ಮುದಗಲ್ ಪಪಂ: 'ಕೈ'ಗೆ ಮುಖಭಂಗ
ಕನ್ನಡಪ್ರಭ ವಾರ್ತೆ ಮುದಗಲ್ ಸೆ.12
ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‌ನ ರಜ್ಜಬ್ ಅಲಿ, ಉಪಾಧ್ಯಕ್ಷರಾಗಿ ಹಂಪಮ್ಮ ನಾಗನಗೌಡ ಅವರ ಏಕೈಕ ನಾಮಪತ್ರಗಳು ಸಲ್ಲಿಸಿದ್ದರಿಂದ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಕೆ.ಮಲ್ಲಿನಾಥ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.
ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡು ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಅವರ ಪತ್ನಿ ಸಹೀರಾಬಾನು, ಬಂದೇ ನವಾಜ, ಖಾಜಾಪಾಷಾ ಗಾಡಿವಾನ, ವೀರಭದ್ರಪ್ಪ ಕೊಳ್ಳಿ ಪ್ರತ್ಯೇಕ ಗುಂಪು ರಚಿಸಿಕೊಂಡು ಸಹೀರಾಬಾನು ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಪಟ್ಟು ಹಿಡಿದಿದ್ದರು.
ಕಾಂಗ್ರೆಸ್‌ನ ಐವರು ಜೆಡಿಎಸ್‌ಗೆ ಬೆಂಬಲ: ಜೆಡಿಎಸ್ ಮುಖಂಡರು ಅದಕ್ಕೆ ಒಪ್ಪದೇ ಇದ್ದಾಗ ಕಾಂಗ್ರೆಸ್ ಬಾಗಿಲು ತಟ್ಟಿದ್ದರು. ಅಲ್ಲಿಯೂ ವಿರೋಧ ವ್ಯಕ್ತವಾಗಿ ಮತ್ತು ಕಾಂಗ್ರೆಸ್‌ನ 5 ಸದಸ್ಯರು(ರಾಮಣ್ಣ ಹೊಸಮನಿ, ಶರಣಮ್ಮ ಕತ್ತಿ, ಮಹ್ಮದ್ ಸಾಧಿಕ್‌ಅಲಿ, ನೀಲಮ್ಮ ಹೊರಪೇಟ ಮತ್ತು ವಾರ್ಡ್ 15ರ ಸದಸ್ಯೆ) ಜೆಡಿಎಸ್‌ಗೆ ಬೆಂಬಲಿಸಿದ್ದರು. ಕಾಂಗ್ರೆಸ್‌ನ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದಿರುವುದರಿಂದ ಜೆಡಿಎಸ್‌ನ ರಜ್ಜಬ್ ಅಲಿ ಹಳೇಪೇಟ ಅಧ್ಯಕ್ಷರಾಗಿ ಹಂಪಮ್ಮ ನಾಗನಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಮುಖಭಂಗ: ಕಾಂಗ್ರೆಸ್‌ನ 8 ಸದಸ್ಯರು ಜೆಡಿಎಸ್‌ನ 11(ಭಿನ್ನಮತೀಯರು 4 ಸೇರಿ) ಒಟ್ಟು 19 ಸದಸ್ಯ ಬಲವಿದ್ದ ಪಟ್ಟಣ ಪಂಚಾಯಿತಿ, ಜೆಡಿಎಸ್‌ನ ಸಂಪೂರ್ಣ ಬಹುಮತವಿದ್ದರೂ ಭಿನ್ನಮತದ ಆತಂಕದಿಂದ ಕಾಂಗ್ರೆಸ್‌ನ ಐವರು ಸದಸ್ಯರನ್ನು ಜೆಡಿಎಸ್‌ನತ್ತ ಸೆಳೆದು ಅಧಿಕಾರ ಪಡೆದುಕೊಂಡಿರುವುದು ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ.
'ಯಶಸ್ವಿನಿ' ನೋಂದಣಿ ಅವಧಿ ವಿಸ್ತರಣೆ
ರಾಯಚೂರು: ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಫಲಾನುಭವಿಗಳು ಪ್ರಸಕ್ತ ಸಾಲಿಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ಅ.15ರವರೆಗೆ ವಿಸ್ತರಿಸಲಾಗಿದೆ. ನೋಂದಾಯಿಸುವ ಕಾರ್ಯವು ಸರ್ಕಾರದ ನಿರ್ದೇಶನದಂತೆ ನಡೆದಿದೆ.
ಗ್ರಾಮೀಣ ಸಹಕಾರಿಗಳು ಸಂಬಂಧಿಸಿದ ಸಹಕಾರ ಸಂಘಗಳಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಿನಿಂದ ವಂತಿಕೆ ಹಣ ಪಾವತಿಸಿ ಸರ್ಕಾರವು ನೀಡಿರುವ ಯೋಜನೆಯ ಲಾಭ ಪಡೆಯಲು ಕೋರಲಾಗಿದೆ.
ಪ್ರಸಕ್ತ ಸಾಲಿನ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಗೆ ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಸದಸ್ಯರಿಂದ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಕೇವಲ 10 ಪಡೆದು ಮೊತ್ತವನ್ನು ಸಹಕಾರ ಸಂಘಗಳು ಉಳಿಸಿಕೊಂಡು ಉಳಿದ 200 ವಂತಿಗೆಯನ್ನು ಪಡೆಯದೇ ನೋಂದಾಯಿಸಿಕೊಳ್ಳಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರನ್ನು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ರಾಯಚೂರು ಸಹಕಾರ ಸಂಘಗಳ ಉಪನಿಬಂಧಕ ಎಚ್.ಪಿ. ಕುಮಾರ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

