ಶಿವಮೊಗ್ಗ

ಸಿದ್ದರಾಮಯ್ಯ ಪ್ರಮಾಣ: ಸಂಭ್ರಮ

Published On :

ಶಿಕಾರಿಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶಿಕಾರಿಪುರ ಪಟ್ಟಣದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು,ಅಭಿಮಾನಿಗಳ, ಅಹಿಂದಾ ಕಾರ್ಯಕರ್ತರ ಸಂಭ್ರಮ ಮೇರೆ ಮೀರಿತ್ತು.
  ತಮ್ಮ ನೆಚ್ಚಿನ ನಾಯಕ ರಾಜ್ಯದ ಮುಖ್ಯಮಂತ್ರಿಯಾಗುವ ಸಂಭ್ರಮವನ್ನು ಕಣ್ಣಾರೆ ವೀಕ್ಷಿಸಲು ಹಲವರು ಖುದ್ದು ಬೆಂಗಳೂರಿಗೆ ವೈಯುಕ್ತಿಕ ಹಾಗೂ ಪುರಸಭಾ ಸದಸ್ಯ,ತಾ.ಯುವ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ನೇತೃತ್ವದಲ್ಲಿ ತೆರಳಿದ್ದರು.
ಮಾಲಾರ್ಪಣೆ: ಬೆಂಗಳೂರಿಗೆ ಸಾಧ್ಯವಾಗದ ಸಿದ್ದರಾಮಯ್ಯ ಅಭಿಮಾನಿ ಬಳಗದ ಸದಸ್ಯರು ಕಳೆದ ಎರಡು ದಿನದಿಂದ ಈ ಅಭೂತಪೂರ್ವ ಕ್ಷಣಕ್ಕೆ ಕಾತುರರಾಗಿದ್ದು, ಬಸವ ಜಯಂತಿ, ಅಕ್ಷಯ ತದಿಗೆಯ ಶುಭ ಮಹೂರ್ತದಲ್ಲಿ ರಾಜ್ಯದ ದೊರೆಯಾಗುತ್ತಿರುವ ಸಿದ್ದರಾಮಯ್ಯನವರಿಗೆ ಶುಭ ಹಾರೈಸಿ ಬಸ್‌ನಿಲ್ದಾಣದ ಬಳಿಯಲ್ಲಿನ ಕನಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
   ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಕ್ಷಣವನ್ನು ಅತ್ಯಂತ ವಿಶೇಷವಾಗಿ ಆಚರಿಸಲು ಕಳೆದ ಎರಡು ದಿನದಿಂದ ಅಭಿಮಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಪ್ರಯಾಣಿಕರಿಗೆ ಸಿಹಿ ವಿತರಿಸಿದರು.
ಸಂಭ್ರಮ: ಅಹಿಂದಾ ಸಂಘಟನೆಯ ಸದಸ್ಯರು ಪಕ್ಷಾತೀತವಾಗಿ ರಾಜ್ಯದ ನೂತನ ಮುಖ್ಯಮಂತ್ರಿಗಳಿಗೆ ಅಧಿಕಾರ ಸಾಮಾನ್ಯ ಜನತೆಯ ಸಂಕಷ್ಟವನ್ನು ಬಗೆಹರಿಸುವ ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
 ಈ ಸಂದರ್ಭದಲ್ಲಿ ರವಿಕಿರಣ, ಜಕ್ಕಿನಕೊಪ್ಪ ಹುಚ್ರಾಯಪ್ಪ, ಜೇನಿ ಪ್ರಕಾಶ್, ನಗರದ ಮಾಲತೇಶ, ಚಿಟ್ಟೂರು ಮಹಾದೇವ,ಮಾಲತೇಶ ಬೀಡಾ, ಶ್ರೀಧರ, ಎ.ಆರ್. ಮೂರ್ತಿ ಮತ್ತಿತರು ಇದ್ದರು.

ಇಂದು ಮತ ಯಂತ್ರದಲ್ಲಿ ದೋಷ ಕುರಿತ ಪ್ರಾತ್ಯಕ್ಷಿಕೆ
ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿದ್ದು, ಚುನಾವಣಾ ಆಯೋಗ ನಿವಾರಿಸುವಲ್ಲಿ ವಿಫಲವಾಗಿದೆ.
  ಈ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸೈಯದ್ ತಿಳಿಸಿದ್ದಾರೆ.
 ಅವರು ಸೋಮವಾರ ಕನ್ನಡಪ್ರಭದೊಂದಿಗೆ ಮಾತನಾಡಿ, ಕಳೆದ 2 ಚುನಾವಣೆಗಳಿಂದ ಮತಚಲಾವಣೆಗೆ ಬಳಸುತ್ತಿರುವ ಎಲೆಕ್ಟ್ರಾನಿಂಕ್ ಓಟಿಂಗ್ ಮಷಿನ್‌ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಒಬ್ಬ ಅಭ್ಯರ್ಥಿಗೆ ಬಂದಂತಹ ಮತಗಳನ್ನು ಮತ್ತೊಬ್ಬ ಅಭ್ಯರ್ಥಿಗೆ ರವಾನೆಯಾಗುವಂತಹ ಸಾಧ್ಯಗಳಿರುತ್ತವೆ. ಇದನ್ನು ಚುನಾವಣಾ ಆಯೋಗ ಕಂಡು ಹಿಡಿಯಬೇಕಿದೆ ಎಂದು ಒತ್ತಾಯಿಸಿದರು.
ಇಂದು ಪ್ರಾತ್ಯಕ್ಷಿಕೆ: ಈ ಎಲ್ಲಾ ಅಂಶಗಳನ್ನು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲು ಸಿದ್ಧವಾಗಿರುವ ಅವರು, ಕಳೆದ ಎರಡು ವಿಧಾನಸಭೆ, ನಗರಸಭೆ ಮತ್ತು ಒಂದು ಲೋಕಸಭೆ ಚುನಾವಣೆಗಳಿಂದ ಬಳಸುತ್ತಿರುವ ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್‌ನಲ್ಲಿ (ಇವಿಎಂ) ಪ್ರತಿ ಅಭ್ಯರ್ಥಿಗಳ ಚಿಹ್ನೆಗಳ ಮುಂದೆ ಒಂದು ಪ್ರೆಸ್ ಬಟನ್ ಇರುತ್ತದೆ.
ಈ ಪ್ರತಿಯೊಂದು ಬಟನ್‌ಗಳಿಗೆ ಒಂದು ಚಿಪ್ ಮೆಮೋರಿ ಮ್ಯಾನಿಪೋಲೆಟರಿ ಡೈಯಲಿಂಗ್ ಸಿಸ್ಟಂ ಚಿಪ್  ಅಳವಡಿಸಲಾಗುತ್ತದೆ. ಇದಕ್ಕೊಂದು ರೋಟರಿ ಸ್ವೀಚ್ ಇರುತ್ತದೆ. ಇದನ್ನು ತಿರುಗಿಸಿ ಇದರಲ್ಲಿರುವ ಡಿಸೈನರ್ ಡಿಸ್‌ಪ್ಲೇಯನ್ನು ನುರಿತ ತಂತ್ರಜ್ಞಾರಿಂದ ಬದಲಾವಣೆ ಮಾಡಿದರೆ ಸಾಕು. ಒಬ್ಬ ಅಭ್ಯರ್ಥಿಗೆ ನೀಡಿದಂತಹ ಓಟನ್ನು ಮತ್ತೊಬ್ಬ ಅಭ್ಯರ್ಥಿಗೆ ರವಾನೆ ಮಾಡಬಹುದು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.