ತುಮಕೂರು

ಗಿರಿಜಮ್ಮ ನೇಮಕ

Published On :

ತುಮಕೂರು: ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿ ತುಮಕೂರಿನ ಗೋಕುಲ ಬಡಾವಣೆಯ ನಿವಾಸಿ ಗಿರಿಜಮ್ಮ ಅವರನ್ನು ನೇಮಕ ಮಾಡಿರುವುದಾಗಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಎ. ಜೊಲ್ಲೆ ತಿಳಿಸಿದ್ದಾರೆ.

ಜಿಪಂ ಅಧ್ಯಕ್ಷೆಗೆ ಸನ್ಮಾನ
ತುಮಕೂರಿನ ಜಿಲ್ಲಾ ಮಹಿಳಾ ಸಂರಕ್ಷಣಾ ವೇದಿಕೆ ವತಿಯಿಂದ ಏರ್ಪಾಟಾಗಿದ್ದ ಪ್ರಥಮ ವಾರ್ಷಿಕೋತ್ಸವದಲ್ಲಿ ನೂತನ ಜಿಪಂ ಅಧ್ಯಕ್ಷೆ ಸಾಕಮ್ಮ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.ತಾಹಿರಾ ಕುಲ್ಸುಂ, ಪದಾಧಿಕಾರಿಗಳು, ತುಮಕೂರು ನಗರಸಭಾಧ್ಯಕ್ಷೆ ಗೀತಾ ರುದ್ರೇಶ್, ಲಲಿತಾ ಮಲ್ಲಪ್ಪ, ಬೆಳ್ಳಿ ಲೋಕೇಶ್, ಮಂಜುಳಾ ದೇವಿ ಇತರರಿದ್ದರು.

ಗುರುರಕ್ಷಾ ಕಾರ್ಯಕ್ರಮ
ತುಮಕೂರು:
ಶಿವಡಂಗುರ ಪತ್ರಿಕೆ ವತಿಯಿಂದ ಲೋಕಕಲ್ಯಾಣಕ್ಕಾಗಿ ಡಿ. 28, 29, 30 ರಂದು ಧನುರ್ಮಾಸದ ಅಂಗವಾಗಿ ಇಷ್ಟಲಿಂಗ ಮಹಾಪೂಜೆ ಹಾಗೂ ಗುರುರಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಚಿಕ್ಕಪೇಟೆಯಲ್ಲಿರುವ ವೀರಭದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ 6 ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅದ್ಧೂರಿ ಹನುಮಜಯಂತಿ
ಹುಳಿಯಾರು:
ಪಟ್ಟಣದ ಮಾರುತಿ ನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ  ದೇವಾಲಯ ಜಿರ್ಣೋದ್ಧಾರ ಸಮಿತಿ ಹಾಗೂ ಭಕ್ತಾದಿಗಳಿಂದ ಸ್ವಾಮಿಯ ಐದನೇ ವರ್ಷದ ಅದ್ಧೂರಿ ಹನುಮಜಯಂತಿ ಮಹೋತ್ಸವ ಹಾಗೂ ಪ್ರಥಮ ವರ್ಷದ ಆಂಜನೇಯಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಅಪಾರ ಭಕ್ತರು ಜಯಘೋಷದೊಂದಿಗೆ  ರಥಕ್ಕೆ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆದು ಪುನೀತ ಭಾವ ಹೊಂದಿದರು. ಅಲಂಕೃತ ರಥವನ್ನು ದೇವಾಲಯದ ಮುಂಭಾಗದಿಂದ ರಾಮಗೋಪಾಲ್ ಸರ್ಕಲ್‌ವರೆಗೆ  ಎಳೆದು ತಂದರು. ಹನುಮನ ಮೂರ್ತಿಗೆ ಮಾಡಲಾಗಿದ್ದ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ದೇವಾಲಯದ ಆವರಣದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ದಾವಣಗೆರೆಯ  ಬಸವಕಲಾ ತಂಡದವರಿಂದ ನಂದಿಧ್ವಜಕುಣಿತ, ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದವರಿಂದ ಹಾಲಕ್ಕಿ ಕುಣಿತ, ಹುಲಿವೇಷ, ಮಂಡ್ಯದ ಸವಿತಾ ಮಹಿಳಾ ಕಲಾತಂಡದಿಂದ ಮಹಿಳಾ ಪೂಜಾ ಕುಣಿತ, ಹುಲಿಹಳ್ಳಿ ಬಸವಜ್ಯೋತಿ ಕಲಾತಂಡದವರಿಂದ  ಮಹಿಳಾವೀರಗಾಸೆ, ಮೈಸೂರು-ಚಾಮರಾಜನಗರದ ಕಲಾತಂಡದವರಿಂದ ತಮಟೆ, ನಗಾರಿ ವಾದ್ಯ, ಬೆಂಗಳೂರಿನ ಅಣ್ಣಮ್ಮನ ತಮಟೆ ವಾದ್ಯ,ಸಾಗರದ ಐಸಿರಿ ಕಲಾತಂಡದವರಿಂದ ಮಹಿಳಾಡೊಳ್ಳು ಕುಣಿತ, ಮಹಿಳಾ ಕೋಲಾಟ, ಲಂಬಾಣಿನೃತ್ಯ, ಹುಳಿಯಾರಿನ ತಂಡದವರಿಂದ ನಾದಸ್ವರ  ವಿವಿಧ ಜನಪದ ಕಲಾಪ್ರಕಾರಗಳು ರಥೋತ್ಸವಕ್ಕೆ ಮೆರಗು ನೀಡಿದವು. ಉತ್ಸವದುದ್ದಕ್ಕೂ ನಡೆದ  ಮದ್ದಿನ ಪ್ರದರ್ಶನವಿದ್ದು ಮೈನವಿರೇಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.