ವಯೋನಿವೃತ್ತಿ: ಬೀಳ್ಕೊಡುಗೆ
ದೇವದುರ್ಗ: ತಾಲೂಕಿನ ಕಂದಾಯ ಇಲಾಖೆಯ ಜಾಲಹಳ್ಳಿ ಹೋಬಳಿ ಕಂದಾಯ ನಿರೀಕ್ಷಕ ಕರಿಯಪ್ಪ ಅಕ್ಕರಕಿ ಅವರು ಈಚೆಗೆ ನಿವೃತ್ತಿ ಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರನ್ನು ಹಾರ್ಧಿಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಯಲ್ಲಪ್ಪ ಅಕ್ಕರಕಿ, ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ, ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಆಹಾರ ಇಲಾಖೆ ಚಂದ್ರಶೇಖರ ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಶಂಕರ, ಶಿರಸ್ತೇದಾರ ಹುಸೇನಪ್ಪ, ಕಂದಾಯ ನಿರೀಕ್ಷಕರಾದ ಶರಣಬಸವ, ತಿಮ್ಮಾರಡ್ಡಿ, ಪ್ರ.ದ.ಸ. ಅಮರೇಶ, ಗ್ರಾಮ ಲೆಕ್ಕಿಗರಾದ ವಿರೇಶ, ಪತ್ರಬರಹಗಾರ ಅಮರೇಶ ಕುಂಬಾರ ಇದ್ದರು.
ಕಾಂಗ್ರೆಸ್ಗೆ ಆಯ್ಕೆ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದ ಎಂ.ಡಿ. ಆಲಂಸಾಬ ಹಣಗಿ ಅವರು ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾ ತರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಕಾಂಗ್ರೆಸ್ ಮುಖಂಡ ವಿರುಪಣ್ಣ ಗುತ್ತೇದಾರ್ ತಿಳಿಸಿದ್ದಾರೆ. ಮಸ್ಕಿ ಶಾಸಕರ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು, ಮುಖಂಡರಾದ ಗೋವಿಂದ ರೆಡ್ಡಿ ಗದ್ದಿ, ಗ್ರಾಪಂ ಉಪಾಧ್ಯಕ್ಷ ಎಚ್. ಮಹಾಬಳೇಶ, ಹನುಮೇಶ ಹೂಗಾರ, ಮಹೆಬೂಬ್ ಪಾಷಾ ಅತ್ತಾರ್, ಟಿ. ಅಮರೇಶ ನಾಯಕ ಮತ್ತಿತರಿದ್ದರೆಂದು ತಿಳಿಸಿದೆ.
ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಮಾನವಿ ತಾಲೂಕಿನ ಮಲ್ಲಿನಮಡುಗು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಮೌಲಾ(40) ಎಂದು ಗುರುತಿಸಲಾಗಿದೆ. ಈತ ಮದ್ಯವ್ಯಸನಿಯಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಆಶ್ರಯ ಮನೆಯಲ್ಲಿ ಮನೆಯ ಮೇಲಿನ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ವೇಕ್ಷಣ ಶಿಬಿರ ಸಹಕಾರಿ: ಗುಂಟೆ
ಲಿಂಗಸ್ಗೂರು: ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ವೇಕ್ಷಣ ಶಿಬಿರ ಸಹಕಾರಿಯಾಗಲಿದೆ ಎಂದು ಜಿಪಂ ಎಂಜಿನೀಯರ್ ಲಕ್ಷ್ಮೀಕಾಂತ ಗುಂಟೆ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಅಮರೇಶ್ವರ ಸುಕ್ಷೇತ್ರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಹಮ್ಮಿಕೊಂಡಿದ್ದ 12 ದಿನಗಳ ಸರ್ವೇಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸರ್ವೆಕ್ಷಣ ಶಿಬಿರವು ಸಿವಿಲ್ ವಿದ್ಯಾರ್ಥಿಗಳಿಗೆ ಅತಿ ಮಹತ್ವದ್ದಾಗಿದೆ. ಮುಂದೆ ಎದುರಾಗಬಹುದಾದ ಕಷ್ಟಗಳನ್ನು ಸಮರ್ಪಕವಾಗಿ ಎದುರಿಸಲು ಸಹಕಾರಿಯಾಗಲಿದೆ ಎಂದರು. ಸಮಾರಂಭದಲ್ಲಿ ಸಂಸ್ಥೆ ಪ್ರಾಚಾರ್ಯ ಸಿ.ಜೆ. ಕೂಡ್ಲಿ, ವಿಭಾಗಾಧಿಕಾರಿ ಮಲ್ಲಪ್ಪ ಸರ್ಜಾಪುರ, ಉಪನ್ಯಾಸಕರಾದ ಕೃಷ್ಣಮೂರ್ತಿ ಪಾಟೀಲ್, ಗಿರೀಶಕುಮಾರ, ಷಣ್ಮುಕಪ್ಪ ಪಾಟೀಲ್, ಸುರೇಶ ಇದ್ದರು.
