ತುಮಕೂರು

ವೆಂಕಟೇಶಗುಪ್ತ ನೇತ್ರದಾನ

Published On :

ತುಮಕೂರು: ಇಲ್ಲಿನ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿ ಸಪ್ತಗಿರಿ ಕಾಫಿವರ್ಕ್ಸ್ ಮಾಲೀಕ ಹೆಚ್.ವಿ. ವೆಂಕಟೇಶಗುಪ್ತ ಅವರು ನಿಧನರಾಗಿದ್ದು ಎರಡು ಕಣ್ಣುಗಳನ್ನು ಕುಟುಂಬದವರು ದಾನ ನೀಡಿದ್ದಾರೆ.
ಎನ್‌ಎಸ್‌ಐ ಕಲೆಕ್ಷನ್ ಸೆಂಟರ್ ಮುಖ್ಯಸ್ಥ ಎನ್.ಎನ್. ಶ್ರೀಧರ್, ನಾಗದೀಶ್ ಎನ್.ಎಸ್., ಹಾಗೂ ತುಮಕೂರು ಡಾ.ಮಹದೇವಪ್ಪ ಕಣ್ಣಿನ ಆಸ್ಪತ್ರೆ ಹೆಸರಾಂತ ನೇತ್ರತಜ್ಞ ಡಾ. ಸಂಜಯ್.ಎಂ ಸಹಕಾರದೊಂದಿಗೆ ಪಡೆದ ಎರಡು ನೇತ್ರಗಳನ್ನು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಈ ಕಾರ್ಯದಿಂದ ಇಬ್ಬರು ದೃಷ್ಟಿ ಹೀನರಿಗೆ ದೃಷ್ಟಿ  ಕೊಟ್ಟಂತಾಗಿ ಪಡೆದ ಭಾಗ್ಯವಂತರು ಟ್ರಸ್ಟ್ ಸದಸ್ಯರು ಮೃತರಿಗೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.
ಇದೇ ರೀತಿ ನೇತ್ರದಾನ ಹಾಗೂ ದೇಹ ದಾನ  ಮಾಡುವವರು ಸ್ಥಳೀಯ ತಜ್ಞರನ್ನಾಗಲಿ ಅಥವಾ ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ. ಕಲೆಕ್ಷನ್ ಸೆಂಟರ್, ಎನ್.ಎಸ್. ಜ್ಯೂಯಲರಿ ಪ್ಯಾಲೆಸ್, ಬಿ.ಹೆಚ್. ರಸ್ತೆ, ತುಮಕೂರು ದೂ. 0816-2273479 ಸಂಪರ್ಕಿಸಲು ಕೋರಲಾಗಿದೆ.

ತಿಪಟೂರು: ಶಾಲೆಯಲ್ಲಿ ಕಳವು
ತಿಪಟೂರು:
ತಾಲೂಕಿನ ಹೊನ್ನವಳ್ಳಿ ಹೋಬಳಿ ಮಣಕೀಕೆರೆಯ ಭುವನೇಶ್ವರಿ ಪ್ರೌಢಶಾಲೆಯಲ್ಲಿ ನಿನ್ನೆ ರಾತ್ರಿ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತು ಕಳ್ಳತನವಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿದ್ದ ಕಂಪ್ಯೂಟರ್, ಜೆರಾಕ್ಸ್ ವಿಷನ್, 50 ಕೆ.ಜಿ.ಅಕ್ಕಿ ಚೀಲಗಳು ಮತ್ತು 25 ಕೆ.ಜಿ.ಬೇಳೆ ಚೀಲವನ್ನು ಕೊಠಡಿಯ ಬೀಗ ಒಡೆದು ದರೋಡೆ ಮಾಡಲಾಗಿದೆ. ಈ ಸಂಬಂಧ ಸಂಸ್ಥೆಯು ನೀಡಿದ ದೂರಿನ ಮೇರೆಗೆ ಹೊನ್ನವಳ್ಳಿ ಠಾಣಾ ಪಿ.ಎಸ್.ಐ ಸುಂದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ದರೋಡೆ  ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಕಳೆದ ವಾರ ಇದೇ ಗ್ರಾಮದ ಪಕ್ಕದ ಭೈರಾಪುರ ಗ್ರಾಮದಲ್ಲಿ ಮೂರು ಮನೆಗಳಿಗೆ ದರೋಡೆ ಕೋರರು ನುಗ್ಗಿ ಸಾವಿರಾರು ನಗದು,ಒಡವೆಗಳನ್ನು ದೋಚಿದ್ದ ಘಟನೆ ನಡೆದಿದ್ದು, ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಹೆಚ್ಚಾಗಿ ನಡೆಯತೊಡಗಿದ್ದು, ಗ್ರಾಮಾಂತರ ಪೊಲೀಸರು ಕರ್ತವ್ಯದಲ್ಲಿ ಸಕ್ರಿಯರಾಗಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.