ರಾಯಚೂರು

ರಸ್ತೆ ದುರಸ್ತಿಗೆ ಆಗ್ರಹ

Published On :

ದೇವದುರ್ಗ:  ಪುರಸಭೆ ವ್ಯಾಪ್ತಿಯ ಅಬು ಮೊಹಲ್ಲಾದ ಅಂಗಳಾರ ಭಾವಿ ಹತ್ತಿರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಬಿಜೆಪಿ ಯುವ ಮುಖಂಡ ಅಲೀಂ ಪಾಶಾ ಒತ್ತಾಯಿಸಿದ್ದಾರೆ. ತಾಲೂಕಿನ ಕೋತಿಗುಡ್ಡ ಮತ್ತು ಬಿ.ಗಣೇಕಲ್, ಕೆ.ಇರಬಗೇರಾ, ತಾಂಡಾಗಳಿಂದ ಪಟ್ಟಣಕ್ಕೆ ಆಗಮಿಸುವ ರೈತರಿಗೆ ಇದೊಂದು ಪ್ರಮುಖ ಸಂಪರ್ಕ ರಸ್ತೆಯಾಗಿದೆ. ರಸ್ತೆಯಲ್ಲಿ ಹಳ್ಳದ ನೀರು ಹರಿಯುವುದರಿಂದ ತಗ್ಗುಗಳಾಗಿವೆ ಎಂದು ಆರೋರಿಸಿದ್ದಾರೆ. ಈ ಕುರಿತು ಈಗಾಗಲೇ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಡಿ.3ರಿಂದ ನಾಟಕ ಪ್ರದರ್ಶನ
ರಾಯಚೂರು: ರಂಗಾಸಕ್ತರ ಬಳಗದ ವತಿಯಿಂದ ನೀನಾಸಂ ತಿರುಗಾಟ 2013ರ ಅಡಿ ಡಿ.3 ಮತ್ತು 4ರಂದು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಗರದ ರಂಗಮಂದಿರದಲ್ಲಿ ಡಿ.3ರಂದು ಸಂಜೆ 7ಕ್ಕೆ ಎಂ.ಗಣೇಶ್ ನಿರ್ದೇಶನದಲ್ಲಿ ಗಾಂಧಿ ವಿರುದ್ಧ ಗಾಂಧಿ ನಾಟಕ ಪ್ರದರ್ಶನ ನಡೆಯಲಿದೆ. ಅದೇ ರೀತಿ ಡಿ.4ರಂದು ಸಂಜೆ 7ಕ್ಕೆ ಮಂಜುನಾಥ ಎಲ್.ಬಡಿಗೇರ್ ನಿರ್ದೇಶನದಲ್ಲಿ ಸೀತಾ ಸ್ವಯಂವರಂ ನಾಟಕದ ಪ್ರದರ್ಶನ ನಡೆಯಲಿದ್ದು, ನಾಟಕ ಪ್ರದರ್ಶನವು ಸಂಪೂರ್ಣ ಉಚಿತವಾಗಿದೆ. ಎಲ್ಲ ರಂಗಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಲು ರಂಗಾಸಕ್ತರ ಬಳಗ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.