ನಾಳೆಯಿಂದ ಪಂಚರಾತ್ರೋತ್ಸವ
ಸಿಂಧನೂರು: ಮಾಧವತೀರ್ಥರ 219ನೇ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಪಂಚರಾತ್ರೋತ್ಸವ, ಮಧ್ವನವಮಿ ಕಾರ್ಯಕ್ರಮಗಳನು ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂಡಿತ ರಂಗನಾಥಚಾರ್ಯ ಸಾಲಗುಂದಾ ತಿಳಿಸಿದ್ದಾರೆ.
ಫೆ.4ರಿಂದ 8ರ ವರೆಗೆ ಪ್ರತಿನಿತ್ಯ ಗುರುಗಳ ಅಷ್ಟೋತ್ತರ, ವಾಯುಸ್ತುತಿ ಪುನಶ್ಚರಣ, ಮಧುಅಭಿಷೇಕ, ಮಹಾಮಂಗಳರಾತಿ, ಸಂಜೆ ಸುಮಧ್ವವಿಜಯದ ಅನುವಾದ ಮತ್ತು ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮಗಳನು ಹಮ್ಮಿಕೊಳ್ಳಲಾಗಿದೆ. ಫೆ.4ರಂದು ನಾಗಸಂಪಿಗೆ ರಘೋತ್ತಮಾಚಾರ್ಯ, 5ರಂದು ಗುರುಮೂರ್ತಿಚಾರ್, 6ರಂದು ನಾರಾಯಣಾಚಾರ್ ಬಾದರ್ಲಿ, 7ರಂದು ವೆಂಕಟೇಶಚಾರ್ ಕುಲಕರ್ಣಿ ಅವರಿಂದ ಪ್ರವಚನ ಹಮ್ಮಿಕೊಳ್ಳಲಾಗಿದೆ. ಫೆ.8ರಂದು ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ಆಗಮಿಸಲಿದ್ದು, ಅವರಿಗೆ ಸಾಮೂಹಿಕ ಪಾದಪೂಜೆ, ನಂತರ ಅವರಿಂದ ಅನುಗ್ರಹ ಸಂದೇಶ, ಸಂಸ್ಥಾನ ಪೂಜೆ, ತೀರ್ಥ ಪ್ರಸಾದಗಳು ಜರುಗಲಿವೆ. ಈ ಕಾರ್ಯಕ್ರಮಗಳಿಗೆ ವಿಪ್ರ ಸಮುದಾಯದ ಬಂಧುಗಳು ಆಗಮಿಸಬೇಕೆಂದು ಕೋರಿದ್ದಾರೆ.
ಸಮೀಕ್ಷೆ ಕರಡು ಪ್ರಕಟ
ರಾಯಚೂರು: ನಗರದ 35 ವಾರ್ಡುಗಳಲ್ಲಿ ಎಸ್ಇಸಿಸಿ 2011ರ ಮನೆ ಮನೆ ಸಮೀಕ್ಷೆಗೆ ಸಂಬಂಧಿಸಿ ಕರಡು ಪ್ರತಿ ಸಿದ್ಧಗೊಂಡಿದ್ದು, ಪರಿಶೀಲನೆಗೆ ಪ್ರಕಟಿಸಲಾಗಿದೆ ಎಂದು ನಗರಸಭೆ ತಿಳಿಸಿದೆ. ನಗರಸಭೆಯ ವ್ಯಾಪ್ತಿ ಒಟ್ಟು 35 ವಾರ್ಡುಗಳಲ್ಲಿ ಈ ಹಿಂದೆ ಎಸ್ಇಸಿಸಿ- 2011ರ ಅಡಿ ಮನೆ ಮನೆ ಸಮೀಕ್ಷೆಯನು ಸಂಬಂಧಪಟ್ಟ ಗಣತಿದಾರರು, ಮೇಲ್ವಿಚಾರಕರು ನಡೆಸಿದ್ದರು. ಆ ವೇಳೆ ಕೈಗೊಂಡ ಸಮೀಕ್ಷೆಯ ಕರಡು ಪ್ರತಿಯನು ನಗರಸಭೆ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

