ರಾಯಚೂರು

ನಾಡಿಗಾಗಿ ದುಡಿದ ಯೋಧ ರಾಯಣ್ಣ

Published On :

ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಫೆ.2
ನರನಾಡಿಯಲ್ಲೂ ದೇಶಪ್ರೇಮವನು ಬೆಳೆಸಿಕೊಂಡು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತನ ಪ್ರಾಣವನೇ ಮುಡಿಪಾಗಿಟ್ಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಆದರ್ಶಗಳನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ವೆಂಕನಗೌಡ ಪಾಟೀಲ್ ತಿಳಿಸಿದರು.
ಸ್ಥಳೀಯ ಕನಕ ಸಂಸ್ಕಾರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹುತಾತ್ಮ ದಿನಾಚರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನು ಉದ್ಘಾಟಿಸಿ ಮಾತನಾಡಿ, ಬ್ರಿಟಿಷರು ಮೋಸ ವಂಚನೆಯಿಂದ ಕಿತ್ತುಕೊಂಡಿದ್ದ ಕಿತ್ತೂರು ಸಾಮ್ರಾಜ್ಯವನು ಮತ್ತೆ ಗೆದ್ದುಕೊಟ್ಟ ಮಹಾನ್ ವೀರ ರಾಯಣ್ಣ. ಅವರ ದಿನಾಚರಣೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಚಿಕ್ಕವನಿದ್ದಾಗಲೇ ಯುದ್ಧ ತರಬೇತಿ ಪಡೆದಿದ್ದ: ಸುಕಾಲಪೇಟೆಯ ಪ್ರೌಢ ಶಾಲೆ ಶಿಕ್ಷಕ ಹೊಳೆಯಪ್ಪ ಮಸ್ಕಿ ಮಾತನಾಡಿ, ರಾಯಣ್ಣ ಚಿಕ್ಕವನಿದ್ದಾಗಲೇ ಯುದ್ಧದ ತರಬೇತಿ ಪಡೆದಿದ್ದು, ಕಿತ್ತೂರು ನಾಡಿನಲ್ಲೆಲ್ಲ ಸಂಚರಿಸಿ ತನ ಸೈನ್ಯವನು ಕಟ್ಟಿದ. ಬ್ರಿಟಿಷರ ಕೈವಶವಾಗಿದ್ದ ಕಿತ್ತೂರು ಪ್ರಾಂತವನು ಪುನಃ ಸ್ವತಂತ್ರಗೊಳಿಸಲು ಹೋರಾಡಿ ಕ್ರಾಂತಿವೀರನಾದ. ಇತ್ತೀಚೆಗೆ ಘನ ಸರ್ಕಾರ  ಎರಡು ಎಕರೆ ಜಮೀನು ನೀಡಿದ್ದು, ಅಲ್ಲಿ ಸುಂದರವಾದ ತೋಟವನು ನಿರ್ಮಿಸಿ ಅದಕ್ಕೆ ರಾಯಣ್ಣನ ತೋಟವೆಂದು ಹೆಸರಿಟ್ಟಿದ್ದಾರೆ ಎಂದು ತಿಳಿಸಿದರು.
ಸಂಸ್ಕಾರ ಭಾರತೀಯ ಗೌರವಾಧ್ಯಕ್ಷ ವೆಂಕಣ್ಣ ಜೋಷಿ, ಗುತ್ತೇದಾರ ಕಟ್ಟೆಪ್ಪ ಗುಂಜಳ್ಳಿ ಮಾತನಾಡಿ, ರಾಯಣ್ಣ ಬ್ರಿಟಿಷರ ಸೆರೆಮನೆಯಿಂದ ಹೊರಬಂದ ಮೇಲೆ ಎಲ್ಲರಂತೆ ತನೂರಿಗೆ ಹೋಗಿ ಎಂದಿನಂತೆ ವೃತ್ತಿಯಲ್ಲಿ ಸೇರದೆ, ಮುದ್ದಿನ ಮಡದಿ, ಮಗನನು ಹಾಗೂ ಹೆತ್ತ ತಂದೆ-ತಾಯಿಗಳಿಂದ ದೂರಾಗಿ ಕಿತ್ತೂರನು ಸ್ವಾತಂತ್ರ್ಯ ಗೊಳಿಸಲು ಪಣತೊಟ್ಟು ಬ್ರಿಟಿಷರ ಸೈನ್ಯ ತತ್ತರಿಸುವಂತೆ ಮಾಡಿ, ವೀರಾವೇಶದಿಂದ ಹೋರಾಡಿ ದೇಶಕ್ಕಾಗಿ ಪ್ರಾಣವನೇ ಮುಡಿಪಾಗಿಟ್ಟ ಎಂದು ಹೇಳಿದರು.
ಪುರಸಭೆ ಮಾಜಿ ಮುಖ್ಯಾಧಿಕಾರಿ ಟಿ.ಪರಸಪ್ಪ, ಸಮಾಜ ಸೇವಕ ಅಜಿತ್ ಓಸ್ತವಾಲ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಬಳಗದ ಸಂಚಾಲಕ ಬಸವರಾಜ ಗೋಡಿಹಾಳ, ಯುವ ಮುಖಂಡ  ಬಾದರ್ಲಿ ವೆಂಕಟೇಶ, ತಿಪ್ಪಣ್ಣ ನೈನಾಪುರ, ಬಸವರಾಜ, ಅವಿನಾಶ ದೇಶಪಾಂಡೆ, ಕುರುಕುಂದಾ ನಾಗಪ್ಪ,  ಶ್ರೀಶೈಲ ಪತ್ತಾರ, ಬಸವರಾಜ ಭಂಗಿ, ಬಾದರ್ಲಿ ಮಂಜುನಾಥ, ಸಲೀಂಸಾಬ ಇತರರು ಪಾಲ್ಗೊಂಡಿದ್ದರು.
ರಾಯಣ್ಣನವರ ಭಾವಚಿತ್ರಕ್ಕೆ ವೀರನಗೌಡ ಪಾಟೀಲ್ ಪೂಜೆ ನೆರವೇರಿಸಿದರು. ಕುರುಕುಂದಾದ ಪೂಜಾರಿ ರಾಮಣ್ಣ ಬಸವಣ್ಣ ನವರ ವಚನವನು ಹಾಡಿದರು. ಎಸ್.ಬಿ. ಕರುಣಾಕರ ವಕೀಲ ಸ್ವಾಗತಿಸಿದರು. ಬಳಗದ ಸಹ ಸಂಚಾಲಕ ಬಿ.ಹನುಮೇಶ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.