ರಾಯಚೂರು

ಜೇವರ್ಗಿಯಲ್ಲಿ ಭಕ್ತರ ಶೋಕ

Published On :

ಜೇವರ್ಗಿ: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾಗಿದ್ದ ಹಿರಿಯ ಯತಿ ಸುಯತೀಂದ್ರ ತೀರ್ಥರು ಗುರುವಾರ ಮಧ್ಯರಾತ್ರಿ ಬೃಂದಾವನಸ್ಥರಾಗಿದ್ದರಿಂದ ವಿಪ್ರ ಸಮಾಜಕ್ಕೆ ಹಾಗೂ ರಾಯರ ಭಕ್ತಾದಿಗಳಿಗೆ ತುಂಬಲಾದ ನಷ್ಟ ಎಂದು ತಾಲೂಕು ವಿಪ್ರ ಸಮಾಜದ ಮುಖಂಡರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕಳೆದ ನ.21, 22ರಂದು ಜೇವರ್ಗಿ ಪಟ್ಟಣದ ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಿದ ರಾಘವೇಂದ್ರ ಸ್ವಾಮಿ ಮಠದ ಉದ್ಘಾಟನೆ ಹಾಗೂ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸುಯತೀಂದ್ರತೀರ್ಥರು, ಶ್ರೀಗಳ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರು ಪಾಲ್ಗೊಂಡು ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ನೆರವೇರಿಸಿ ಭಕ್ತಾದಿಗಳಿಗೆ ಅನುಗ್ರಹ ಸಂದೇಶ ನೀಡಿದ್ದರು.
ತಾಲೂಕು ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ್, ಗೌರವಾಧ್ಯಕ್ಷ ಗುಂಡೇರಾವ್ ಕುಲಕರ್ಣಿ, ಪ್ರಹ್ಲಾದರಾವ್ ಆಲಬಾಳ, ಶಾಮರಾವ ರೇವನೂರ, ಬಾಪುರಾವ ಪಾಗಾ, ಹಳ್ಳೆಪ್ಪಾಚಾರ್ಯ ಜೋಶಿ, ಅನೀಲಕುಮಾರ ಇನಾಮದಾರ, ಲಕ್ಷಣರಾವ್ ಆಲಬಾಳ, ದತ್ತಾತ್ರಯರಾವ್ ಕೋಳಕೂರ, ಶೇಷಾಚಾರ್ಯ ಜೋಶಿ, ಗೋಪಾಲರಾವ ಚನ್ನೂರ, ಗುರುರಾಜ ಜೋಶಿ, ವೆಂಕಟೇಶ ಮಳ್ಳಿ, ಶಂಕರರಾವ್ ಅವರಾದ, ಪ್ರಭಾಕರರಾವ್ ಪೋದ್ದಾರ್, ಅಪ್ಪಾರಾವ ಕೂಟನೂರ, ಸುದರ್ಶನ ಆಲಬಾಳ, ಮುದ್ಗಲ್‌ರಾವ ಕುಲಕರ್ಣಿ, ರವೀಂದ್ರ ವಕೀಲ್, ವೆಂಕಟೇಶ ಹರವಾಳ, ಪ್ರಕಾಶ ಆಲಬಾಳ, ಪುನೀತ ಶೋಕ ವ್ಯಕ್ತಪಡಿಸಿದ್ದಾರೆ.
ಬಿದ್ದಾಪುರ ರಾಯರ ಮಠದಲ್ಲಿ ಶ್ರದ್ಧಾಂಜಲಿ ಸಭೆ(ಗುಲ್ಬರ್ಗ ವರದಿ): ಹರಿಪಾದೈಕ್ಯರಾದ ಮಂತ್ರಾಲಯದ ಹಿರಿಯ ಶ್ರೀ ಸುಯತೀಂದ್ರರ ಸ್ಮರಣಾರ್ಥ ಇಲ್ಲಿನ ಬಿದ್ದಾಪುರ ರಾಯರ ಮಠದಲ್ಲಿ ಭಕ್ತರೆಲ್ಲರೂ ಸೇರಿ ಶ್ರದ್ಧಾಂಜಲಿ ಸಭೆ ನಡೆಸಿದರು. ಮಠದ ವ್ಯವಸ್ಥಾಪಕರಾದ ಗುರುರಾಜಾಚಾರ್ಯ ಶ್ರೀಧರಗಡ್ಡೆ ಸೇರಿದಂತೆ ಬಡಾವಣೆಯ ಭಕ್ತರು, ಹಿರಿಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.