ರಾಯಚೂರು

ಭರದಿಂದ ಸಾಗಿದ ಆಧಾರ್ ನೋಂದಣಿ

Published On :

ಸಿಂಧನೂರು: ಬಳಗಾನೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮಾರುತಿ ದೇವಸ್ಥಾನದ ಹತ್ತಿರವಿರುವ ರೈತ ಸಮುದಾಯ ಭವನದ ಗೋದಾಮುನಲ್ಲಿ ನೋಂದಣೆ ಪ್ರಕ್ರಿಯೆ ಭರದಿಂದ ಸಾಗಿದೆ.
ಸಾರ್ವಜನಿಕರು ತಂಡೋಪ ತಂಡವಾಗಿ ಕೇಂದ್ರಕ್ಕೆ ಆಗಮಿಸಿ ಉತ್ಸಾಹದಿಂದ ಆಧಾರ್ ಕಾರ್ಡ್ ನೋಂದಾಯಿಸಿ ಕೊಳ್ಳುತ್ತಿದ್ದಾರೆ. 13 ಸಾವಿರಕ್ಕೂ ಹೆಚ್ಚು ಜನಸಂಖ್ಯೆವುಳ್ಳ ಬಳಗಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಕೇಂದ್ರದಲ್ಲಿ 9 ಕಂಪ್ಯೂಟರ್ 14 ಜನ ಕಾರ್ಯ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಚ್ಚಿನ ಸಿಬ್ಬಂದಿ: ಗ್ರಾಮಸ್ಥರು ಸಹಕಾರದಿಂದ ಪ್ರತಿದಿನ 7 ರಿಂದ 8 ನೂರು ಜನ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಆಧಾರ್ ನೋಂದಣಿ ಕೇಂದ್ರದ ಗುತ್ತಿಗೆ ಪಡೆದ ಹೈದ್ರಾಬಾದ್ ಮೂಲದ ಫೇನ್ನೊ ಏಜೆನ್ಸಿ ಪ್ರಭಾರಿ ಉಸ್ತವಾರಿ ನವೀನ್ ಸುದ್ದಿಗಾರರಿಗೆ ಹೇಳಿದರು. ಅವಶ್ಯಕವಾದಲ್ಲಿ ಇನ್ನೂ ಮೂರು ಕಂಪ್ಯೂಟರ್ ಹೆಚ್ಚಿನ ಸಿಬ್ಬಂದಿಯನ್ನು ಕಲ್ಪಸಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಸಾಮಾನ್ಯರ ಆಧಾರ್‌ಕಾರ್ಡ್ ನೋಂದಣಿ ಮಾಡಿ ಮುಗಿಸುವುದಾಗಿ ತಿಳಿಸಿದರು.
ನೋಂದಾಯಿಸಲು ತೊಂದರೆ: ಬಳಗಾನೂರು ಗ್ರಾಪಂ ವ್ಯಾಪ್ತಿಯು ಬಹಳ ವಿಸ್ತರವಾಗಿದ್ದು, ಸುತ್ತ ಮುತ್ತಲಿನ ಹಳ್ಳಿ, ಕ್ಯಾಂಪ್ ಮತ್ತು ಗ್ರಾಮದ ಕೆಲ ವಾರ್ಡ್‌ಗಳಿಂದ ಜನರು ಬಂದು ನೋಂದಾಯಿಸಲು ತೊಂದರೆಯಾಗುತ್ತಿದೆ. 4-5 ವಾರ್ಡ್‌ಗಳ ಜನರನ್ನೊಳಗೊಂಡ ಪ್ರಮುಖ ಸ್ಥಳಗಳಲ್ಲೊಂದು ನೋಂದಣಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗಾಗುವ ತೊಂದರೆಗಳನ್ನು ತಪ್ಪಿಸಲು ಅನುಕೂಲ ಮಾಡಿಕೊಡುವಂತೆ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೆದಾರ, ಉಪಾಧ್ಯಕ್ಷ ಎಚ್. ಮಹಾಬಳೇಶ್ವರ, ವಿಎಸ್‌ಎಸ್ ಅಧ್ಯಕ್ಷ ರಾಘವೇಂದ್ರ ಕುಲ್ಕರ್ಣಿ ಸಲಹೆ ನೀಡಿದರು.
ಇದಕ್ಕೆ ಏಜೆನ್ಸಿಯ ಮುಖ್ಯಸ್ಥ ಮಲ್ಲಯ್ಯ ಸಿಂಧನೂರು ಪ್ರತಿಕ್ರಿಯಿಸಿ ಪ್ರಮುಖ ಸ್ಥಳಗಳನ್ನು ಗೊತ್ತುಪಡಿಸಿ ಸೂಚಿಸಿದ್ದಲ್ಲಿ ಆ ಸ್ಥಳಗಳಲ್ಲಿ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗುವುದೆಂದು ಭರವಸೆ ನೀಡಿದರು. ಇನ್ನೊಂದು ವಾರದೊಳಗೆ ಗ್ರಾಮದ ಎಲ್ಲಾ ಜನರ ಆಧಾರ್ ನೋಂದಣಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರವೀಂದ್ರ, ದಿನೇಶ, ರಾಜು, ಇಂದಿರಾ, ಪ್ರಸಾದ, ಅನಿಲ್, ಮಂಜುನಾಥ, ಪಿ.ಜಿ. ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.