಿರ
ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯು ಮೇ 31ರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಲೈಂಗಿಕ ಸಮಸ್ಯೆ, ಪುರುಷರ ಬಂಜೆತನ ಕುರಿತು ವಿಶೇಷ ತಪಾಸಣೆ ಮತ್ತು ಸಲಹಾ ಶಿಬಿರ ಆಯೋಜಿಸಿದೆ. ಆಸಕ್ತರು ದೂ. 2548231 ಸಂಪರ್ಕಿಸಬಹುದು.
ರಸಪ್ರಶ್ನೆ ಕಾರ್ಯಕ್ರಮ
ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಕೌಮಾರ ಭೃತ್ಯ ವಿಷಯದಲ್ಲಿ ಕುಮಾರಾನ್ವೇಷಣ- 2014 ಎಂಬ ರಾಷ್ಟ್ರಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಮೇ 31ರ ಬೆಳಗ್ಗೆ 10ಕ್ಕೆ ಲಲಿತಾದ್ರಿಪುರ ರಸ್ತೆಯಲ್ಲಿರುವ ಕಾಲೇಜು ಆವರಣದಲ್ಲಿ ಆಯೋಜಿಸಿದೆ. ಆಯುಷ್ ಇಲಾಖೆ ಜಂಟಿ ನಿರ್ದೇಶಕ ಡಾ.ಹಸಿಬುನ್ನಿಸ್ಸಾ, ಕೊಯಮತ್ತೂರಿನ ಕೌಮಾರಭೃತ್ಯ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಟಿ. ಚೊಕೊ, ಮೈಸೂರು ಮೆಡಿಕಲ್ ಕಾಲೇಜು ಡೀನ್ ಡಾ.ಬಿ. ಕೃಷ್ಣಮೂರ್ತಿ ಭಾಗವಹಿಸುವರು. ಅಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಚಿತ್ರಕಲಾ ಸ್ಪರ್ಧೆ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಮೇ.ರಾಣಿ ಪ್ರೈವೇಟ್ನ ಸಂಯುಕ್ತ ಆಶ್ರಯದಲ್ಲಿ ಕುಕ್ಕರಹಳ್ಳಿ ಕೆರೆ ಉದ್ಯಾನದಲ್ಲಿ ಮೇ 31ರ ಬೆಳಗ್ಗೆ 10 ರಿಂದ 1 ರವರೆಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ. ಪರಿಸರ ಸಂರಕ್ಷಣೆ ಕುರಿತು 1 ರಿಂದ 4, 4 ರಿಂದ 7 ಮತ್ತು 8 ರಿಂದ 10ನೇ ತರಗತಿ ಮಕ್ಕಳಿಗೆ, ದೈಹಿಕ ಅಂಗವಿಕಲತೆ, ವಿಶೇಷ ಅಂಗವಿಕಲತೆ ಹಾಗೂ ವಿಶೇಷ ಗುಂಪಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಆಯೋಜಿಸಿದೆ. ಆಸಕ್ತರು ಮೊ. 98809 33020 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

