ಡಾ.ಅಜ್ಗರ್ ಬೇಗ್ಗೆ ಅಭಿನಂದನೆ
ಶಿರಾ: ಶಿರಾ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಅಜ್ಗರ್ ಬೇಗ್ ಅವರನ್ನು ರಾಜ್ಯ ಸರ್ಕಾರವು ಹಜ್ ಯಾತ್ರಿಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಸೌದಿ ಅರೇಬಿಯಾ ದೇಶಕ್ಕೆ ಕಳುಹಿಸುತ್ತಿರುವ ಶುಭ ಸಂದರ್ಭದಲ್ಲಿ ಡಾ.ಅಜ್ಗರ್ ಬೇಗ್ ಅವರನ್ನು ಸಹರಾ ಸೋಷಿಯಲ್ ವೆಲ್ಫೇರ್ ಸೇವಾ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಡಾ.ಅಬ್ದುಲ್ ಅಜೀಂ, ಮುಸ್ತಾಕ್, ಅಬ್ದುಲಲ್ಕರೀಂ, ಸಾಲೇಹ ಸಲಾಮತ್ ಮತ್ತಿತರರು ಹಾಜರಿದ್ದರು.
ಒಲಂಪಿಯಾಡ್ ಪರೀಕ್ಷೆ
ಗುಬ್ಬಿ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಒಲಂಪಿಯಾಡ್ ಪರೀಕ್ಷೆಗಳನ್ನು ಆ.31 ರಂದು ನಡೆಸಲಾಗುತ್ತಿದ್ದು ಅಂದು ಶಾಲೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6 ಮತ್ತು 9 ನೇತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ವಿಜ್ಞಾನ ಮತ್ತು 12 ರಿಂದ 1 ಗಂಟೆಯವರೆಗೆ ಗಣಿತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅಯಾ ಶಾಲಾ ಮುಖ್ಯ ಶಿಕ್ಷಕರುಗಳು ನಿಗದಿತ ಸಮಯಕ್ಕೆ ಪರೀಕ್ಷೆಗಳನ್ನು ನಿಯಮಾನುಸಾರ ನಡೆಸುವಂತೆ ಸೂಚಿಸಿದ್ದಾರೆ.
ವಿಚಾರ ಸಂಕಿರಣ
ತುಮಕೂರು: ತುಮಕೂರಿನ ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಭೌತಶಾಸ್ತ್ರ ಹಾಗೂ ವಿದ್ಯುನ್ಮಾನ ವಿಭಾಗದ ವತಿಯಿಂದ ಯುಜಿಸಿ ಪ್ರಾಯೋಜಿತ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಆ. 30 ಹಾಗೂ 31 ರಂದು ಹಮ್ಮಿಕೊಳ್ಳಲಾಗಿದ ತುಮಕೂರು ವಿವಿ ಕುಲಪತಿ ಡಾ. ರಾಜಾಸಾಬ್ ಉದ್ಘಾಟಿಸಲಿದ್ದಾರೆ. ಬೆಂಗಳೂರು ಭಾರತೀಯ ವಿಜ್ಞಾನ ವಿದ್ಯಾಕೇಂದ್ರದ ಎಲೆಕ್ಟ್ರಿಕಲ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಪ್ರೊ. ಡಾ. ಟಿ. ಶ್ರೀನಿವಾಸ್ ಫೈಬರ್ ಆಪ್ಟಿಕ್ ಕಮ್ಯುನಿಕೇಷನ್ ಎಂಬ ವಿಷಯದ ಕುರಿತಂತೆ ಮುಖ್ಯ ಭಾಷಣ ಮಾಡಲಿದ್ದಾರೆ.
