ಶಿವಮೊಗ್ಗ

ವರ್ಷ ವೈಭವ-2013 ಕಾರ್ಯಕ್ರಮ

Published On :

ಶಿವಮೊಗ್ಗ: ಶ್ರೀ ವಿಜಯ ಕಲಾನಿಕೇತನ ಸಂಸ್ಥೆ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಶ್ರಯದಲ್ಲಿ ಭಾನುವಾರ ಕುವೆಂಪು ರಂಗಮಂದಿರದಲ್ಲಿ ವರ್ಷ ವೈಭವ-2013 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ವಿಜಯ ಕಲಾನಿಕೇತನ ಸಂಸ್ಥೆಯ ಡಾ ಕೆ.ಎಸ್. ಪವಿತ್ರ ಅವರು ವಿಲಿಯಂ ಸಂಪಾದಿತ ಕ್ರಿಸ್ತಕಾವ್ಯದ, ಕ್ರಿಸ್ತನ ಜನನ ಹಾಗೂ ಆತ ನಡೆದು ಬಂದ ದಾರಿಯ ತುಣುಕುಗಳನ್ನು ನಾಟ್ಯ ಭಂಗಿಗಳಲ್ಲಿ ಪ್ರದರ್ಶಿಸಿದರು.
ಧರ್ಮವೊಂದರ ಹುಟ್ಟಿಗೆ ಕಾರಣನಾದ ಏಸುಕ್ರಿಸ್ತ ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು, ಆತನ ಪುನರುತ್ಥಾನದವರೆಗಿನ ಜೀವನ ಘಟನೆಗಳು, ಧರ್ಮ ಹಾಗೂ ತಾನು ಬೋಧಿಸಿದ ತತ್ವಗಳನ್ನು ಡಾ. ಪವಿತ್ರ ಭರತನಾಟ್ಯದ ಮೂಲಕ ಪ್ರಸ್ತುತ ಪಡಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫಾ.ಮಾರ್ಕ್ ಪ್ಯಾಟ್ರಿಕ್ ಡಿಸಿಲ್ವಾ, ಕ್ರಿಸ್ತಕಾವ್ಯ ಏಸು ಕ್ರಿಸ್ತನಿಗೆ ಸೀಮಿತವಾಗಿಲ್ಲ. ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಬದಲಿಗೆ ಮಾನವೀಯ ಮೌಲ್ಯಗಳನ್ನು ಹೊಂದಿದ ಕಾವ್ಯವಾಗಿದೆ. ಇದನ್ನು ಡಾ. ಕೆ.ಎಸ್. ಪವಿತ್ರ ಅವರು ತಮ್ಮ ಭರತನಾಟ್ಯದ ಮೂಲಕ ಪ್ರಸ್ತುತಪಡಿಸುತ್ತಿರುವುದು ಸಂತಸ ತಂದಿದೆ ಎಂದರು.
 ಅಭಿನಯ ಎಂಬುದು ಸುಲಭವಲ್ಲ. ಅದರಲ್ಲೂ ಸಿನಿಮಾದಲ್ಲಿ ಸುಲಭವಾಗಿ ಅಭಿನಯ ಮಾಡಬಹುದು. ಆದರೆ, ನೃತ್ಯ ರೂಪದ ಮೂಲಕ ಒಂದು ಕಾವ್ಯವನ್ನು ತಿಳಿಸುವುದು ತುಂಬಾ ಕಷ್ಟಕರ. ಅದನ್ನು ಡಾ. ಪವಿತ್ರ ಅವರು ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.