ವಿಜೃಂಭಣೆಯ ಗಣೇಶೋತ್ಸವ
ಕಪ್ರವಾರ್ತೆ ಶಿರಾಳಕೊಪ್ಪ ಸೆ.10
ಅತಿಯಾದ ಮಳೆ ಸಾಧರಣ ಬೆಳೆ, ಬೆಲೆ ಏರಿಕೆಯ ಮಧ್ಯದಲ್ಲಿ ಗೌರಿ-ಗಣೇಶನ ಹಬ್ಬವನ್ನುಪಟ್ಟಣದ ನಾಗರೀಕರು ಸುತ್ತಮುತ್ತಲ ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.
ಪಟ್ಟಣದ ಕೆಲವರು ಹಾಗು ಗ್ರಾಮಾಂತರ ಪ್ರದೇಶದ ದವರು ಹಬ್ಬದ ಹಿಂದಿನ ದಿನವೇ ಗಣೇಶನನ್ನು ತೆಗೆದು ಕೊಂಡು ಹೋಗಿ ಹಬ್ಬವನ್ನು ಸಂತಸದಿಂದ ಆಚರಿಸಿದರು.
ಕಾಡಿದ ಮಳೆ: ಕೆಲದಿನ ಮಳೆ ಬಿಡುವು ಕೊಟ್ಟು ಗಣೇಶನ ಹಬ್ಬದಲ್ಲಿ ಮಳೆ ಮತ್ತೆ ಪ್ರಾರಂಭವಾಗಿ ಹಬ್ಬಕ್ಕೆ ಸ್ವಲ್ಪ ಅಡೆತಡೆ ಉಂಟು ಮಾಡಿದರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕ ವಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.
ಶಿರಾಳಕೊಪ್ಪ ಪಟ್ಟಣದ ಬಸವೇಶ್ವರ ದೇವಸ್ಥಾನದ ಸಾರ್ವಜನಿಕ ಗಣಪತಿಗೆ ಈ ವರ್ಷ 50ವರ್ಷಗಳಾಗಿ ಅದರ ಅಂಗವಾಗಿ ಗಣಪನಿಗೆ ವಿಶೇಷ ಅಲಂಕಾರ ಜೊತೆಗೆ ವಿಶೇಷಪೂಜೆ ಹಮ್ಮಿಕೊಳ್ಳಲಾಗಿತ್ತು.
ಗಣಪತಿಯನ್ನು ವಿಶೇಷವಾದ ಮೆರವಣಿಗೆಯಲ್ಲಿ ತರಲಾಯಿತು, ವಿಶೇಷವಾದ ವಾದ್ಯಗಳೊಂದಿಗೆ ನೂರಾರು ಯುವಕರು ಪಾಲ್ಗೊಂಡು ನಂತರ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.
11ದಿನಗಳ ವಿಶೇಷಪೂಜೆ ಹಾಗು ಕಾರ್ಯಕ್ರಮಗಳನ್ನು ನಡೆಸಲು ಸಮಿತಿಯನ್ನು ರಚಿಸಲಾಗಿದೆ. ಪಟ್ಟಣದಲ್ಲಿ ಹಲವಾರು ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸೊರಬರಸ್ತೆಯ ಹಿಂದು ಸಭಾ ಗಣಪತಿ, ಉಡಚಲಮ್ಮದೇವಿ ಸಮಿತಿಯ ಗಣಪತಿ,ದುರ್ಗಮ್ಮ ದೇವಿ ಗಣಪತಿ, ಪಂಪಹೌಸ್ಗ್ಣಪತಿ ಹಾಗು ಇನ್ನೂ ಹಲವಾರು ಗಣಪತಿಗಳನ್ನು ಪ್ರತಿಷ್ಠಾಪಿಸಿ ಸಂತಸದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಪ್ರತ್ಯೇಕ ವ್ಯವಸ್ಥೆ: ಅಸಮಾಧಾನ
ಶಿಕಾರಿಪುರ: ಕಾಟಾಚಾರಕ್ಕೆಂದು ಗಣೇಶ ಮೂರ್ತಿ ವಿಸರ್ಜನೆಗೆ ನಿರ್ಮಿಸಲಾದ ತೊಟ್ಟಿಯಲ್ಲಿ ಕಲ್ಮಶದ ಜತೆಗೆ ಸಮೀಪದ ಶೌಚಾಲಯದ ನೀರು ಸೇರುವ ಅಪಾಯವಿದ್ದು ಈ ಕೂಡಲೇ ಗುಂಡಿಯನ್ನು ಮುಚ್ಚಿ ಶ್ರೀ ಹುಚ್ಚೂರಾಯಸ್ವಾಮಿ ಕೆರೆಯಲ್ಲಿ ಪಟ್ಟಣದ ಗಣಪತಿ ವಿಗ್ರಹಗಳನ್ನು ವಿಸರ್ಜಿಸಲು ಅನುಮತಿ ನೀಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಸಹಕರಿಸುವಂತೆ ಪಟ್ಟಣದ ರಾಘವೇಂದ್ರ ಬಡಾವಣೆ ವಿನಾಯಕ ಸೇವಾ ಸಮಿತಿಯ ಸದಸ್ಯರು,ಅದ್ಯಕ್ಷ ಹಾಗೂ ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್ ನೇತೃತ್ವದಲ್ಲಿ ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಹಾಗೂ ತಾ.ಯುವ ಕಾಂಗ್ರೆಸ್ ಅದ್ಯಕ್ಷ ಮಹೇಶ್ ಹುಲ್ಮಾರ್,ಕಳೆದ ಹಲವು ದಶಕದಿಂದ ಪಟ್ಟಣದ ಶ್ರೀ ಹುಚ್ಚೂರಾಯನ ಕೆರೆಯಲ್ಲಿ ಗಣಪತಿ ವಿಸರ್ಜಿಸುವ ಪರಿಪಾಠ ಬೆಳೆದು ಬಂದಿದ್ದು ಈಗ ಗಣಪತಿ ವಿಸರ್ಜನೆಗೆ ಪ್ರತ್ಯೇಕ ಗುಂಡಿಯನ್ನು ಕಾಟಾಚಾರಕ್ಕೆಂದು ನಿರ್ಮಿಸಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ ಎಂದರು.
ನೂತನ ವ್ಯವಸ್ಥೆಗೆ ಕ್ರಮ: ಮನವಿ ಸ್ವೀಕರಿಸಿದ ಪುರಸಭಾ ಮುಖ್ಯಾಧಿಕಾರಿ ಮನೋಹರ್ ಅಧಿಕಾರಿಗಳ ತುರಾತುರಿಯ ವರ್ತನೆಯಿಂದಾಗಿ ತೊಟ್ಟಿ ನಿರ್ಮಾಣ ಅವೈಜ್ಞಾನಿಕವಾಗಿದ್ದು ನೂತನ ವ್ಯವಸ್ಥೆಗೆ ಚಿಂತನೆಗೆ ಪರಿಶೀಲಿಸುವ ಬರವಸೆ ನೀಡಿದರು.
ಈ ಸಂದರ್ಭದಲ್ಲಿ ವಿನಾಯಕ ಸೇವಾ ಸಮಿತಿಯ ಸಂದೀಪ್, ಜಗದೀಶ್,ಪುನೀತ್, ಬಸವರಾಜ್, ಬೆಳಕೇರಪ್ಪ, ಹೇಮಂತ್, ಪ್ರಶಾಂತ್, ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಸ್ಥಳೀಯರು ಸೇರಿದಂತೆ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