ತಾಲೂಕು ಅಧ್ಯಕ್ಷರಾಗಿ ಕೆ. ಹನುಮಂತಪ್ಪ
ಸಿಂಧನೂರು: ಬಹುಜನ ಸಮಾಜ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿ ಕೆ. ಹನುಮಂತಪ್ಪ ಆಯ್ಕೆಯಾಗಿದ್ದಾರೆ ಎಂದು ಬಿಎಸ್ಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಪಿ. ವಾಸು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಧಾನ ಕಾರ್ಯದರ್ಶಿಯನ್ನಾಗಿ ಭೀಮಪ್ಪ ಕವಿತಾಳ ಆಯ್ಕೆ ಮಾಡಲಾಗಿದೆ. ಕೂಡಲೇ ಇಬ್ಬರೂ ಪಕ್ಷದ ಅಭಿವೃದ್ಧಿಗೆ, ಶೋಷಿತ ಸಮುದಾಯದ ಒಳತಿಗೆ ಕಾರ್ಯೋನ್ಮುಖರಾಗುವಂತೆ ತಿಳಿಸಿದ್ದಾರೆ. ಆಯ್ಕೆ ಸಂದರ್ಭದಲ್ಲಿ ರಾಜ್ಯಘಟಕದ ಕಾರ್ಯದರ್ಶಿ ಸೂರ್ಯವಂಶಿ, ವೈ. ನರಸಪ್ಪ, ಬಿಎಸ್ಪಿ ಜಿಲ್ಲಾಧ್ಯಕ್ಷ ಎ. ಹನುಮಂತಪ್ಪ ಉಪಸ್ಥಿತರಿದ್ದರು.
ಇಂದು ಆರಾಧನೆ
ರಾಯಚೂರು: ದೇವದುರ್ಗ ತಾಲೂಕಿನ ಗುಂಡಗುರ್ತಿಯಲ್ಲಿ ಫೆ. 3ರಂದು ಹೊನ್ನಯ್ಯ ತಾತಾನವರ ಆರಾಧನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮತ್ತು 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರುಕುಲ ಶಿಕ್ಷಣ ಸಂಸ್ಥೆಯ ಉದ್ಘಾಟನೆ ಸಮಾರಂಭವನ್ನೂ ಈ ವೇಳೆ ಆಯೋಜಿಸಿದ್ದು, ಸಮಾರಂಭದಲ್ಲಿ ಜನಪ್ರತಿನಿಧಿಗಳು, ಶಾಸಕರು, ಸಚಿವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಪಾಸಣೆ ಶಿಬಿರ
ಸಿಂಧನೂರು: ನಗರದಲ್ಲಿ ಈಚೆಗೆ ದಿ. ರುದ್ರಗೌಡ ಪಾಟೀಲ ಅವರ ಪುಣ್ಯತಿಥಿ ಅಂಗವಾಗಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು. ಸಾವಯವ ಕೃಷಿಕ ಮುದೇಗೌಡ್ರು ಮುಕ್ಕುಂದಾ ಸಮಾರಂಭದಲ್ಲಿ ಮಾತನಾಡಿದರು. ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಾತನಾಡಿದರು. ಡಾ. ಚನ್ನನಗೌಡ ಪಾಟೀಲ್, ನಿವೃತ್ತಿ ಶಿಕ್ಷಕ ಸೋಮಶೇಖರ, ಭಾರತೀಯ ಕಿಸಾನ್ ಸಂಘದ ಭೀಮರಾವ್ ದೇಶಪಾಂಡೆ, ಎಸ್. ಶರಣೇಗೌಡ ಮತ್ತಿತರರನ್ನು ಸನ್ಮಾನಿಸಲಾಯಿತು.
ತುಂಗಭದ್ರಾ ಡ್ಯಾಂ
ನೀರಿನ ಮಟ್ಟ
ಗರಿಷ್ಠ ಮಟ್ಟ : 1633 ಅಡಿ
ಇಂದಿನ ನೀರಿನ ಮಟ್ಟ : 1609.39 ಅಡಿ
ಒಳ ಹರಿವು : -1691 ಕ್ಯು.
ಹೊರ ಹರಿವು : 5681 ಕ್ಯು.
ಸಾಮರ್ಥ್ಯ : 34.097 ಟಿಎಂಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

