ಪಡಿತರ ಬೇಕೇ? ಎಸ್ಎಂಎಸ್ ಮಾಡಿ...
ತುರುವೇಕೆರೆ: 2010ರ ಪೂರ್ವದಲ್ಲಿ ವಿತರಣೆ ಮಾಡಲಾಗಿರುವ ಭಾವಚಿತ್ರ ಸಹಿತ ಪಡಿತರ ಚೀಟಿಗಳನ್ನು ನವೀಕರಣ ಮಾಡಲು ಈಗಾಗಲೇ ಸೂಚಿಸಲಾಗಿತ್ತು.
ಆದರೆ, ಹಲವಾರು ಮಂದಿ ಇದುವರೆಗೂ ನವೀಕರಣ ಮಾಡಿಸಿರುವುದಿಲ್ಲ. ಇದರಿಂದಾಗಿ ಪಡಿತರ ವಿತರಣೆ ಮಾಡುವುದು ಅಸಾಧ್ಯವಾಗಿದೆ. ಆದ್ದರಿಂದ ನವೀಕರಣ ಮಾಡಿಸದೇ ಇರುವವರು ಕೂಡಲೇ ತಮ್ಮ ಹಿಂದಿನ ಪಡಿತರ ಚೀಟಿಯ ಸಂಖ್ಯೆಯನ್ನು ಎಸ್ಎಂಎಸ್ ಮಾಡುವ ಮೂಲಕ ಪಡಿತರ ಪಡೆಯಲು ಅರ್ಹರಾಗಿ ಎಂದು ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಪಿ.ಮಂಜೇಗೌಡ ಹಾಗೂ ಆಹಾರ ನಿರೀಕ್ಷಕ ಶಿವಶಂಕರ್ ಗ್ರಾಹಕರಲ್ಲಿ
ವಿನಂತಿಸಿಕೊಂಡಿದ್ದಾರೆ.
ಎಸ್ಎಂಎಸ್ ಕಳಿಸಿರುವವರು ತಮ್ಮ ನ್ಯಾಯಬೆಲೆ ಅಂಗಡಿಯಲ್ಲಿ ಎಸ್ಎಂ ಎಸ್ ಕಳಿಸಿರುವ ಕುರಿತು ಮಾಹಿತಿ ನೀಡುವುದು. ತಮ್ಮ ಪಡಿತರ ಚೀಟಿಯನ್ನು ಎಸ್ಎಂಎಸ್ ಮೂಲಕ ನವೀಕರಣ ಮಾಡಲು ಹೀಗೆ ಮಾಡಿ- ಖಈಖಊಃ ಎಂದು ಟೈಪ್ ಮಾಡಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಸಂಖ್ಯೆ 9212357123 ಗೆ ಸಂದೇಶ ಕಳುಹಿಸಲು ಸೂಚಿಸಲಾಗಿದೆ. ಸದ್ಯಕ್ಕೆ ಬಿಪಿಎಲ್ ಕಾರ್ಡ್ ನವರಿಗೆ ಮಾತ್ರ ಪಡಿತರ ದೊರೆಯುತ್ತಿದೆ. ಅಂತ್ಯೋದಯ ಕಾರ್ಡ್ಗೆ ಕೆಜಿ ರು. 1 ನಂತೆ 29 ಕೆಜಿ ಅಕ್ಕಿ, 2 ನಂತೆ 6 ಕೆ ಜಿ ಗೋಧಿ, ಬಿಪಿಎಲ್ ವರ್ಗಕ್ಕೆ ಸೇರಿದ ಒಬ್ಬ ಕಾರ್ಡ್ದಾರನಿಗೆ 10 ಕೆಜಿ ಅಕ್ಕಿ, ಇಬ್ಬರಿಗೆ 20 ಕೆಜಿ ಅಕ್ಕಿ, ಮೂರಕ್ಕಿಂತ ಮೇಲ್ಪಟ್ಟವರಿಗೆ 30 ಕೆ ಜಿ ಅಕ್ಕಿ ನೀಡಲಾಗುವುದು. ಪ್ರತಿ ರು. 1ರಂತೆ ಕೆಜಿ ಅಕ್ಕಿಗೆ ನಂತೆ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಬಿಪಿಎಲ್ ಕಾರ್ಡ್ದಾರರಿಗೆ ಗೋಧಿ ವಿತರಣೆ ಇರುವುದಿಲ್ಲ. ಅನಿಲ ರಹಿತ ಪಡಿತರ ಚೀಟಿದಾರರಿಗೆ ತಲಾ ಲೀಟರ್ ಸೀಮೆಎಣ್ಣೆಯನ್ನು ಪ್ರತಿ ಲೀಟರ್ಗೆ 16.20 ಪೈಸೆಯಂತೆ ವಿತರಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

