4 ರಂದು ಕ್ಯಾಂಪಸ್ ಸಂದರ್ಶನ
ತುಮಕೂರು: ಸಿದ್ದಗಂಗಾ ಐಟಿಐನಲ್ಲಿ ಸೆ. 4 ರಂದು ಬೆಳಗ್ಗೆ 11 ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಾಟಾಗಿದೆ ಎಂದು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ ಎನ್. ಸುನಿಲ್ ತಿಳಿಸಿದ್ದಾರೆ. ಫಿಟ್ಟರ್ ವೃತ್ತಿಗೆ 18 ರಿಂದ 22 ವರ್ಷದೊಳಗಿನವರಿಗೆ ಸಂದರ್ಶನ ಏರ್ಪಾಡಾಗಿದೆ.
ಬಂದೂಕು ತರಬೇತಿ
ತುಮಕೂರು: ಜಿಲ್ಲಾ ರೈಫಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗುವ ಸಾರ್ವಜನಿಕ ಬಂದೂಕು ತರಬೇತಿ ಶಿಬಿರದ 37ನೆಯ ತಂಡಕ್ಕೆ ಶಿಬಿರಾರ್ಥಿಗಳಾಗಿ ಈಗಾಗಲೇ 50 ಮಂದಿ ಅರ್ಜಿ ಸಲ್ಲಿಸಿದ್ದಾರೆ. ತಂಡದ ತರಬೇತಿ ಶೀಘ್ರದಲ್ಲೇ ಆರಂಭವಾಗಲಿದೆ. ಅರ್ಜಿ ನೀಡದೇ ಇದ್ದು, ಈಗ ಆಸಕ್ತರಾಗಿರುವವರು ಸಹ ಈಗಲೂ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ 15 ದಿನಗಳ ಕಾಲ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಅರ್ಜಿ ಶುಲ್ಕ 5. ತರಬೇತಿ ಶುಲ್ಕ 500. 3 ಭಾವಚಿತ್ರಗಳೊಂದಿಗೆ ಆಗಮಿಸುವಂತೆ ಕಾರ್ಯದರ್ಶಿ ಬಿ.ಜಿ. ಶ್ರೀನಿವಾಸರಾವ್(ಮೊ. 9845209120) ಕೋರಿದ್ದಾರೆ.ಶ್ರೀಕೃಷ್ಣ ಚಿತ್ರಮಂದಿರದಲ್ಲಿ ಅರ್ಜಿ ದೊರಕಲಿವೆ.
ಇಂದು ಶ್ರೀಕೃಷ್ಣ ವೇಷ ಸ್ಪರ್ಧೆ
ತುಮಕೂರು: ಸಂಸ್ಕಾರ ಭಾರತಿ ತುಮಕೂರು ಶಾಖೆ ವತಿಯಿಂದ ತುಮಕೂರಿನ ಶ್ರೀರಾಮ ಮಂದಿರದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಸೆ. 1 ರಂದು ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಲಾಗಿದೆ. ಮೊಸರು ಕುಡಿಕೆ ಒಡೆಯುವುದು, ಮಲ್ಲಕಂಬ ಹತ್ತುವುದು, ಮರಳಿನಲ್ಲಿ ವಿಗ್ರಹ ಶೋಧ ಸ್ಪರ್ಧೆ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಸೋಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎ. ಸತ್ಯನಾರಾಯಣ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಕುಮುದಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶ್ವಾಸ್ಗೆ ಡಾಕ್ಟರೇಟ್
ತುಮಕೂರು: ಬೆಂಗಳೂರು ಹಿಮಾಲಯ ಡ್ರಗ್ಸ್ ಕಂಪನಿ ಉದ್ಯೋಗಿ, ಎಸ್ಐಟಿ ಎಂಬಿಎ ಪದವೀಧರ ಎಂ. ವಿಶ್ವಾಸ್ ಅವರಿಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿನ ಸಾಯಿನಾಥ್ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಪ್ರಸಕ್ತ ಮಾಹಿತಿ ಯುಗದಲ್ಲಿ ಪರಿಣಾಮಕಾರಿ ಆಡಳಿತ ನಿರ್ವಹಣೆಗಾಗಿ ಮಾಹಿತಿ ತಂತ್ರಜ್ಞಾನ ಸಂವಹನದ ಸಮರ್ಪಕ ಬಳಕೆ-ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್ಡಿ ಪ್ರಬಂಧ ಮಂಡಿಸಿದ್ದರು.
ಇಂದು ಕುಂಭಾಭಿಷೇಕ
ತುಮಕೂರು: ತಾಲೂಕಿನ ಎಂ. ಗೊಲ್ಲಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೆ. 1ರಂದು ಸಹಸ್ರ ಕುಂಭಾಭಿಷೇಕ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಗೆ ಕುಂಭಾಭಿಷೇಕ, ಮಧ್ಯಾಹ್ನ 1.30 ಕ್ಕೆ ಮಹಾ ಮಂಗಳಾರತಿ ಏರ್ಪಡಿಸಲಾಗಿದೆ.
'ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ'
ಹುಳಿಯಾರು: ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಶ್ರೀರಾಂಪುರದ ಸುರೇಶ್ಬಾಬು ತಿಳಿಸಿದರು. ಹುಳಿಯಾರಿನ ವಾಸವಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ನಡೆದ ಪುಟಾಣಿ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಸಣ್ಣ ಘಟನೆಗಳೂ ಅಪಾರ ಪರಿಣಾಮನ್ನುಂಟು ಮಾಡುತ್ತವೆ. ಪೋಷಕರು ಮಕ್ಕಳು ಮಾಡುವ ಸಣ್ಣ- ಪುಟ್ಟ ತಪ್ಪುಗಳಿಗೆ ಅವರನ್ನು ದಂಡಿಸುವ ಬದಲು ಪ್ರೀತಿಯಿಂದ ಅವರ ಮನಸ್ಸನ್ನು ಅರ್ಥ ಮಾಡಿಕೊಡಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್, ನಿರ್ದೇಶಕ ಚುರುಮುರಿ ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ಮಹೇಶ್, ರಮೇಶ್, ತೀರ್ಪುಗಾರರಾದ ಆಶಾ, ಶಿಲ್ಪಾ, ಜ್ಯೋತಿ, ಶಿಕ್ಷಕರಾದ ಗಂಗಾಧರಯ್ಯ, ಮಂಜುನಾಥ್ ಸೇರಿದಂತೆ ಸಿಬ್ಬಂದಿ ಇದ್ದರು. ರಂಗುರಂಗಿನ ವೇಷ ಧರಿಸಿ ಕೈಯಲ್ಲಿ ಕೊಳಲು ಹಿಡಿದ ಕೃಷ್ಣ, ರುಕ್ಮಿಣಿ, ರಾಧಾ ವೇಷಧಾರಿ ಮಕ್ಕಳು ನೋಡುಗರ ಗಮನ ಸೆಳೆದರು.
ಅರ್ಜಿ ಆಹ್ವಾನ
ತಿಪಟೂರು: ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದೆಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ವಿಶ್ವಕರ್ಮ ಪತ್ತಿನ ಸಹಕಾರ ಸಂಘ, ಎಸ್ಕೆಪಿಟಿ ರಸ್ತೆ ದೊಡ್ಡಪೇಟೆ ಇಲ್ಲಿಗೆ ಸೆ. 17ರೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ. 08134-252229 ಅಥವಾ ಮೊ. 9916775922 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