ಸಾಮಾನ್ಯ ಸಭೆ
ತುಮಕೂರು: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯನ್ನು ಆ.30 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ತಾಲೂಕು ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಜಯಮ್ಮ ತಿಮ್ಮಪ್ಪ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಅರ್ಜಿ ಆಹ್ವಾನ
ತುಮಕೂರು: ಮಿಪ್ಸೆಡ್ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕ, ಯುವತಿಯರಿಗಾಗಿ ವಸತಿಯುತ ಉಚಿತ 45 ದಿನಗಳ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್ ಮತ್ತು 30 ದಿನಗಳ ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಷನ್ ತರಬೇತಿಯನ್ನು ನೀಡುವ ಸಲುವಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ ವರ್ಕಿಂಗ್ ಮತ್ತು ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಷನ್ ತರಬೇತಿಗಾಗಿ ಕನ್ನಡ ಓದಲು ಮತ್ತು ಬರೆಯಲು ಬರುವ 18 ರಿಂದ 45 ವಯೋವುತಿಯೊಳಗಿನ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿರುವವರು ಮಿಪ್ಸೆಡ್ ತರಬೇತಿ ಸಂಸ್ಥೆ, 1ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕುವೆಂಪು ವೃತ್ತ, ಕುವೆಂಪು ನಗರ, ಭುವಿ ಆಯುರ್ವೇದ್ ಆಸ್ಪತ್ರೆ ಹಿಂಭಾಗ, ತುಮಕೂರು ಇಲ್ಲಿ ಸೆ.5 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಗಾಂಜಾ ವಶ
ಬೇಲೂರು: ತಾಲೂಕಿನ ನಿಟ್ಟೂರು ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಸುಮಾರು 6 ಲಕ್ಷಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಅಧರಿಸಿ ಬೇಲೂರು ಪೊಲೀಸರು ಬುಧವಾರ ಮಧ್ಯಾಹ್ನ ಪಟ್ಟಣದಿಂದ 5 ಕಿ.ಮೀ. ದೂರದಲ್ಲಿರುವ ನಿಟ್ಟೂರು ಗ್ರಾಮದ ಈರೇಗೌಡ ಎಂಬುವರಿಗೆ ಸೇರಿದ ಜಮೀನಿಗೆ ತೆರಳಿದಾಗ ಗಾಂಜಾ ಗಿಡ ಪತ್ತೆಯಾಯಿತು.
ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಗುಬ್ಬಿ: ಬಸ್ ಪಾಸ್ ಪಡೆದಿದ್ದರೂ ಸಹ ಶಾಲಾ ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ತಲುಪಲು ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು ಕೂಡಲೇ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು. ತಾಲೂಕಿನ ಗೋಪಾಲಪುರ ಗ್ರಾಮದ ಗೇಟ್ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟಿಸಿದರು. ಗುಬ್ಬಿ-ಸಿ.ಎಸ್.ಪುರ ಮಾರ್ಗದಲ್ಲಿ ನಿಗದಿತ ಸಮಯಕ್ಕೆ ಬಸ್ಗಳಿಲ್ಲ. ಆಗಿಂದಾಗ್ಗೆ ಬರುವ ಬಸ್ಗಳು ಸಿ.ಎಸ್.ಪುರ ಮತ್ತು ಹಿಂಡಿಸಿಗೆರೆಯಲ್ಲಿಯೇ ಭರ್ತಿಯಾಗಿರುತ್ತವೆ. ಗುಬ್ಬಿ, ತುಮಕೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ. ಬಸ್ ಪಾಸ್ ಪಡೆದಿರುವ ನೂರಾರು ವಿದ್ಯಾರ್ಥಿಗಳು ಕುನ್ನಾಲ, ಕೆ.ಜಿ.ಟೆಂಪಲ್, ಮರಾಠಿಪಾಳ್ಯ, ನೆರಳೆಕಟ್ಟೆ, ಸುರುಗೇನಹಳ್ಳಿ, ಕೊಪ್ಪಗೇಟ್, ಗೋಪಾಲಪುರ, ತೋಟಸಾಗರದ ಹಲವು ವಿದ್ಯಾರ್ಥಿಗಳು ತುಂಬಿದ ಬಸ್ಗಳಲ್ಲಿ ಜೋತು ಬಿದ್ದು ಹೋಗಬೇಕಿದೆ. ರಸ್ತೆ ಹದಗೆಟ್ಟಿರುವುದರಿಂದ ಆಟೋ, ಸೈಕಲ್ಳಲ್ಲಿ ತೆರಳುವುದು ಭಯತರುತ್ತದೆ. ಶಾಲಾ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

